‘ಕ್ಷೇಮದೆಡೆಗೆ ನಡೆ’ಎಂಬ ಧ್ಯೇಯ ವಾಕ್ಯದೊಂದಿಗೆ ಮ್ಯಾರಥಾನ್ 10ಕೆ ರನ್

New-Project-36-1
Published on

ಬೆಂಗಳೂರು: ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಟಾಟಾ ಎಂಟರ್ ಪ್ರೈಸಸ್‌ನ ಅಂಗಸಂಸ್ಥೆಯಾಗಿರುವ ಬಿಗ್ ಬಾಸ್ಕೆಟ್ ಭಾನುವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಟಾಟಾ ಅಲ್ಟ್ರಾ ಮ್ಯಾರಥಾನ್ 10ಕೆ ಪ್ರೋಮೋ ರನ್‌ನಲ್ಲಿ ನಗರದ 500 ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿದ್ದರು.

‘ಕ್ಷೇಮದೆಡೆಗೆ ನಡೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಮ್ಯಾರಥಾನ್ ಅನ್ನು ಆಯೋಜಿಸಲಾಗಿತ್ತು. ಹಲಸೂರಿನ ಸೌತ್ ಯುನೈಟೆಡ್ ಫುಟ್‌ಬಾಲ್ ಕ್ಲಬ್ ಮೈದಾನದಲ್ಲಿ ಬೆಳಗ್ಗೆ 6 ಗಂಟೆಗೆ ಆರಂಭವಾದ ಮ್ಯಾರಥಾನ್, ಕಬ್ಬನ್ ರಸ್ತೆ, ಕಬ್ಬನ್ ಪಾರ್ಕ್, ವಿಧಾನಸೌಧ ರಸ್ತೆ ಮತ್ತು ಎಂಜಿ ರಸ್ತೆಗಳಲ್ಲಿ ಸಾಗಿತು.

ಮ್ಯಾರಥಾನ್ ಕುರಿತು ಮಾತನಾಡಿದೆ ಬಿಗ್ ಬಾಸ್ಕೆಟ್ ಸಹ-ಸಂಸ್ಥಾಪಕ ಮತ್ತು ಸಿಎಂಒ ವಿಪುಲ್ ಪರೇಖ್, ‘‘ಇಂದಿನ ಜಗತ್ತಿನಲ್ಲಿ ನಮ್ಮ ಆರೋಗ್ಯದ ಕಡೆಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ. ಇದಕ್ಕೆ ಪ್ರಾಮುಖ್ಯತೆ ಕೊಡಬೇಕೆಂಬುದು ಗೊತ್ತಿದ್ದರೂ ಸಹ ನಮ್ಮ ಅತಿಯಾದ ಒತ್ತಡದ ಜೀವನದಿಂದಾಗಿ ನಮ್ಮ ಯೋಗಕ್ಷೇಮವನ್ನು ಕಡೆಗಣಿಸುತ್ತಿದ್ದೇವೆ. ಟಾಟಾ ಅಲ್ಟ್ರಾ ಮ್ಯಾರಥಾನ್ 10 ಕೆ ಪ್ರೋಮೋ ರನ್‌ನಂತಹ ಉಪಕ್ರಮಗಳೊಂದಿಗೆ ಬಿಗ್ ಬಾಸ್ಕೆಟ್ ದೈಹಿಕ ಚಟುವಟಿಕೆಗಳನ್ನು ಉತ್ತೇಜಿಸುವುದರ ತೆಗೆ ಈ ಬಗ್ಗೆ ಜಾಗೃತಿ ಆಂದೋಲನವನ್ನೂ ಚುರುಕುಗೊಳಿಸುತ್ತಿದೆ. ಈಗಿನ ಒತ್ತಡದ ಜಗತ್ತಿನಲ್ಲಿ ಸಕ್ರಿಯವಾದ ಜೀವನಶೈಲಿಯು ಕೇವಲ ಒಂದು ಆಯ್ಕೆಯಾಗಿ ಉಳಿದಿಲ್ಲ. ಆದರೆ, ಅಗತ್ಯವಾಗಿದೆ ಎಂಬ ಸಂದೇಶವನ್ನು ನಾಗರಿಕರಿಗೆ ತಲುಪಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.

ಬಿಗ್ ಬಾಸ್ಕೆಟ್‌ನ ಸಹ-ಸಂಸ್ಥಾಪಕರಾದ ಹರಿ ಮೆನನ್, ವಿಪುಲ್ ಪರೇಖ್, ವಿಎಸ್ ಸುಧಾಕರ್ ಮತ್ತು ವಿಎಸ್ ರಮೇಶ್, ಟಾಟಾ ಸನ್ಸ್ನ ಟಿಕೆ ಬಾಲಕುಮಾರ್, ವಿರಾಟ್ ಮೆಹ್ತಾ, ಮುಕುಂದ್ ಮೊಘೆ, ಸೌರಭ್ ಮಿತ್ರ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net