ಡಬ್ಲ್ಯುಪಿಎಲ್​ ಮಿನಿ ಹರಾಜು: ಆರ್​ಸಿಬಿ ಸೇರಿದ ವೃಂದಾ, ಕನ್ನಡತಿ ಉಮಾ ಹೊಸ ದಾಖಲೆ!

ಮುಂದಿನ ವರ್ಷದ ವುಮೆನ್ಸ್​ ಪ್ರೀಮಿಯರ್​ ಲೀಗ್​ (ಡಬ್ಲ್ಯುಪಿಎಲ್​) 5ನೇ ಆವೃತ್ತಿಗೆ ಪೂರ್ವಭಾವಿಯಾಗಿ ನಡೆದ ಮಹಿಳಾ ಕ್ರಿಕೆಟಿಗರ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೆಲಿಯಾ ತಂಡದ ನಾಯಕಿ ಸೋಫಿ ಮೊಲಿನೆಕ್ಸ್​ ಗರಿಷ್ಠ 1.10 ಕೋಟಿ ರೂಪಾಯಿಗಳ ಬಿಡ್​ ಪಡೆದರು. ಬುಧವಾರ ನಡೆದ ಆಟಗಾರ್ತಿಯ ಲಿಲಾವಿನಲ್ಲಿ ಸೋಫಿ ಮೊಲಿನೆಕ್ಸ್​ 1.10 ಕೋಟಿ ರೂಪಾಯಿಗಳಿಗೆ ಯುಪಿ ವಾರಿಯರ್ಸ್​ ತಂಡ ಪಾಲಾದರೆ, ಎರಡನೇ ಗರಿಷ್ಠ ಬಿಡ್​ ಪಡೆದ ಕಿರಣ್​ ನವಗಿರೆ 75 ಲಕ್ಷ ರೂಪಾಯಿಗಳಿಗೆ ಹಾಲಿ ರನ್ನರ್​ ಅಪ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸೇರಿದರು. ಕರ್ನಾಟಕದ 15 ವರ್ಷದ ಉಮಾ ಕಾಶ್ವಿ (ಡೆಲ್ಲಿ), ಆರಂಭಿಕ ಬ್ಯಾಟರ್​ ವೃಂದಾ ದಿನೇಶ್​ (ಆರ್​ಸಿಬಿ) ಹಾಗೂ ಸಹನಾ ಪವಾರ್​ (ಯುಪಿ ವಾರಿಯರ್ಸ್​) ಮೂಲ ಬೆಲೆ 10 ಲಕ್ಷ ರೂಪಾಯಿಗಳಿಗೆ ಸೇಲಾದರು.
ಉಮಾ ಕಾಶ್ವಿ
ಉಮಾ ಕಾಶ್ವಿ
Published on: 

ಕೊಚ್ಚಿ: ಮುಂದಿನ ವರ್ಷದ ವುಮೆನ್ಸ್​ ಪ್ರೀಮಿಯರ್​ ಲೀಗ್​ (ಡಬ್ಲ್ಯುಪಿಎಲ್​) 5ನೇ ಆವೃತ್ತಿಗೆ ಪೂರ್ವಭಾವಿಯಾಗಿ ನಡೆದ ಮಹಿಳಾ ಕ್ರಿಕೆಟಿಗರ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೆಲಿಯಾ ತಂಡದ ನಾಯಕಿ ಸೋಫಿ ಮೊಲಿನೆಕ್ಸ್​ ಗರಿಷ್ಠ 1.10 ಕೋಟಿ ರೂಪಾಯಿಗಳ ಬಿಡ್​ ಪಡೆದರು. ಬುಧವಾರ ನಡೆದ ಆಟಗಾರ್ತಿಯ ಲಿಲಾವಿನಲ್ಲಿ ಸೋಫಿ ಮೊಲಿನೆಕ್ಸ್​ 1.10 ಕೋಟಿ ರೂಪಾಯಿಗಳಿಗೆ ಯುಪಿ ವಾರಿಯರ್ಸ್​ ತಂಡ ಪಾಲಾದರೆ, ಎರಡನೇ ಗರಿಷ್ಠ ಬಿಡ್​ ಪಡೆದ ಕಿರಣ್​ ನವಗಿರೆ 75 ಲಕ್ಷ ರೂಪಾಯಿಗಳಿಗೆ ಹಾಲಿ ರನ್ನರ್​ ಅಪ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸೇರಿದರು. ಕರ್ನಾಟಕದ 15 ವರ್ಷದ ಉಮಾ ಕಾಶ್ವಿ (ಡೆಲ್ಲಿ), ಆರಂಭಿಕ ಬ್ಯಾಟರ್​ ವೃಂದಾ ದಿನೇಶ್​ (ಆರ್​ಸಿಬಿ) ಹಾಗೂ ಸಹನಾ ಪವಾರ್​ (ಯುಪಿ ವಾರಿಯರ್ಸ್​) ಮೂಲ ಬೆಲೆ 10 ಲಕ್ಷ ರೂಪಾಯಿಗಳಿಗೆ ಸೇಲಾದರು.

ಹಾಲಿ ಚಾಂಪಿಯನ್​ ಆರ್​ಸಿಬಿ ಹಾಗೂ ಯುಪಿ ವಾರಿಯರ್ಸ್​ ತಂಡಗಳು ಸೋಫಿ ಮೊಲಿನೆಕ್ಸ್​ ಸೇರ್ಪಡೆಗೆ ಭಾರಿ ಪೈಪೋಟಿ ನಡೆಸಿದವು. 1.5 ಕೋಟಿ ರೂಪಾಯಿವರೆಗೂ ನಿಕಟ ಹೋರಾಟ ನಡೆಸಿದ ಆರ್​ಸಿಬಿ ನಂತರ ಹಿಂದೆಸರಿಯಿತು. ಸೋಫಿ ಮೊಲಿನೆಕ್ಸ್​ 50 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿದ್ದರು. ಎರಡು ಬಾರಿಯ ಚಾಂಪಿಯನ್​ ಆರ್​ಸಿಬಿ ತಂಡ, ಆಸೀಸ್​ ಆಲ್ರೌಂಡರ್​ ಜೆಸ್​ ಜೋನಾಸೆನ್​ (40 ಲಕ್ಷ), ತೇಜಲ್​ ಹಸಬಿನ್ಸ್​, ದ.ಆಫ್ರಿಕಾ ಕ್ಲೋನ್​ ಟೆಯಾನ್​(30 ಲಕ್ಷ) ಜತೆಗೆ ಕರ್ನಾಟಕದ ವಿಕೆಟ್​ ಕೀಪರ್​&ಬ್ಯಾಟರ್​ ವೃಂದಾ ದಿನೇಶ್​ರನ್ನು ಮೂಲ ಬೆಲೆಗೆ ಖರೀದಿಸಿತು.

ಭಾರತ ತಂಡದ ಅನುಭವಿ ಆಲ್ರೌಂಡರ್​ ಸ್ನೇಹಾ ರಾಣಾ (30 ಲಕ್ಷ), ಆಸೀಸ್​ ಆಲ್ರೌಂಡರ್​ ಗ್ರೇಸ್​ ಹ್ಯಾರಿಸ್​ (30 ಲಕ್ಷ), ಆಶಾ ಶೋಭನಾ (30 ಲಕ್ಷ), ಸುಷ್ಮಾ ವರ್ಮ (30 ಲಕ್ಷ), ಕ್ಯಾಥರಿನ್​ ಬೆಸ್​, ಮನಲಿ ದಣಿ (ತಲಾ 10 ಲಕ್ಷ) ಯಪಿ ತಂಡ ಸೇರಿದರು. ಶ್ವೇತಾ ಸೆಹ್ರಾವತ್​ (20 ಲಕ್ಷ), ಅತಾ ಭಗತ್​, ಸನಿಕಾ ಚಲ್ಕೆ, ಲತಿಕಾ ಇನಾಮ್ದಾರ್​,ದಿಶಾ ಕಸಟ್​, ಭಾರತಿ ರಾವಲ್​ (10 ಲಕ್ಷ) ಮಾಜಿ ಚಾಂಪಿಯನ್​ ಮುಂಬೈ ತಂಡ ಕೂಡಿಕೊಂಡರು. ತಮಿಳುನಾಡಿನ ಜಿ.ಕಮಲಿನಿ (40 ಲಕ್ಷ), ಸಮೈರಾ ರಾವ್​ (10 ಲಕ್ಷ) ಜತೆಗೆ ಐರ್ಲೆಂಡ್​ನ ಓರ್ಲಾ ಪ್ರೆಂಡರ್​ಗ್ಯಾಸ್ಟ್​ (30 ಲಕ್ಷ) ಗುಜರಾತ್​ ಜೈಂಟ್ಸ್​ಗೆ ಹೊಸ ಸೇರ್ಪಡೆ ಎನಿಸಿದರು. ಮಿನಿ ಹರಾಜಿನಲ್ಲಿ ಐದು ಫ್ರಾಂಚೈಸಿಗಳು 7 ವಿದೇಶಿ ಸಹಿತ ಒಟ್ಟು 25 ಆಟಗಾರ್ತಿಯರನ್ನು ಖರೀದಿಸಿದವು.

ಡೆಲ್ಲಿ ಸೇರಿದ ಕನ್ನಡತಿ ಉಮಾ

ಬೌಲಿಂಗ್​ ಆಲ್ರೌಂಡರ್​ ಕರ್ನಾಟಕದ ಉಮಾ ಕಾಶ್ವಿ ಮೂಲ ಬೆಲೆ 10 ಲಕ್ಷ ರೂಪಾಯಿಗೆ ನಾಲ್ಕು ಬಾರಿ ಫೈನಲಿಸ್ಟ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸೇರಿದರು. ಉಮಾ ಡೆಲ್ಲಿ ತಂಡ ಸೇರಿದ 2ನೇ ಕನ್ನಡತಿ ಆಗಿದ್ದು, ನಿಕಿ ಪ್ರಸಾದ್​ರನ್ನು ರಿಟೇನ್​ ಮಾಡಿಕೊಳ್ಳಲಾಗಿತ್ತು. ಹರಾಜು ಪ್ರಕ್ರಿಯೆಯಲ್ಲಿ ಸೇಲಾದ ಅತಿ ಕಿರಿಯ ಮಹಿಳಾ ಕ್ರಿಕೆಟರ್​ ಎನಿಸಿರುವ ಬಲಗೈ ಆಫ್​ ಸ್ಪಿನ್ನರ್​ ಉಮಾ, 19 ವಯೋಮಿತಿ ಭಾರತ ತಂಡ ಪರವೂ ಆಡಿದ್ದಾರೆ. ಹರಾಜಿನಲ್ಲಿದ್ದ ಒಟ್ಟು 8 ಕನ್ನಡತಿಯರ ಪೈಕಿ ಮೂವರು ಮಾತ್ರ (ಉಮಾ, ವೃಂದಾ, ಸಹಾನಾ) ಸೇಲಾದರು. ಶ್ರೇಯಾಂಕಾ ಪಾಟೀಲ್​ (ಆರ್​ಸಿಬಿ), ರಾಜೇಶ್ವರಿ ಗಾಯಕ್ವಾಡ್​ (ಗುಜರಾತ್​) ರಿಟೇನ್​ ಆಗಿರುವ ಮತ್ತಿಬ್ಬರು ಕನ್ನಡತಿಯರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net