

India vs England: ಲಂಡನ್ನ ಕೆನ್ನಿಂಗ್ಟನ್ ಓವಲ್ನಲ್ಲಿ ನಡೆದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲಂಡ್ ವಿರುದ್ಧ ಭಾರತ 6 ರನ್ಗಳಿಂದ ಅದ್ಭುತ ಗೆಲುವು ಸಾಧಿಸಿದೆ. ಈ ಮೂಲಕ ಬರೋಬ್ಬರಿ 77 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಐದು ಪಂದ್ಯಗಳ ಸರಣಿಯ ಅಂತಿಮ ಪಂದ್ಯವನ್ನು ಭಾರತ ಗೆದ್ದಿರುವುದು ಇದೇ ಮೊದಲನೆಯದಾಗಿದೆ.
ಇನ್ನೂ ಟೀಮ್ ಇಂಡಿಯಾದ ಗೆಲುವಿನ ಬಗ್ಗೆ ವಿರಾಟ್ ಕೊಹ್ಲಿ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದು ಟೀಮ್ ಇಂಡಿಯಾದ ಅದ್ಭುತ ಗೆಲುವಾಗಿದೆ. ಸಿರಾಜ್ ಮತ್ತು ಪ್ರಸಿದ್ ಅವರ ಅದ್ಭುತ ಪ್ರದರ್ಶನ ಮತ್ತು ದೃಢಸಂಕಲ್ಪ ನಮಗೆ ಈ ಉತ್ತಮ ಗೆಲುವನ್ನು ತಂದುಕೊಟ್ಟಿದೆ. ತಂಡಕ್ಕಾಗಿ ಎಲ್ಲವನ್ನೂ ಪಣಕ್ಕಿಡುವ ಸಿರಾಜ್ ಅವರಿಗೆ ವಿಶೇಷ ಗೌರವ ಸಲ್ಲಿಸುತ್ತೇನೆ. ಅವರ ಬಗ್ಗೆ ತುಂಬಾ ಸಂತೋಷವಾಗುತ್ತಿದೆ ಎಂದು ಕೊಹ್ಲಿ ಟ್ವೀಟ್ ಮೂಲಕ ಸಂತಸ ಹೊರಹಾಕಿದ್ದಾರೆ.
(ಏಜೆನ್ಸೀಸ್)
ಇಂಗ್ಲೆಂಡ್ಗೆ 35 ರನ್ಗಳ ಅಗತ್ಯವಿದ್ದರೆ, ಟೀಮ್ ಇಂಡಿಯಾಗೆ 4 ವಿಕೆಟ್ಗಳು ಬೇಕಿತ್ತು. ಮೂರು ವಿಕೆಟ್ಗಳನ್ನು ಯಶಸ್ವಿಯಾಗಿ ಕಬಳಿಸಿದ ಗಿಲ್ ಪಡೆಗೆ ಅಚ್ಚರಿ ಮೂಡಿಸಿದ್ದು, ಕ್ರಿಸ್ ವೋಕ್ಸ್ ಎಂಟ್ರಿ. ಕಡೆಯ ದಿನದಾಟದಲ್ಲಿ ಇಂಗ್ಲೆಂಡ್ನ 4 ವಿಕೆಟ್ಗಳನ್ನು ಕಬಳಿಸುವಲ್ಲಿ ಗಿಲ್ ಪಡೆ ಮೇಲುಗೈ ಸಾಧಿಸಿತು. ಪ್ರಸಿದ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ತಲಾ ಎರಡು ವಿಕೆಟ್ ಪಡೆದರು. ಈ ವೇಳೆ ಕೊನೆಗೆ ಕಣಕ್ಕಿಳಿದ ಇಂಜುರಿಯಿಂದ ಬಳಲುತ್ತಿದ್ದ ಕ್ರಿಸ್ ವೋಕ್ಸ್, ಒಂದೇ ಕೈಯಲ್ಲಿ ತಂಡದ ಪರ ಆಡಿದರು. ಆದರೆ, ಗೆಲುವು ತಂದುಕೊಡುವಲ್ಲಿ ವಿಫಲರಾದರು.