WPL ಗೆದ್ದ RCBಗೆ ಕೋಟಿಗಳ ಸುರಿಮಳೆ... ಸಿಕ್ಕ ಬಹುಮಾನ ಮೊತ್ತವೆಷ್ಟು? ಯಾರಿಗೆ ಯಾವ ಪ್ರಶಸ್ತಿ ಸಿಕ್ತು? ಇಲ್ಲಿದೆ ಡೀಟೇಲ್ಸ್​!

2026ನೇ ಸಾಲಿನ ಡಬ್ಲ್ಯುಪಿಎಲ್​ ಗೆದ್ದ RCB ತಂಡ
2026ನೇ ಸಾಲಿನ ಡಬ್ಲ್ಯುಪಿಎಲ್​ ಗೆದ್ದ RCB ತಂಡ
Published on

ಪ್ರಮುಖ ಮುಖ್ಯಾಂಶಗಳು

  • WPL ಗೆದ್ದ RCBಗೆ ಕೋಟಿಗಳ ಸುರಿಮಳೆ... ಸಿಕ್ಕ ಬಹುಮಾನ ಮೊತ್ತವೆಷ್ಟು? ಯಾರಿಗೆ ಯಾವ ಪ್ರಶಸ್ತಿ ಸಿಕ್ತು? ಇಲ್ಲಿದೆ ಡೀಟೇಲ್ಸ್​!
  • ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿದ ಸ್ಮೃತಿ ಮಂಧಾನ ಪಡೆ
  • ಅತಿ ಹೆಚ್ಚು ಬಾರಿ WPL ಪ್ರಶಸ್ತಿಗಳನ್ನು ಗೆದ್ದ ಮುಂಬೈ ಇಂಡಿಯನ್ಸ್‌ ದಾಖಲೆಯನ್ನು RCB ಸರಿಗಟ್ಟಿತು
RCB : ರಾಯಲ್​​ ಚಾಲೆಂಜರ್ಸ್ ಬೆಂಗಳೂರು ( RCB ) ತಂಡವು ಮಹಿಳಾ ಪ್ರೀಮಿಯರ್ ಲೀಗ್ (WPL 2026) ವಿಜೇತರಾಗಿ ಹೊರಹೊಮ್ಮಿದೆ. ಗುರುವಾರ (ಫೆ.05) ವಡೋದರಾದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಎರಡನೇ ಬಾರಿಗೆ WPL ಟ್ರೋಫಿಯನ್ನು ಆರ್​ಸಿಬಿ ವನಿತೆಯರು ಜಯಿಸಿದರು. ಈ ಮೂಲಕ ಆರ್​ಸಿಬಿ, ಅತಿ ಹೆಚ್ಚು ಬಾರಿ WPL ಪ್ರಶಸ್ತಿಗಳನ್ನು ಗೆದ್ದ ಮುಂಬೈ ಇಂಡಿಯನ್ಸ್‌ ದಾಖಲೆಯನ್ನು ಸರಿಗಟ್ಟಿತು. ಅದೇ ಸಮಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಸತತ ನಾಲ್ಕನೇ ಬಾರಿಗೆ WPL ಫೈನಲ್‌ನಲ್ಲಿ ಸೋಲುಂಡಿತು. ಈ ಮೂಲಕ ದುರಾದೃಷ್ಟ ತಂಡವೆಂಬ ಹಣೆಪಟ್ಟಿ ಹೊತ್ತುಕೊಂಡಿತು.
ವಿಜೇತ ತಂಡ ಆರ್‌ಸಿಬಿಗೆ 6 ಕೋಟಿ ರೂ. ಬಹುಮಾನ ಮೊತ್ತ ದೊರೆಯಿತು. ಅದೇ ಸಮಯದಲ್ಲಿ, ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್‌ಗೆ 3 ಕೋಟಿ ರೂ. ಬಹುಮಾನ ದೊರೆಯಿತು. ಈ ಸೀಸನ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸ್ಮೃತಿ ಮಂಧಾನ ಆರೆಂಜ್ ಕ್ಯಾಪ್ ಪಡೆದರು. ಅತಿ ಹೆಚ್ಚು ವಿಕೆಟ್ ಪಡೆದ ಸೋಫಿ ಡಿವೈನ್ ಪರ್ಪಲ್ ಕ್ಯಾಪ್ ಪಡೆದರು. ಇಬ್ಬರೂ ತಲಾ 5 ಲಕ್ಷ ರೂ. ನಗದು ಬಹುಮಾನ ಪಡೆದರು.

WPL 2026 ಬಹುಮಾನದ ಹಣದ ವಿವರಗಳು

* ರಾಯಲ್ ಚಾಲೆಂಜರ್ಸ್ ಬೆಂಗಳೂರು (ವಿಜೇತ) : 6 ಕೋಟಿ ರೂಪಾಯಿ
* ಡೆಲ್ಲಿ ಕ್ಯಾಪಿಟಲ್ಸ್ (ರನ್ನರ್-ಅಪ್) : 3 ಕೋಟಿ ರೂಪಾಯಿ
* ವರ್ಷದ ಅತ್ಯುತ್ತಮ ಆಟಗಾರ್ತಿ - ಸೋಫಿ ಡಿವೈನ್, 5 ಲಕ್ಷ ರೂಪಾಯಿ
* ಆರೆಂಜ್ ಕ್ಯಾಪ್ : ಸ್ಮೃತಿ ಮಂಧಾನ, 5 ಲಕ್ಷ ರೂಪಾಯಿ
* ಪರ್ಪಲ್ ಕ್ಯಾಪ್ : ಸೋಫಿ ಡಿವೈನ್, 5 ಲಕ್ಷ ರೂಪಾಯಿ
* ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ್ತಿ: ಹರ್ಮನ್‌ಪ್ರೀತ್ ಕೌರ್, 5 ಲಕ್ಷ ರೂಪಾಯಿ
* ಅತಿ ಹೆಚ್ಚು ಡಾಟ್ ಬಾಲ್‌ಗಳು : ಲಾರೆನ್ ಬೆಲ್, 5 ಲಕ್ಷ ರೂಪಾಯಿ
* ವರ್ಷದ ಅತ್ಯಧಿಕ ಐಕ್ಯೂ : ಸೋಫಿ ಡಿವೈನ್, 5 ಲಕ್ಷ ರೂಪಾಯಿ
* ಅತ್ಯುತ್ತಮ ಸ್ಟ್ರೈಕ್ ರೇಟ್ : ಗ್ರೇಸ್ ಹ್ಯಾರಿಸ್, 5 ಲಕ್ಷ ರೂಪಾಯಿ
* ವರ್ಷದ ಉದಯೋನ್ಮುಖ ಆಟಗಾರ್ತಿ : ನಂದಿನಿ ಶರ್ಮಾ, 5 ಲಕ್ಷ ರೂಪಾಯಿ
* ಫೇರ್ ಪ್ಲೇಯರ್ ಪ್ರಶಸ್ತಿ : ಮುಂಬೈ ಇಂಡಿಯನ್ಸ್, 5 ಲಕ್ಷ ರೂಪಾಯಿ
* ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ: ಸ್ಮೃತಿ ಮಂಧಾನ, 2.5 ಲಕ್ಷ ರೂಪಾಯಿ
ಪಂದ್ಯದ ವಿಚಾರಕ್ಕೆ ಬಂದರೆ,  ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 203 ರನ್ ಗಳಿಸಿತು. ಡೆಲ್ಲಿ ಪರ ನಾಯಕಿ ಜೆಮಿಮಾ ರೊಡ್ರಿಗಸ್ (57), ಲಾರಾ ವೋಲ್ವಾರ್ಡ್ (44), ಲಿಜೆಲ್ಲೆ ಲೀ (37) ಮತ್ತು ಚಿನೆಲ್ಲೆ ಹೆನ್ರಿ (ಔಟಾಗದೆ 35 ರನ್​) ಗರಿಷ್ಠ ಸ್ಕೋರರ್‌ಗಳಾಗಿದ್ದರು. ಆರ್‌ಸಿಬಿ ಬೌಲರ್‌ಗಳಲ್ಲಿ ಸಯಾಲಿ ಸತ್‌ಘರೆ, ನಾಡಿನ್ ಡಿ ಕ್ಲರ್ಕ್ ಮತ್ತು ಅರುಂಧತಿ ರೆಡ್ಡಿ ತಲಾ ಒಂದು ವಿಕೆಟ್ ಪಡೆದರು. 
ಗುರಿ ಬೆನ್ನತ್ತಿದ ಆರ್​ಸಿಬಿ ಪರ, ಸ್ಮೃತಿ ಮಂಧಾನ (87 ರನ್​, 41 ಎಸೆತ, 12 ಬೌಂಡರಿ, 3 ಸಿಕ್ಸರ್) ಮತ್ತು ಜಾರ್ಜಿಯಾ ವಾಲ್ (79 ರನ್​, 54 ಎಸೆತ,. 14 ಬೌಂಡರಿ) ಉತ್ತಮ ಪ್ರದರ್ಶನ ನೀಡಿದರು. ಇದರ ಪರಿಣಾಮ ಆರ್‌ಸಿಬಿ ತಂಡ 19.4 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 204 ರನ್‌ಗಳ ಬೃಹತ್ ಗುರಿಯನ್ನು ತಲುಪಿತು. ದೆಹಲಿ ಬೌಲರ್‌ಗಳ ಪರ ಚಿನೆಲ್ಲೆ ಹೆನ್ರಿ ಎರಡು ವಿಕೆಟ್ ಪಡೆದರು. ನಂದಿನಿ ಶರ್ಮಾ ಮತ್ತು ಮಿನ್ನುಮಣಿ ತಲಾ ಒಂದು ವಿಕೆಟ್ ಪಡೆದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net