ಹಿರಿಯರ ಬಳಿಕ ಕಿರಿಯರಿಗೂ ಕಾಟ: ಆಸೀಸ್‌ಗೆ ಏಕಕಾಲದಲ್ಲಿ ಮೂರೂ ಏಕದಿನ ವಿಶ್ವಕಪ್ ಗರಿ

New-Project-3-5
Published on

ಬೆನೋನಿ: ಕಳೆದ ವರ್ಷ ತವರಿನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಕಂಡ ಸೋಲಿಗೆ ಭಾರತದ ಕಿರಿಯರ ತಂಡ ಸೇಡು ತೀರಿಸಿಕೊಳ್ಳುವ ನಿರೀಕ್ಷೆ ಹುಸಿಯಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ನಿರ್ವಹಣೆ ತೋರಿದ ಆಸ್ಟ್ರೇಲಿಯಾದ ಎದುರು ಮಂಕಾದ 5 ಬಾರಿಯ ಚಾಂಪಿಯನ್ ಭಾರತ ತಂಡ 19 ವಯೋಮಿತಿಯ ಏಕದಿನ ವಿಶ್ವಕಪ್ ಟೂರ್ನಿಯ ೈನಲ್‌ನಲ್ಲಿ 79 ರನ್‌ಗಳಿಂದ ಮುಗ್ಗರಿಸಿದೆ. ಇದರೊಂದಿಗೆ ಆಸೀಸ್ ಕಿರಿಯರ ತಂಡ 4ನೇ ಬಾರಿಗೆ ವಿಶ್ವ ಚಾಂಪಿಯನ್ ಎನಿಸಿತು.

ವಿಲೋಮೂರ್ ಪಾರ್ಕ್‌ನಲ್ಲಿ ಭಾನುವಾರ ನಡೆದ ಪ್ರಶಸ್ತಿ ಹೋರಾಟದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ, ಭಾರತೀಯ ಮೂಲದ ಬ್ಯಾಟರ್ ಹರ್ಜಸ್ ಸಿಂಗ್ (55 ರನ್, 64 ಎಸೆತ, 3 ಬೌಂಡರಿ, 3 ಸಿಕ್ಸರ್) ಅರ್ಧಶತಕ ಹಾಗೂ ಒಲಿವಿರ್ ಪೀಕ್ (46* ) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್‌ಗೆ 253 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ಬ್ಯಾಟರ್‌ಗಳ ವೈಲ್ಯದಿಂದ ನಲುಗಿದ ಭಾರತ 43.5 ಓವರ್‌ಗಳಲ್ಲಿ 174 ರನ್‌ಗಳಿಗೆ ಆಲೌಟ್ ಆಯಿತು. ಕಿರಿಯರ ವಿಶ್ವಕಪ್ ೈನಲ್‌ನಲ್ಲಿ ಇದುವರೆಗೆ 242ಕ್ಕಿಂತ ಅಧಿಕ ಮೊತ್ತವನ್ನು ಚೇಸಿಂಗ್ ಮಾಡದ ದಾಖಲೆ ಉಳಿದುಕೊಂಡಿತು.

ಆಸ್ಟ್ರೇಲಿಯಾ: 7 ವಿಕೆಟ್‌ಗೆ 253 (ಹ್ಯಾರಿ ಡಿಕ್ಸನ್ 42, ಹಗ್ ವೈಬ್‌ಗೆನ್ 48, ಹರ್ಜಸ್ ಸಿಂಗ್ 55, ಒಲಿವಿರ್ 46*, ಆಂಡರ್‌ಸನ್ 13, ರಾಜ್ ಲಿಂಬಾನಿ 38ಕ್ಕೆ 3, ನಮನ್ ತಿವಾರಿ 63ಕ್ಕೆ 2). ಭಾರತ: 43.5 ಓವರ್‌ಗಳಲ್ಲಿ 174 (ಆದರ್ಶ್ 47, ಮುಶೀರ್ 22, ಉದಯ್ 8, ಸಚಿನ್ 9, ಪ್ರಿಯಾಂಶು 9, ಎಂ. ಅಭಿಷೇಕ್ 42, ವಿಡ್ಲರ್ 35ಕ್ಕೆ 2, ಮೆಕ್‌ಮಿಲನ್ 43ಕ್ಕೆ 3, ಬಿಯರ್ಡ್ಮನ್ 15ಕ್ಕೆ 3).

ಹಿರಿಯರ ಬಳಿಕ ಕಿರಿಯರಿಗೂ ಕಾಟ: ಆಸ್ಟ್ರೇಲಿಯಾ ಸೀನಿಯರ್ ಕ್ರಿಕೆಟ್ ತಂಡ 2022ರ ಬಳಿಕ ನಡೆದ ಐಸಿಸಿಯ ಮೂರು ಪ್ರಕಾರದ (ಡಬ್ಲುೃಟಿಸಿ, ಏಕದಿನ, ಟಿ20) ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಆಗಿತ್ತು. ಈ ಪೈಕಿ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಮತ್ತು ಏಕದಿನ ವಿಶ್ವಕಪ್ ೈನಲ್‌ನಲ್ಲಿ ಭಾರತವನ್ನೇ ಸೋಲಿಸಿತ್ತು. ಇದೀಗ ಆಸೀಸ್ ಕಿರಿಯರೂ ಭಾರತದ ಪಾಲಿಗೆ ಕಗ್ಗಂಟಾಗಿದ್ದಾರೆ.

ಮೂರೂ ಏಕದಿನ ವಿಶ್ವಕಪ್ ಗರಿ

ಆಸ್ಟ್ರೇಲಿಯಾ ತಂಡ ಐಸಿಸಿಯ 3 ವಿಭಾಗದ ಏಕದಿನ ವಿಶ್ವಕಪ್‌ನಲ್ಲೂ ಇದೀಗ ಏಕಕಾಲದಲ್ಲಿ ಚಾಂಪಿಯನ್ ಪಟ್ಟವೇರಿದ ಅಪರೂಪದ ಸಾಧನೆ ಮಾಡಿದೆ. ಆಸೀಸ್ ಪುರುಷರ ತಂಡ 2023 ಮತ್ತು ಮಹಿಳೆಯರ ತಂಡ 2022ರ ಏಕದಿನ ವಿಶ್ವಕಪ್ ಜಯಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net