

ಗುವಾಹಟಿ: ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 73ನೇ ಅಂತಾರಾಷ್ಟ್ರೀಯ ಶತಕ ದಾಖಲಿಸಿದರು. 87 ಎಸೆತಗಳಲ್ಲಿ 1 ಸಿಕ್ಸ್, 12 ಫೋರ್ ಮೂಲಕ 113 ರನ್ ಕಲೆ ಹಾಕಿದರು. ಇದರೊಂದಿಗೆ ಇದು ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 45ನೇ ಶತಕವಾಗಿದೆ.
ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ನಾಯಕ ದಸುನ್ ಶಾನಕ ಬೌಲಿಂಗ್ ಆಯ್ದುಕೊಂಡರು. ಕ್ರಮವಾಗಿ ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಹಾಗೂ ಶುಭಮಾನ್ ಗಿಲ್ ಇನ್ನಿಂಗ್ಸ್ ಆರಂಭಿಸಿದರು. ಮೊದಲ ವಿಕೆಟ್ಗೆ ಈ ಜೋಡಿ ಉತ್ತರ ಆರಂಭವನ್ನೇ ಒದಗಿಸಿತು. ಈ ಜೋಡಿ 143 ರನ್ಗಳ ಉತ್ತಮ ಜೊತೆಯಾಟವಾಡಿತು. ಶುಭಮನ್ ಗಿಲ್ 70 ರನ್ ಗಳಿಸಿ ವಿಕೆಟ್ ಒಪ್ಪಿಸಿದೆ, ನಾಯಕ ರೋಹಿತ್ ಶರ್ಮಾ 83 ರನ್ ಗಳಿಸಿ ಔಟ್ ಆದರು.\
ಎರಡನೇ ವಿಕೆಟ್ಗೆ ಕ್ರಿಸ್ಗೆ ಬಂದ ವಿರಾಟ್ ಕೊಹ್ಲಿ ಜಾಗರೂಕತೆಯ ಆಟಕ್ಕೆ ಮುಂದಾದರು. ಅಂತಿಮವಾಗಿ 80 ಎಸೆತ ಎದುರಿಸಿ ಶತಕ ಸಿಡಿಸಿ ಮಿಂಚಿದರು. ಆದರೆ ಕಸುನ್ ರಜಿತ ಎಸೆದ 48.2 ಓವರ್ನ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.
ಭಾರತದ ಶ್ರೇಯಸ್ ಅಯ್ಯರ್ 28, ಕೆ.ಎಲ್. ರಾಹುಲ್ 39, ಹಾರ್ದಿಕ್ ಪಾಂಡ್ಯಾ 14, ಅಕ್ಷರ್ ಪಟೇಲ್ 9 ರನ್ ಗಳಿಸಿದರೆ. ಅಂತಿಮವಾಗಿ ಮೊಹಮ್ಮದ್ ಶಮಿ 4 ರನ್ ಹಾಗೂ ಮೊಹಮ್ಮದ್ ಸಿರಾಜ್ 7 ರನ್ ಗಳಿಸಿ ಅಜೇಯರಾಗಿ ಉಳಿದರು.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 7 ವಿಕೆಟ್ ಕಳೆದುಕೊಂಡು 373 ರನ್ ಕೆಲ ಹಾಕಿದೆ. ಇದರೊಂದಿಗೆ ಶ್ರೀಲಂಕಾ ತಂಡಕ್ಕೆ 374 ರನ್ಗಳ ಬೃಹತ್ ಮೊತ್ತದ ಟಾರ್ಗೆಟ್ ನೀಡಿದೆ. (ಏಜೆನ್ಸೀಸ್)