

ಇಂದೋರ್: ಆರಂಭಿಕ ಪಂದ್ಯದಲ್ಲಿ ಗೆದ್ದು 2024ರ ತವರು ಋತುವಿನ ಅಭಿಯಾನದಲ್ಲಿ ಶುಭಾರಂಭ ಕಂಡಿರುವ ಭಾರತ ತಂಡ ಸರಣಿ ಜಯಿಸುವ ವಿಶ್ವಾಸದಲ್ಲಿದೆ. ಪ್ರವಾಸಿ ಅ್ಘಾನಿಸ್ತಾನ ವಿರುದ್ಧದ 2ನೇ ಟಿ20 ಪಂದ್ಯ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆಗಮನ ತಂಡಕ್ಕೆ ಮತ್ತಷ್ಟು ಶಕ್ತಿ ತುಂಬಿದೆ.
ಮುಂಬರುವ ಟಿ20 ವಿಶ್ವಕಪ್ಗೆ ಸಿದ್ಧತೆ ನಡೆಸಲು ಟೀಮ್ ಇಂಡಿಯಾ ಪಾಲಿಗೆ ಈ ಸರಣಿ ಕೊನೇ ಅವಕಾಶ ಎನಿಸಿದ್ದು, ರೋಹಿತ್ ಶರ್ಮ ಬಳಗದಿಂದ ಮತ್ತೊಂದು ಬಲಿಷ್ಠ ನಿರ್ವಹಣೆ ನಿರೀಸಲಾಗುತ್ತಿದೆ. ಪ್ರಮುಖವಾಗಿ ವಿಶ್ವಕಪ್ ತಂಡದದಲ್ಲಿ ಸ್ಥಾನ ಪಡೆಯಲು ಆಯ್ಕೆಗಾರರ ಗಮನ ಸೆಳೆಯಲು ಯುವ ಆಟಗಾರರಿಗೆ ಉತ್ತಮ ಅವಕಾಶ ಒದಗಿದೆ. ಆಸೀಸ್ ವಿರುದ್ಧ ತವರಿನ ಟಿ20 ಸರಣಿಗೆ ತಂಡದಲ್ಲಿ ಸ್ಥಾನ ಪಡೆದರು,ಬೆಂಚ್ ಕಾಯಿಸಿದ್ದ ಶಿವಂ ದುಬೆ ಮೊದಲ ಪಂದ್ಯದಲ್ಲಿ ಅಮೋರ್ ನಿರ್ವಹಣೆ ತೋರಿದ್ದಾರೆ. ಜತೆಗೆ ವಾಷಿಂಗ್ಟನ್ ಸುಂದರ್, ಜಿತೇಶ್ ಶರ್ಮ ಹಾಗೂ ಅಕ್ಷರ್ ಪಟೇಲ್ ತಂಡಕ್ಕೆ ಉತ್ತಮ ಕೊಡುಗೆ ನೀಡುವುದು ನಿರ್ಣಾಯಕ ಎನಿಸಿದೆ.
ಪುಟಿದೇಳುವುದೇ ಆ್ಘನ್?: ಅನುಭವಿ ರಶೀದ್ ಖಾನ್ ಗೈರು ಅ್ಘಾನಿಸ್ತಾನ ತಂಡಕ್ಕೆ ಪ್ರಮುಖ ಹಿನ್ನೆಡೆ ಉಂಟು ಮಾಡಿದೆ. ಯುವ ಆಟಗಾರರಿಂದ ಕೂಡಿರುವ ಆ್ಘನ್, ಆತಿಥೇಯ ಭಾರತಕ್ಕೆ ತಿರುಗೇಟು ನೀಡುವ ಮೂಲಕ ಸರಣಿ ಜೀವಂತವಿರಿಸುವ ವಿಶ್ವಾಸದಲ್ಲಿದ್ದು, ರೋಹಿತ್ ಶರ್ಮ ಪಡೆ ಎದುರಾಳಿಯನ್ನು ಲುವಾಗಿ ಪರಿಗಣಿಸಿದರೆ ಅಪಾಯ ಗ್ಯಾರಂಟಿ. ಮುಜೀಬ್ ಉರ್ ರೆಹಮಾನ್ ಮೊದಲ ಪಂದ್ಯದಲ್ಲಿ ಉತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ವೇಗಿಗಳಾದ ನವೀನ್ ಉಲ್ ಹಕ್, ಾಜಲೂಕ್ ಾರೂಖಿಯಿಂದ ಸೂಕ್ತ ಬೆಂಬಲ ಅಗತ್ಯವಿದೆ.