

ಇಂಡಿಯನ್ ಪ್ರೀಮಿಯರ್ ಲೀಗ್( IPL 2025)ನ 18ನೇ ಆವೃತ್ತಿಯ ಪ್ರಶಸ್ತಿಗಾಗಿ ಇಂದು ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಮತ್ತು ಪಂಜಾಬ್ ಕಿಂಗ್ಸ್ ನಡುವೆ ಫೈನಲ್ ಪಂದ್ಯ ನಡೆಯಲಿದೆ.
ಇಂದು ನಡೆಯುವ ಈ ಪಂದ್ಯದ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಕೂತುಹಲ ಮೂಡಿತ್ತು. ಇನ್ನು ಆರ್ಸಿಬಿ ಪರ 'ಈ ಸಲ ಕಪ್ ನಮ್ದೇ' ಎಂದು ಇಂಟರ್ನೆಟ್ನಲ್ಲಿ ಸಾಕಷ್ಟು ಟ್ರೆಂಡ್ ಆಗುತ್ತಿದೆ. ಇದರ ನಡುವೆ ಕೆನಡಾದ ರ್ಯಾಪರ್ ಡ್ರೇಕ್ ಆರ್ಸಿಬಿ ಪರ ಬೆಂಬಲವಾಗಿ ನಿಂತಿದ್ದಾರೆ. ಆರ್ಸಿಬಿ ಅವರು ಲಕ್ಷಾಂತರ ಬೆಟ್ ಕಟ್ಟಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬೆಟಿಂಗ್ ಕಟ್ಟಿದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾನೆ.
ಮಂಗಳವಾರ ಡ್ರೇಕ್ ಇನ್ಸ್ಟಾಗ್ರಾಮ್ ನಲ್ಲಿ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಇದರಲ್ಲಿ, ಆರ್ಸಿಬಿ ಐಪಿಎಲ್ 2025 ಗೆಲ್ಲುವುದರ ಮೇಲೆ 7,50,000 ಅಮೆರಿಕನ್ ಡಾಲರ್ ಅಂದರೆ 6,41,08,974 ರೂ. ಬೆಟ್ ಇಟ್ಟಿರುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೆ ಈ ಸಲ ಕಪ್ ನಮ್ದೇ ಎಂದು ಬರೆದುಕೊಂಡಿದ್ದಾರೆ.
ಆದರೆ, ಈ ಪರಿ ಬೆಟ್ಟಿಂಗ್ ಕಟ್ಟಿರುವುದರ ಬಗ್ಗೆ ಅಲ್ಲಿನ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣ ಅಲ್ಲಿ ಅಂದರೆ ಉತ್ತರ ಅಮೆರಿಕಾದಲ್ಲಿ ಕ್ರಿಕೆಟ್ ಜನಪ್ರಿಯ ಕ್ರೀಡೆ ಅಲ್ಲ. ಹೀಗಾಗಿ, ಅಲ್ಲಿನ ಜನರಿಗೆ ಇತನ ಬೆಟ್ಟಿಂಗ್ ಹುಬ್ಬೆರುವಂತೆ ಮಾಡಿದೆ.
ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ ಆರ್ಸಿಬಿ ಮತ್ತು ಪಂಜಾಬ್ ನಡುವೆ ಒಟ್ಟು 36 ಪಂದ್ಯಗಳು ನಡೆದಿದ್ದು, ಎರಡೂ ತಂಡಗಳು ತಲಾ 18 ಬಾರಿ ಗೆದ್ದಿವೆ. ಕಳೆದ 10 ಪಂದ್ಯಗಳನ್ನು ನೋಡಿದರೆ, ಆರ್ಸಿಬಿ 6 ಪಂದ್ಯಗಳನ್ನು ಗೆದ್ದಿದ್ದರೆ, ಪಂಜಾಬ್ 4 ಪಂದ್ಯಗಳನ್ನು ಗೆದ್ದಿದೆ.(ಏಜೆನ್ಸೀಸ್)