ರಾಷ್ಟ್ರೀಯ ಸ್ಕೂಲ್​ ಗೇಮ್ಸ್​ 19 ವಯೋಮಿತಿ ಚೆಸ್​: ಸಿಬಿಎಸ್​ಇ, ಮಹಾರಾಷ್ಟ್ರಕ್ಕೆ ಪ್ರಶಸ್ತಿ

ರಾಷ್ಟ್ರೀಯ ಸ್ಕೂಲ್​ ಗೇಮ್ಸ್​ 19 ವಯೋಮಿತಿ ಚೆಸ್​: ಸಿಬಿಎಸ್​ಇ, ಮಹಾರಾಷ್ಟ್ರಕ್ಕೆ ಪ್ರಶಸ್ತಿ
ರಾಷ್ಟ್ರೀಯ ಸ್ಕೂಲ್​ ಗೇಮ್ಸ್​ 19 ವಯೋಮಿತಿ ಚೆಸ್​: ಸಿಬಿಎಸ್​ಇ, ಮಹಾರಾಷ್ಟ್ರಕ್ಕೆ ಪ್ರಶಸ್ತಿ
Published on
ಬೆಂಗಳೂರು: ಸಿಬಿಎಸ್​ಇ ಮತ್ತು ಮಹಾರಾಷ್ಟ್ರ ತಂಡಗಳು ಬೆಂಗಳೂರಿನ ಗ್ರೀನ್​ವುಡ್​ ಹೈಸ್ಕೂಲ್​ನಲ್ಲಿ ನಡೆದ 69ನೇ ರಾಷ್ಟ್ರೀಯ ಸ್ಕೂಲ್​ ಗೇಮ್ಸ್​ 19 ವಯೋಮಿತಿ ಚೆಸ್​ ಚಾಂಪಿಯನ್​ಷಿಪ್​ನಲ್ಲಿ (69th National School Games Under-19 Boys - Girls Chess Championship) ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿವೆ.

ಭಾರತೀಯ ಸ್ಕೂಲ್​ ಗೇಮ್ಸ್​ ಒಕ್ಕೂಟದ ಮಾನ್ಯತೆಯೊಂದಿಗೆ ಸಿಐಎಸ್​ಸಿಇ ಆತಿಥ್ಯದಲ್ಲಿ ನಡೆದ ಟೂರ್ನಿಯಲ್ಲಿ ವಿವಿಧ ರಾಜ್ಯ ಮತ್ತು ಶಿಕ್ಷಣ ಮಂಡಳಿಗಳಿಂದ 64 ತಂಡಗಳಲ್ಲಿ 300ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧಿಸಿದರು. ಬಾಲಕರ ವಿಭಾಗದಲ್ಲಿ ಮಹಾರಾಷ್ಟ್ರ ಮೊದಲ ರನ್ನರ್​ಅಪ್​ ಮತ್ತು ತಮಿಳುನಾಡು 2ನೇ ರನ್ನರ್​ಅಪ್​ ಸ್ಥಾನ ಗಳಿಸಿತು.

ಬಾಲಕಿಯರ ವಿಭಾಗದಲ್ಲಿ ಸಿಬಿಎಸ್​ಇ ಮೊದಲ ರನ್ನರ್​ಅಪ್​ ಮತ್ತು ಸಿಐಎಸ್​ಸಿಇ 2ನೇ ರನ್ನರ್​ಅಪ್​ ಸ್ಥಾನ ಪಡೆಯಿತು. ಕರ್ನಾಟಕದ ಮೊದಲ ಗ್ರಾಂಡ್​ ಮಾಸ್ಟರ್​ ತೇಜ್​ಕುಮಾರ್​ ಪ್ರಶಸ್ತಿ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net