

ನವದೆಹಲಿ: ಕ್ರಿಕೆಟ್ ಮೈದಾನದಲ್ಲಿ ಈಗಾಗಲೆ ಹಲವು ದಾಖಲೆಗಳನ್ನು ನಿರ್ಮಿಸಿರುವ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣ "ಇನ್ಸ್ಟಾಗ್ರಾಂ'ನಲ್ಲೂ ಹೊಸ ದಾಖಲೆ ಬರೆದಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಅವರು ಈಗ ಪ್ರತಿ ಪ್ರಾಯೋಜಿತ ಪೋಸ್ಟ್ಗೆ ಬರೋಬ್ಬರಿ 8 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ. ಈ ಮೂಲಕ ಇನ್ಸ್ಟಾಗ್ರಾಂನಲ್ಲಿ ಗರಿಷ್ಠ ಹಣ ಸಂಪಾದನೆ ಮಾಡುವ ವಿಶ್ವದ ಅಗ್ರ 15 ಸೆಲೆಬ್ರಿಟಿಗಳಲ್ಲಿ ಅವರೂ ಒಬ್ಬರೆನಿಸಿದ್ದಾರೆ.
33 ವರ್ಷದ ಕೊಹ್ಲಿ ಸದ್ಯ 14ನೇ ಸ್ಥಾನದಲ್ಲಿದ್ದಾರೆ. ಅವರು ಇನ್ಸ್ಟಾಗ್ರಾಂನಲ್ಲಿ 21 ಕೋಟಿಗೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. "ಹೋಪರ್ ಎಚ್ಕ್ಯೂ' ಬಿಡುಗಡೆ ಮಾಡಿರುವ ಅಂಕಿ& ಅಂಶಗಳ ಪ್ರಕಾರ, ುಟ್ಬಾಲ್ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದ್ದಾರೆ. ಅವರು ಪ್ರತಿ ಪ್ರಾಯೋಜಿತ ಪೋಸ್ಟ್ಗೆ 19.5 ಕೋಟಿ ರೂ. ಪಡೆಯುತ್ತಾರೆ. ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿರುವ ಅಗ್ರ ಭಾರತೀಯ, ಏಷ್ಯನ್ ಮತ್ತು ಕ್ರಿಕೆಟಿಗರಾಗಿದ್ದಾರೆ.