54ನೇ ಕೆವಿಎಸ್ ರಾಷ್ಟ್ರೀಯ ಕಬಡ್ಡಿ ಕ್ರೀಡಾಕೂಟ: ಚಾಂಪಿಯನ್ ಪಟ್ಟಕ್ಕೇರಿದ ಆಗ್ರಾ ತಂಡ | Champions

Untitled design - 2025-08-06T185724.452
Published on

Champions: ಬೆಂಗಳೂರಿನಲ್ಲಿ ನಡೆದ 54ನೇ ಕೆವಿಎಸ್ 14 ವರ್ಷದೊಳಗಿನ ಬಾಲಕರ ರಾಷ್ಟ್ರೀಯ ಕಬಡ್ಡಿ ಕ್ರೀಡಾಕೂಟ-2025 ಬುಧವಾರ ಅದ್ದೂರಿಯಾಗಿ ತೆರೆ ಕಂಡಿತು.

ಈ ಕ್ರೀಡಾಕೂಟದಲ್ಲಿ ಆಗ್ರಾ ಕಬಡ್ಡಿ ತಂಡ, ರಾಂಚಿ ತಂಡದ ವಿರುದ್ಧ ಗಮನಾರ್ಹ ಅಂತರದಿಂದ ರೋಮಾಂಚಕ ಜಯಗಳಿಸುವ ಮೂಲಕ ಚಾಂಪಿಯನ್ ಪಟ್ಟಕ್ಕೇರಿತು.

ರಾಂಚಿ ಮತ್ತು ಪಾಟ್ನಾ ಕ್ರಮವಾಗಿ ರನ್ನರ್-ಅಪ್ ಮತ್ತು ಮೂರನೇ ಸ್ಥಾನದ ವಿಜೇತರಾಗಿ ಹೊರಹೊಮ್ಮಿದವು. ಕ್ರೀಡಾಕೂಟದಲ್ಲಿ ಭಾಗವಹಿಸಿದ ಉಳಿದ 17 ತಂಡಗಳಿಗೆ ಪ್ರಮಾಣಪತ್ರಗಳನ್ನು ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ಅಹಮದಾಬಾದ್ ಪ್ರದೇಶದ ಕೆವಿಎಸ್ ಆರ್‌ಒ ಉಪ ಆಯುಕ್ತ ಧರ್ಮೇಂದ್ರ ಪಟೇಲ್, ಆರ್. ಪ್ರಮೋದ್ ಮತ್ತು ಕರ್ನಲ್ ಗೋವಿಂದ ರಾಮ್ ಚೌಧರಿ ಆಗಮಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಬಳಿಕ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಪ್ರಾಂಶುಪಾಲ ಲೋಕೇಶ್ ಬಿಹಾರಿ ಶರ್ಮಾ, ಎಸ್.ಕೆ.ಜೈಸ್ವಾಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net