

ಮುಂಬೈ: ಮುಂದಿನ ವರ್ಷ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಆವೃತ್ತಿಯ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಗಳಾಗುವ ಸಾಧ್ಯತೆ ದಟ್ಟವಾಗಿದೆ.
2024ರಲ್ಲಿ ಭಾರತದಲ್ಲಿ ಸಾರ್ವತ್ರಿ ಚುನಾವಣೆ ನಡೆಯಲಿದ್ದು, ಐಪಿಎಲ್ ಮುಗಿದ ಬಳಿಕ ಜೂನ್ 4ರಿಂದ ಟಿ-20 ವಿಶ್ವಕಪ್ ಆರಂಭವಾಗಲಿದ್ದು, ಇದಕ್ಕೂ ಮುನ್ನ ಟೂರ್ನಮೆಂಟ್ ಮುಗಿಸುವ ಜವಾಬ್ದಾರಿ ಬಿಸಿಸಿಐ ಮುಂದಿದೆ.
ಹೀಗಾಗಿ 2024ರ ಮಾರ್ಚ್ ಮೊದಲ ಮೊದಲ ಅಥವಾ ಎರಡನೇ ವಾರದಲ್ಲಿ ಐಪಿಎಲ್ ಶುರುವಾಗುವ ಸಾಧ್ಯತೆಗಳು ದಟ್ಟವಾಗಿದ್ದು, ಮೇ ಆರಂಭಿಕ ವಾರಗಳಲ್ಲಿ ಟೂರ್ನಮೆಂಟ್ ಮುಗಿಸುವ ಸವಾಲು ಬಿಸಿಸಿಐ ಮುಂದಿದೆ. ಸುದ್ದಿ ಮೂಲಗಳ ಪ್ರಕಾರ ಟೂರ್ನಿಯು ಮಾರ್ಚ್ 12ರಂದು ಶುರುವಾಗಿ ಮೇ 12ರಂದು ಅಂತ್ಯಗೊಳ್ಳಲಿದೆ ಎಂದು ಹೇಳಲಾಗಿದೆ.
2024ರಲ್ಲಿ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈ ನಿಟ್ಟಿನಲ್ಲಿ ಬಿಸಿಸಿಐ ಟೂರ್ನಿಯನ್ನು ವಿದೇಶದಲ್ಲಿ ಆಯೋಜಿಸಲು ಚಿಂತನೆ ನಡೆಸಿದೆ. ಈ ಹಿಂದೆ 2009(ದಕ್ಷಿಣ ಆಫ್ರಿಕಾ), 2014(UAE)ನಲ್ಲಿ ಪಂದ್ಯಗಳನ್ನು ಆಡಿಸಲಾಗಿತ್ತು. ಒಂದು ವೇಳೆ ಐಪಿಎಲ್ ಸಮಯದಲ್ಲೇ ಚುನಾವಣೆ ದಿನಾಂಕ ಘೋಷಣೆಯಾದಲ್ಲಿ ವಿದೇಶದಲ್ಲಿ ಟೂರ್ನಿ ನಡೆಯುವುದು ಖಚಿತ ಎನ್ನಬಹುದು.
ವೆಸ್ಟ್ ಇಂಡೀಸ್ ಹಾಗೂ ಯೆಸ್ಎ ಆತಿಥ್ಯದಲ್ಲಿ ನಡೆಯುವ 2024ರ ಟಿ-20 ವಿಶ್ವಕಪ್ ಹಿನ್ನಲೆಯಲ್ಲಿ ಐಪಿಎಲ್ಅನನ್ಉ ಕಡಿಮೆ ಅವಧಿಯಲ್ಲಿ ಮುಗಿಸಬೇಕಾದ ಅನಿವಾರ್ಯತೆ ಬಿಸಿಸಿಐ ಮುಂದಿದೆ. ಬಹುತೇಕ ರಾಷ್ಟ್ರೀಯ ತಂಡಗಳ ಆಟಗಾರರು ಟಿ20 ವಿಶ್ವಕಪ್ ಆರಂಭಕ್ಕೆ ಒಂದೆರೆಡು ವಾರ ಮುಂಚಿತವಾಗಿ ತಮ್ಮ ದೇಶಗಳಿಗೆ ಹಿಂತಿರುಗಲಿದ್ದಾರೆ.
ಹೀಗಾಗಿ ಸ್ಟಾರ್ ಆಟಗಾರರು ಅರ್ಧದಲ್ಲೇ ಐಪಿಎಲ್ ತೊರೆಯುವುದನ್ನು ತಡೆಯಲು ಬಿಸಿಸಿಐ ಯೋಜನೆ ರೂಪಿಸಿದ್ದು, ಡಬಲ್ ಹೆಡರ್ ಪಂದ್ಯಗಳನ್ನು ಹೆಚ್ಚಾಗಿ ಆಯೋಜಿಸಿ ಐಫಿಎಲ್ಅನ್ನು ಬೇಗನೆ ಮುಗಿಸುವ ಲೆಕ್ಕಾಚಾರದಲ್ಲಿದೆ.