ಪ್ಯಾರಿಸ್​ ಒಲಿಂಪಿಕ್ಸ್​ಗೆ ಭಾರತದ 9 ಅಥ್ಲೀಟ್​ಗಳು ಅರ್ಹ

web jyothi
Published on

ನವದೆಹಲಿ: ಭಾರತದ 9 ಅಥ್ಲೀಟ್​ಗಳು ವಿಶ್ವ ರ್ಯಾಂಕಿಂಗ್​ ಆಧಾರದಲ್ಲಿ ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಖಚಿತಪಡಿಸಿಕೊಂಡಿದ್ದಾರೆ. ಈ ಪೈಕಿ ಜ್ಯೋತಿ ಯರಾಜಿ 100 ಮೀ. ಹರ್ಡಲ್ಸ್​ನಲ್ಲಿ ಒಲಿಂಪಿಕ್ಸ್​ ಅರ್ಹತೆ ಸಂಪಾದಿಸಿದ ಮೊದಲ ಭಾರತೀಯರೆನಿಸಿದ್ದಾರೆ.

ವಿಶ್ವ ಅಥ್ಲೆಟಿಕ್ಸ್​ ಸಂಸ್ಥೆಯು ರ್ಯಾಂಕಿಂಗ್​ ಕೋಟಾದ ಆಧಾರದಲ್ಲಿ ಒಲಿಂಪಿಕ್ಸ್​ ಟಿಕೆಟ್​ ಪಡೆದವರ ಹೆಸರನ್ನು ಮಂಗಳವಾರ ಪ್ರಕಟಿಸಿದೆ. ಆದರೆ ಭಾರತೀಯ ಅಥ್ಲೆಟಿಕ್ಸ್​ ಒಕ್ಕೂಟವು (ಎಎ್​ಐ) ಈ ರೀತಿ ಅರ್ಹತೆ ಪಡೆದ ಎಲ್ಲರನ್ನೂ ಒಲಿಂಪಿಕ್ಸ್​ಗೆ ಕಳುಹಿಸಬೇಕೆಂದಿಲ್ಲ. ಅಂತಿಮ ಆಯ್ಕೆಯು ಎಎಫ್​​ಐನದ್ದೇ ಆಗಿರುತ್ತದೆ.

ಶಾಟ್​ಪುಟ್​ ಪಟುಗಳಾದ ಅಭಾ ಖತುವಾ, ತಜಿಂದರ್​ಪಾಲ್​ ಸಿಂಗ್​, ಜಾವೆಲಿನ್​ ಥ್ರೋಪಟು ಅನ್ನುರಾಣಿ, ಟ್ರಿಪಲ್​ಜಂಪ್​ ಪಟುಗಳಾದ ಪರ್ವೀನ್​ ಚಿತ್ರವೇಲ್​, ಅಬ್ದುಲ್​ ಅಬೂಬಕರ್​, ಹೈಜಂಪ್​ ಪಟು ಸರ್ವೇಶ್​ ಕುಶಾರೆ, 5,000 ಮೀ. ಓಟಗಾರ್ತಿ ಪಾರುಲ್​ ಚೌಧರಿ, ನಡಿಗೆ ಸ್ಪರ್ಧಿ ಸೂರಜ್​ ಪನ್ವರ್​ ರ್ಯಾಂಕಿಂಗ್​ ಆಧಾರದಲ್ಲಿ ಒಲಿಂಪಿಕ್ಸ್​ ಅರ್ಹತೆ ಪಡೆದ ಇತರರು.

ಕರ್ನಾಟಕದ ಜಾವೆಲಿನ್​ ಥ್ರೋಪಟು ಡಿ.ಪಿ. ಮನು ಕೂಡ ರ್ಯಾಂಕಿಂಗ್​ ಆಧಾರದಲ್ಲಿ ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಸಂಪಾದಿಸಿದ್ದರೂ, ಇತ್ತೀಚೆಗೆ ಉದ್ದೀಪನ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವುದರಿಂದ ಸ್ಪರ್ಧೆ ಅವಕಾಶದಿಂದ ವಂಚಿತರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net