Paris Olympic: ಸತತ 10ನೇ ಬಾರಿ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿದ ಮಹಿಳಾ ಶೂಟರ್​! ಹೊಸ ದಾಖಲೆ ನಿರ್ಮಾಣ...

web shoot
Published on

ಪ್ಯಾರಿಸ್​: ಜಾರ್ಜಿಯಾದ 55 ವರ್ಷದ ಶೂಟರ್​ ನಿನೋ ಸಲುಕ್ವಾಡ್ಜ್​ ಪ್ಯಾರಿಸ್​ನಲ್ಲಿ ಶನಿವಾರ ಕಣಕ್ಕಿಳಿಯುವ ಮೂಲಕ 10 ಒಲಿಂಪಿಕ್ಸ್​ಗಳಲ್ಲಿ ಸ್ಪರ್ಧಿಸಿದ ಮೊದಲ ಮಹಿಳೆ ಎನಿಸಿದರು. ಅವರು 1988ರಿಂದ ಪ್ರತಿ ಒಲಿಂಪಿಕ್ಸ್​ನಲ್ಲೂ ಸ್ಪರ್ಧಿಸುತ್ತಿದ್ದಾರೆ. 19ನೇ ವಯಸ್ಸಿನಲ್ಲಿ ಮೊದಲ ಬಾರಿ ಸೋವಿಯತ್​ ಯೂನಿಯನ್​ ಪರ ಕಣಕ್ಕಿಳಿದಿದ್ದರು.

ಮಹಿಳೆಯರ 10 ಮೀ. ಏರ್​ ಪಿಸ್ತೂಲ್​ ವಿಭಾಗದಲ್ಲಿ ಸ್ಪರ್ಧಿಸಿದ ಅವರು 38ನೇ ಸ್ಥಾನಕ್ಕೆ ತೃಪ್ತಿಪಟ್ಟರು. 10 ಒಲಿಂಪಿಕ್ಸ್​ಗಳ ಪೈಕಿ 1988ರ ಪದಾರ್ಪಣೆ ಕೂಟದಲ್ಲಿ ಚಿನ್ನ, ಬೆಳ್ಳಿ ಜಯಿಸಿದ್ದರು. ನಂತರದಲ್ಲಿ 2008ರ ಬೀಜಿಂಗ್​ ಗೇಮ್ಸ್​ನಲ್ಲಿ ಕಂಚು ಗೆದ್ದಿದ್ದರು.

2016ರ ರಿಯೋ ಗೇಮ್ಸ್​ನಲ್ಲಿ ಅವರು ಪುತ್ರ ಸೊಟ್ನೆ ಮಚವರಿಯನಿ ಜತೆ ಸ್ಪರ್ಧಿಸಿದ್ದರು. ಈ ಮೂಲಕ ಒಂದೇ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿದ ಮೊದಲ ತಾಯಿ-ಮಗ ಎನಿಸಿದ್ದರು. ಕೆನಡದ ಈಕ್ವೆಸ್ಟ್ರಿಯನ್​ ಇಯಾನ್​ ಮಿಲ್ಲರ್​ 10 ಒಲಿಂಪಿಕ್ಸ್​ಗಳಲ್ಲಿ ಸ್ಪರ್ಧಿಸಿರುವುದು ಪುರುಷರ ವಿಭಾಗದ ದಾಖಲೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net