

ಮುಂಬೈ: ಟೂರ್ನಿಯ ಪ್ಲೇಆ್ ರೇಸ್‌ನಿಂದ ಬಹುತೇಕ ಹೊರಬಿದ್ದಿರುವ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಪ್ಲೇಆ್ ಅವಕಾಶ ವೃದ್ಧಿಸಿಕೊಳ್ಳಲು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಐಪಿಎಲ್-17ರಲ್ಲಿ ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಕಾದಾಡಲಿವೆ. ಎರಡೂ ತಂಡಗಳು ಹಾಲಿ ಆವೃತ್ತಿಯಲ್ಲಿ 2ನೇ ಬಾರಿಗೆ ಎದುರಾಗಲಿದ್ದು, ಮೊದಲ ಮುಖಾಮುಖಿಯಲ್ಲಿ ಒಟ್ಟು 523 ರನ್ ದಾಖಲಾಗಿತ್ತು.
ಹಾಲಿ ಆವೃತ್ತಿಯಲ್ಲಿ ನೀರಸ ನಿರ್ವಹಣೆ ತೋರಿರುವ ಮುಂಬೈ ಉಳಿದ 3 ಲೀಗ್ ಪಂದ್ಯಗಳಲ್ಲಿ ಪ್ರತಿಷ್ಠೆಗಾಗಿ ಹೋರಾಟ ನಡೆಸಬೇಕಿದೆ. ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 3 ಗೆಲುವು, 8 ಸೋಲಿನೊಂದಿಗೆ 6 ಅಂಕ ಸಂಪಾದಿಸಿರುವ ಮುಂಬೈ ಅಂಕಪಟ್ಟಿಯ ಕೊನೇ ಸ್ಥಾನಕ್ಕೆ ಕುಸಿದಿದೆ. ಹಿಂದಿನ ಪಂದ್ಯದಲ್ಲಿ ಕೆಕೆಆರ್ ಎದುರು ಸೋತಿರುವುದು ಹಿನ್ನಡೆ ಎನಿಸಿದೆ. ಇನ್ನು ಸನ್‌ರೈಸರ್ಸ್ ತಂಡ 10 ಪಂದ್ಯಗಳಲ್ಲಿ 6 ಜಯ, 4 ಸೋಲಿನೊಂದಿಗೆ 12 ಅಂಕ ಕಲೆಹಾಕಿದ್ದು, ಪ್ಲೇಆ್ಗೆ ರೇಸ್‌ನಲ್ಲಿ ಮೇಲುಗೈ ಸಾಧಿಸುವ ಹಂಬಲದಲ್ಲಿದೆ. ರಾಜಸ್ಥಾನ ಎದುರು 1 ರನ್ ರೋಚಕ ಗೆಲುವಿನೊಂದಿಗೆ ಕಂಬ್ಯಾಕ್ ಮಾಡಿರುವ ಪ್ಯಾಟ್ ಕಮ್ಮಿನ್ಸ್ ಬಳಗ ಲಯ ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿದೆ.
ಸನ್ ಸಂಘಟಿತ ನಿರ್ವಹಣೆ: ಆರಂಭಿಕ ಪಂದ್ಯಗಳಲ್ಲಿ ಅಬ್ಬರಿಸಿದ ಸನ್‌ರೈಸರ್ಸ್‌ನ ಟ್ರಾವಿಸ್ ಹೆಡ್ (396), ಅಭಿಷೇಕ್ ಶರ್ಮ (315) ಹಾಗೂ ಹೆನ್ರಿಕ್ ಕ್ಲಾಸೆನ್ ಬ್ಯಾಟಿಂಗ್‌ನ ಆಧಾರಸ್ತಂಭ ಎನಿಸಿದ್ದಾರೆ. ಯುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ (219) ಮಧ್ಯಮ ಕ್ರಮಾಂಕದಲ್ಲಿ ಉಪಯುಕ್ತ ಕೊಡುಗೆ ಮೂಲಕ ನೆರವಾಗಿದ್ದಾರೆ. ಉಳಿದಿರುವ ಲೀಗ್ ಪಂದ್ಯಗಳಲ್ಲಿ ಆಟಗಾರರ ಪ್ರದರ್ಶನ ಸನ್‌ರೈಸರ್ಸ್‌ನ ಅಳಿವು-ಉಳಿವಿನಲ್ಲಿ ಪ್ರಮುಖ ಪಾತ್ರವಹಿಸಲಿದೆ. ಪ್ಲೇಆ್ ಸ್ಥಾನ ಪಡೆಯಲು ಸನ್‌ರೈಸರ್ಸ್ ಜತೆಗೆ ಲಖನೌ, ಸಿಎಸ್‌ಕೆ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ನಿಕಟ ಪೈಪೋಟಿಯಲ್ಲಿವೆ. ಟಿ. ನಟರಾಜನ್ (15 ವಿಕೆಟ್) ಪರ್ಪಲ್ ಕ್ಯಾಪ್ ರೇಸ್‌ನಲ್ಲಿದ್ದು, ರಾಜಸ್ಥಾನ ಎದುರು ಬೌಲರ್‌ಗಳು ನಡೆಸಿದ ದಾಳಿ ಮತ್ತೆ ಮರುಕಳಿಸುವ ವಿಶ್ವಾಸದಲ್ಲಿ ಕಮ್ಮಿನ್ಸ್ ಬಳಗ ಇದೆ. ಅನುಭವಿ ಭುವನೇಶ್ವರ್ ಲಯ ಕಂಡುಕೊಂಡಿರುವುದು ಪ್ಲಸ್ ಪಾಯಿಂಟ್.
ಹಾರ್ದಿಕ್ ಮೇಲೆ ಎಲ್ಲರ ಚಿತ್ತ: ಟೂರ್ನಿಯಲ್ಲಿ ನೀರಸ ನಿರ್ವಹಣೆಯ ನಡುವೆಯೂ ಟೀಮ್ ಇಂಡಿಯಾ ಉಪನಾಯಕನ ಸ್ಥಾನ ಉಳಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಉಳಿದ ಲೀಗ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನದ ಮೂಲಕ ಾರ್ಮ್‌ಗೆ ಮರಳಬೇಕಿದೆ. ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿರುವ ರೋಹಿತ್ ಶರ್ಮ, ಸೂರ್ಯಕುಮಾರ್ ಮೇಲೆಯೂ ಎಲ್ಲರ ಗಮನವಿದೆ. ರೋಹಿತ್ ಾರ್ಮ್‌ಗೆ ಮರಳಬೇಕಿದ್ದು, ಸೂರ್ಯಕುಮಾರ್ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳಬೇಕಿದೆ. ಕೆಕೆಆರ್ ವಿರುದ್ಧ ತವರಿನಲ್ಲಿ ಸುಲಭ ಗುರಿಯನ್ನು ಬೆನ್ನಟ್ಟಲು ವಿಲವಾಗಿದ್ದು ಆತ್ಮಬಲ ಕುಗ್ಗಿಸಿದೆ.
ಮುಖಾಮುಖಿ: 22
ಸನ್‌ರೈಸರ್ಸ್: 10
ಮುಂಬೈ: 12
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ