ಸೌರಾಷ್ಟ್ರ ರಣಜಿ ತಂಡದ​ ಆಟಗಾರ ಅವಿ ಬರೋಟ್​ ನಿಧನ

AviBarot
Published on

ಗುಜರಾತ್​: 19 ವರ್ಷದೊಳಿಗಿನ ಕ್ರಿಕೆಟ್ ತಂಡದ ಮಾಜಿ ನಾಯಕ, ಸೌರಾಷ್ಟ್ರ ರಣಜಿ ತಂಡದ​ ಆಟಗಾರ ಅವಿ ಬರೋಟ್​ ಶಕ್ರವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟರು. ಇವರಿಗೆ ಕೇವಲ 29 ವರ್ಷ ವಯಸ್ಸಾಗಿತ್ತು.

ಸೌರಾಷ್ಟ್ರ ರಣಜಿ ತಂಡದ ಆಟಗಾರರಾಗಿದ್ದ ಅವಿ ಬರೋಟ್​, ವಿಕೆಟ್ ಕೀಪರ್, ಬ್ಯಾಟ್ಸ್​ಮನ್​ ಆಗಿದ್ದರು. ಇವರು ಒಟ್ಟು 21 ರಣಜಿ ಪಂದ್ಯವನ್ನಾಡಿದ್ದರು. 2011 ಮತ್ತು 2020ರಲ್ಲಿ ಸೌರಾಷ್ಟ್ರ ತಂಡದ ನಾಯಕರಾಗಿದ್ದರು. 2019-20ನೇ ಸಾಲಿನಲ್ಲಿ ರಣಜಿ ಟ್ರೋಫಿಗೆದ್ದ ಸೌರಾಷ್ಟ್ರ ತಂಡದಲ್ಲಿ ಇವರು ಆಟವಾಡಿದ್ದರು. 17 ಲಿಸ್ಟ್​ ಎ ಮತ್ತು 11 ದೇಶೀಯ ಟಿ-20 ಪಂದ್ಯವನ್ನೂ ಆಡಿದ್ದಾರೆ.

ಅವಿ ಬರೋಟ್​ ನಿಧನಕ್ಕೆ ಸಂತಾಪ ಸೂಚಿಸಿರುವ ಸೌರಾಷ್ಟ್ರ ಕ್ರಿಕೆಟ್​ ಸಂಸ್ಥೆ, 'ಅವಿ ಒಬ್ಬ ಅಸಾಧಾರಣ ಮತ್ತು ಗಮನಾರ್ಹ ಕ್ರಿಕೆಟಿಗ. ಅವರ ಅಕಾಲಿಕ ನಿಧನ ತುಂಬಲಾರದ ನಷ್ಟ' ಎಂದು ಟ್ವೀಟ್​ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net