ಸರಣಿ ಜಯಿಸುವ ಉತ್ಸಾಹದಲ್ಲಿ ಹರ್ಮಾನ್ ಪ್ರೀತ್ ಬಳಗ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಇಂದು 2ನೇ ಟಿ20 ಪಂದ್ಯ

New-Project-16
Published on

ಮುಂಬೈ: ಆರಂಭಿಕ ಪಂದ್ಯದಲ್ಲಿ ಭರ್ಜರಿ ನಿರ್ವಹಣೆಯೊಂದಿಗೆ ಶುಭಾರಂಭ ಕಂಡಿರುವ ಭಾರತ ಮಹಿಳಾ ತಂಡ ಸರಣಿ ವಶಪಡಿಸಿಕೊಳ್ಳುವ ಹಂಬಲದಲ್ಲಿದೆ. ಭಾನುವಾರ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ 2ನೇ ಟಿ20 ಪಂದ್ಯ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಹರ್ಮಾನ್‌ಪ್ರೀತ್ ಕೌರ್ ಬಳಗ ಗೆಲುವಿನ ಲಯ ಕಾಯ್ದುಕೊಂಡು 2015-16ರಬಳಿಕ ತವರಿನಲ್ಲಿ ಆಸೀಸ್ ಎದುರು ಟಿ20 ಸರಣಿ ಜಯಿಸುವ ತವಕದಲ್ಲಿದೆ.

ಮೊದಲ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಏಕದಿನ ಸರಣಿಯ ಬ್ಯಾಟಿಂಗ್ ವೈಫಲ್ಯದಿಂದ ಬಂದಿರುವ ಭಾರತ, ಆಸೀಸ್‌ಗೆ ತಿರುಗೇಟು ನೀಡಿದೆ. ಶೆಾಲಿ ವರ್ಮ, ಸ್ಮತಿ ಮಂದನಾ ಜೋಡಿ ಮೊದಲ ವಿಕೆಟ್‌ಗೆ ದಾಖಲೆಯ ರನ್ ಜತೆಯಾಟದ ನೆರವಿನಿಂದ ಆಸೀಸ್ ಎದುರು ಟಿ20ಯಲ್ಲಿ ಮೊದಲ ಬಾರಿಗೆ 9ವಿಕೆಟ್ ಗೆಲುವು ಸಾಧಿಸಿದೆ. 19 ವರ್ಷದ ಟಿಟಾಸ್ ಸಾಧು, ಆಲ್ರೌಂಡರ್‌ಗಳಾದ ದೀಪ್ತಿ ಶರ್ಮ, ಶ್ರೇಯಾಂಕಾ ಪಾಟೀಲ್ ಬೌಲಿಂಗ್‌ನಲ್ಲಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದ್ದಾರೆ. ಆಸೀಸ್ ಪರ ಎಲ್ಲಿಸ್ ಪೆರ‌್ರಿ 300ನೇ ಅಂತಾರಾಷ್ಟ್ರೀಯ ಪಂದ್ಯವಾಡಲು ಸಜ್ಜಾಗಿದ್ದಾರೆ. ೆಬಿ ಲಿಚ್‌ಫೀಲ್ಡ್ ಭಾರತಕ್ಕೆ ಸವಾಲೊಡ್ಡುವ ನಿರೀಕ್ಷೆ ಇದೆ.

ಆರಂಭ: ರಾತ್ರಿ 7

ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net