ರಾಷ್ಟ್ರಮಟ್ಟದ ಶೂಟರ್​ ನಮನ್​ವೀರ್​ ಸಿಂಗ್​ ಆತ್ಮಹತ್ಯೆ! ತನ್ನ ತಲೆಗೆ ತಾನೇ ಗುಂಡು ಹಾರಿಸಿಕೊಂಡು ಸಾವು

Namanveer Singh
Published on

ಚಂಡಿಗಢ: ರಾಷ್ಟ್ರಮಟ್ಟದ ಶೂಟರ್​ ಕ್ರೀಡಾಪಟು ನಮನ್​ವೀರ್​ ಸಿಂಗ್​ ಬ್ರಾರ್(26)​ ಮೃತಪಟ್ಟಿದ್ದು, ಮೊಹಾಲಿಯ ಮನೆಯಲ್ಲಿ ಅನುಮಾನಾಸ್ಪದವಾಗಿ ಶವ ಪತ್ತೆಯಾಗಿದೆ.

ಸೋಮವಾರ ಬೆಳಗ್ಗೆ ತಮ್ಮ ತಲೆಗೆ ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿಗೆ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಜಾಗತಿಕ ವಿಶ್ವವಿದ್ಯಾಲಯಗಳ ಡಬಲ್​ ಟ್ರ್ಯಾಪ್​ ಶೂಟಿಂಗ್​ ವಿಭಾಗದಲ್ಲಿ ಕಂಚಿಕ ಪದಕ ಪಡೆದಿದ್ದ ನಮನ್​ವೀರ್​ ಸಿಂಗ್​, ISSF ಅರ್ಹತಾ ಪರೀಕ್ಷೆಯಲ್ಲೂ ಪಾಲ್ಗೊಂಡಿದ್ದರು.

ಪಂಜಾಬ್‌ನ ಫರೀದ್‌ಕೋಟ್‌ನಲ್ಲಿ ವಾಸವಿದ್ದ ನಮನ್​ವೀರ್​ ಸಿಂಗ್​ರ ತಂದೆ-ತಾಯಿ ಮತ್ತು ಸಹೋದರಿ ಎಲ್ಲರೂ 2009ರಲ್ಲಿ ಮೊಹಾಲಿಗೆ ಸ್ಥಳಾಂತರಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net