

ಬೆಂಗಳೂರು: ನಾಯಕಿ ಮೆಗ್ ಲ್ಯಾನಿಂಗ್ (55 ರನ್, 41 ಎಸೆತ, 6 ಬೌಂಡರಿ, 1 ಸಿಕ್ಸರ್) ಅರ್ಧಶತಕದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ವುಮೆನ್ಸ್ ಪ್ರೀಮಿಯರ್ ಲೀಗ್ 2ನೇ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ ಎದುರು ಸವಾಲಿನ ಮೊತ್ತ ಕಲೆಹಾಕಿದೆ. ಆಡಿರುವ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಗುಜರಾತ್ ಜೈಂಟ್ಸ್ ಟೂರ್ನಿಯಲ್ಲಿ ಗೆಲುವು ದಾಖಲಿಸದ ಏಕೈಕ ತಂಡ ಎನಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ನಾಯಕಿ ಬೆತ್ ಮೂನಿ ಫೀಲ್ಡಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಇಳಿದ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್‌ಗೆ 163 ರನ್ ಪೇರಿಸಿದೆ. ಗುಜರಾತ್ ಜೈಂಟ್ಸ್ ಪರ ಮೇಘನಾ ಸಿಂಗ್ 4 ವಿಕೆಟ್ ಪಡೆದರು.
ಡೆಲ್ಲಿ ಕ್ಯಾಪಿಟಲ್ಸ್: 8 ವಿಕೆಟ್‌ಗೆ 163 (ಮೆಗ್ ಲ್ಯಾನಿಂಗ್ 55, ಶೆಾಲಿ 13, ಆಲಿಸ್ ಕ್ಯಾಪ್ಸಿ 27, ಜೆಮೀಮಾ ರೋಡ್ರಿಗಸ್ 7, ಅನ್ನಾಬೆಲ್ ಸುದರ್‌ಲ್ಯಾಂಡ್ 20, ಜೆಸ್ ಜೋನಾಸೆನ್ 11, ಆರುಂಧತಿ 5, ಶಿಖಾ ಪಾಂಡೆ 14*, ಮೇಘನಾ ಸಿಂಗ್ 37 ಕ್ಕೆ4, ಆಶ್ಲೇ ಗಾರ್ಡ್‌ನರ್ 37ಕ್ಕೆ 2).
ಲ್ಯಾನಿಂಗ್ ಆಸರೆ: ಡೆಲ್ಲಿ ಕ್ಯಾಪಿಟಲ್ಸ್‌ಗೆ ಉತ್ತಮ ಆರಂಭ ದೊರೆಯಲಿಲ್ಲ. ಶೆಾಲಿ ವರ್ಮ (13) ಬೇಗನೇ ನಿರ್ಗಮಿಸಿದರು. ಬಳಿಕ ಜತೆಯಾದ ಮೆಗ್ ಲ್ಯಾನಿಂಗ್ ಹಾಗೂ ಆಲಿಸ್ ಕ್ಯಾಪ್ಸಿ (27) ಬಿರುಸಿನ ಬ್ಯಾಟಿಂಗ್ ನಡೆಸಿದರು.ಇವರಿಬ್ಬರು 2ನೇ ವಿಕೆಟ್‌ಗೆ 26 ಎಸೆತದಲ್ಲಿ 38 ರನ್‌ಗಳಿಸಿ ಚೇತರಿಕೆ ನೀಡಿತು. ನಂತರ 3ನೇ ವಿಕೆಟ್‌ಗೆ ಲ್ಯಾನಿಂಗ್ ಹಾಗೂ ಜೆಮೀಮಾ ರೋಡ್ರಿಗಸ್ (7) ಜೋಡಿ ತಂಡದ ಮೊತ್ತ ಹೆಚ್ಚಿಸಿತು. ಇವರಿಬ್ಬರು 34 ಎಸೆತದಲ್ಲಿ 47 ರನ್‌ಗಳಿಸಿದರೆ, ಇದರಲ್ಲಿ ಲ್ಯಾನಿಂಗ್ ಏಕಾಂಗಿಯಾಗಿ 40 ರನ್ ಕಸಿದು ಆವೃತ್ತಿಯ 2ನೇ ಅರ್ಧಶತಕ ಬಾರಿಸಿದರು. ಬಳಿಕ ಅನ್ನಾಬೆಲ್ ಸುದರ್ ಲ್ಯಾಂಡ್ (20), ಶಿಖಾ ಪಾಂಡೆ (14*) ತಂಡ 160ರ ಗಡಿ ದಾಟಲು ನೆರವಾದರು. ಕೊನೇ 5 ಓವರ್‌ಗಳಲ್ಲಿ ಡೆಲ್ಲಿ 4 ವಿಕೆಟ್ ಕೈಚೆಲ್ಲಿತು.