ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ ಟೆಸ್ಟ್​ ಕರಿಯರ್​ಗೆ ಗುಡ್​ಬೈ ಹೇಳಿದ 6 ದಿಗ್ಗಜ ಕ್ರಿಕೆಟಿಗರು ಇವರೇ ನೋಡಿ! | Border Gavaskar Trophy

border gavaskar trophy
Published on

ನವದೆಹಲಿ: ಇದೇ ನವೆಂಬರ್​ 22ರಿಂದ ಆರಂಭವಾಗಲಿರುವ ಬಾರ್ಡರ್​ ಗವಾಸ್ಕರ್​ ಟ್ರೋಫಿ (Border Gavaskar Trophy) 2025ರ ಟೂರ್ನಿ ಭರ್ಜರಿ ಪೈಪೋಟಿಯಿಂದ ನಡೆಯುವ ಟೆಸ್ಟ್ ಫಾರ್ಮೆಟ್​ ಆಗಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿಯಲು ಎದುರುನೋಡುತ್ತಿರುವ ಟೀಮ್ ಇಂಡಿಯಾ, ಹೆಡ್ ಕೋಚ್​ ಗೌತಮ್ ಗಂಭೀರ್​ ಮುಂದಾಳತ್ವದಲ್ಲಿ ಈ ಬಾರಿ ಗೆಲುವು ಸಾಧಿಸಲು ಪಣತೊಟ್ಟಿದೆ.

ಕೊಹ್ಲಿ ಮತ್ತು ರೋಹಿತ್

ಕಳೆದ ಟೆಸ್ಟ್​ ಸರಣಿಗಳಲ್ಲಿ ಅಬ್ಬರಿಸುವಲ್ಲಿ ಮುಗ್ಗರಿಸಿರುವ ಭಾರತ, ನಾಯಕ ರೋಹಿತ್ ಶರ್ಮ, ವಿರಾಟ್​ ಕೊಹ್ಲಿ ಅವರಂತಹ ದಿಗ್ಗಜ ಹಾಗೂ ಸ್ಟಾರ್​ ಬ್ಯಾಟರ್​ಗಳ ಸ್ಫೋಟಕ ಆಟವನ್ನು ಕಳೆದುಕೊಂಡಿದೆ. ಇದಕ್ಕೆ ಪುಷ್ಟಿ ನೀಡುವುದು ಇತ್ತೀಚೆಗೆ ನಡೆದ ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್ ಮ್ಯಾಚ್​. ಮೂರು ಪಂದ್ಯಗಳ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದ್ದ ಈ ಇಬ್ಬರು ಆಟಗಾರರು, ತಂಡದ ಹಾಗೂ ಅಭಿಮಾನಿಗಳ ನಿರೀಕ್ಷೆಯನ್ನು ಈಡೇರಿಸುವಲ್ಲಿ ವಿಫಲರಾದರು. ಟೀಮ್ ಪರ ಹೆಚ್ಚುವರಿ ರನ್​ ಕಲೆಹಾಕುವಲ್ಲಿ ಪರದಾಡಿದ ಕೊಹ್ಲಿ ಮತ್ತು ರೋಹಿತ್, ಕಿವೀಸ್​ ವಿರುದ್ಧದ ಆರು ಇನ್ನಿಂಗ್ಸ್​ನಲ್ಲಿ ಕಲೆಹಾಕಿದ ರನ್​ಗಳ ವಿವರ ಹೀಗಿದೆ.

ಆರು ಇನ್ನಿಂಗ್ಸ್‌ಗಳಲ್ಲಿ ಒಟ್ಟು ರನ್​

ನ್ಯೂಜಿಲೆಂಡ್​ ವಿರುದ್ಧದ ಆರು ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಶರ್ಮ 91 ರನ್ ಗಳಿಸಿದರೆ, ಕೊಹ್ಲಿ 93 ರನ್ ಕಲೆಹಾಕಿದ್ದಾರೆ. ಬಹುತೇಕ ಆಟಗಾರರು ತಮ್ಮ ಟೆಸ್ಟ್​ ಫಾರ್ಮೆಟ್​ಗೆ ವಿದಾಯ ಹೇಳಲು ನಿರ್ಧರಿಸಿ, ಈ ಟೂರ್ನಿ ಅಥವಾ ಪಂದ್ಯವೇ ವಿದಾಯ ಹೇಳಲು ಬೆಸ್ಟ್​ ಎಂದು ಪೆವಿಲಿಯನ್​ನತ್ತ ಸಾಗುತ್ತಾರೆ. ಕುತೂಹಲಕಾರಿಯಾಗಿ ಈ ಬಾರ್ಡರ್​ ಗವಾಸ್ಕರ್ ಟ್ರೋಫಿ ಒಂದು ಇತಿಹಾಸಕ್ಕೆ ಕಾರಣವಾಗಿದ್ದು, ಭಾರತೀಯ ಕ್ರಿಕೆಟ್​ ಲೋಕದ ಆರು ದಿಗ್ಗಜ ಕ್ರಿಕೆಟಿಗರು ಇದೇ ಟೂರ್ನಿಯ ಮುಖೇನ ತಮ್ಮ ಟೆಸ್ಟ್​ ಕರಿಯರ್​​ಗೆ ಗುಡ್​ಬೈ ಹೇಳಿದ್ದಾರೆ. ತಮ್ಮ ಕೊನೆಯ ಟೆಸ್ಟ್​ ಪಂದ್ಯವನ್ನು ಇಲ್ಲಿ ಆಡಿ, ತದನಂತರ ಕ್ರೀಡಾಭಿಮಾನಿಗಳತ್ತ ಕೈಬೀಸಿ, ಧನ್ಯವಾದ ಅರ್ಪಿಸಿ, ಭಾವುಕ ವಿದಾಯ ತಿಳಿಸಿದ್ದಾರೆ. ಅಷ್ಟಕ್ಕೂ ಯಾರು ಆ ಆರು ದಿಗ್ಗಜರು ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ಟೀಮ್ ಇಂಡಿಯಾದ 6 ದಿಗ್ಗಜರ ಪಟ್ಟಿ:

1. ಅನಿಲ್ ಕುಂಬ್ಳೆ - ದೆಹಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯ, (ಅಕ್ಟೋಬರ್ 29 - ನವೆಂಬರ್ 2, 2008)

2. ಸೌರವ್ ಗಂಗೂಲಿ - ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯ, (ನವೆಂಬರ್ 6-10, 2008)

3. ರಾಹುಲ್ ದ್ರಾವಿಡ್ - ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯ, (ಜನವರಿ 24-28, 2012)

4. ವಿವಿಎಸ್​ ಲಕ್ಷ್ಮಣ್ - ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮ್ಯಾಚ್​, (ಜನವರಿ 24-28, 2012)

5. ವೀರೇಂದ್ರ ಸೆಹ್ವಾಗ್ - ಹೈದರಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯ, (ಮಾರ್ಚ್ 2-5, 2013)

6. ಮಹೇಂದ್ರ ಸಿಂಗ್​ ಧೋನಿ - ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯ - (ಡಿಸೆಂಬರ್ 26-30, 2014)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net