

ಹೈದರಾಬಾದ್: ಬ್ಯಾಟರ್ಗಳ ಆರ್ಭಟದ ನಡುವೆ ಕಳೆದ ಪಂದ್ಯದಲ್ಲಿ ಬೌಲರ್ಗಳಿಂದಲೂ ಸುಧಾರಿತ ನಿರ್ವಹಣೆ ಕಂಡಿರುವ ಭಾರತ ತಂಡ, ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಬುಧವಾರ ನಡೆಯಲಿರುವ 4ನೇ ಟಿ20 ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ. ಈ ಮೂಲಕ ಬೆಂಗಳೂರಿನಲ್ಲಿ ಶನಿವಾರ ನಿಗದಿಯಾಗಿರುವ ಅಂತಿಮ ಪಂದ್ಯಕ್ಕೆ ಮೊದಲೇ ಟಿ20 ಸರಣಿ ವಶಪಡಿಸಿಕೊಳ್ಳುವ ಅವಕಾಶ ಶ್ರೇಯಸ್ ಅಯ್ಯರ್ ಬಳಗದ ಮುಂದಿದೆ. ವೆಸ್ಟ್ ಇಂಡೀಸ್ ತಂಡ ಸರಣಿ ಜೀವಂತವಿಡಲು ಹೋರಾಡಲಿದೆ.
ಹೈದರಾಬಾದ್ನಲ್ಲೂ ರನ್ಮಳೆ ಮುಂದುವರಿಯುವ ನಿರೀಕ್ಷೆ ಇದ್ದು, ಮತ್ತೊಮ್ಮೆ ಬ್ಯಾಟರ್ಗಳ ನಿರ್ವಹಣೆ ಪ್ರಮುಖ ಪಾತ್ರ ನಿರ್ವಹಿಸಲಿದೆ. ಸಂಜು ಸ್ಯಾಮ್ಸನ್, ಅಭಿಷೇಕ್ ವರ್ಮ ಮತ್ತು ಇಶಾನ್ ಕಿಶನ್ ಸರಣಿಯಲ್ಲಿ ಭರ್ಜರಿ ಆಟವಾಡುತ್ತಿದ್ದು, ಮಧ್ಯಮ ಕ್ರಮಾಂಕದ ಮೇಲೆ ಹೆಚ್ಚಿನ ಒತ್ತಡ ಬೀಳದಂತೆ ನೋಡಿಕೊಳ್ಳುತ್ತಿದ್ದಾರೆ. ಆದರೂ ಕಳೆದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಕುಸಿತ ಭಾರತಕ್ಕೆ ನಿರೀತ ಮೊತ್ತ ಕಲೆಹಾಕಲು ಅಡ್ಡಿಯಾಗಿತ್ತು. ನಿತೀಶ್ ಕುಮಾರ್ ರೆಡ್ಡಿ, ನಮನ್ ಧೀರ್ ಬ್ಯಾಟಿಂಗ್ನಲ್ಲೂ ಮಿಂಚುವ ಅಗತ್ಯವಿದೆ.
ಮತ್ತೊಂದೆಡೆ ವಿಂಡೀಸ್ ಕೂಡ ಸರಣಿಯಲ್ಲಿ ಭಾರತಕ್ಕೆ ಬಹುತೇಕ ಸರಿಸಮನಾದ ಬ್ಯಾಟಿಂಗ್ ಆರ್ಭಟ ಪ್ರದರ್ಶಿಸಿದೆ. ನಾಯಕ ಶೈ ಹೋಪ್ 182ರ ಸ್ಟ್ರೆ$ಕ್ ರೇಟ್ನಲ್ಲಿ 182 ರನ್ ಸಿಡಿಸಿದ್ದರೆ, ಶೆರ್ಫಾನ್ ರುದರ್ಫೋರ್ಡ್ 189ರ ಸ್ಟ್ರೆ$ಕ್ರೇಟ್ನಲ್ಲಿ 12 ಸಿಕ್ಸರ್ಗಳ ಸಹಿತ 172 ರನ್ ಬಾರಿಸಿದ್ದಾರೆ. ಆದರೆ ಸತತ 2 ಬಾರಿಯ ಟಿ20 ವಿಶ್ವ ಚಾಂಪಿಯನ್ ಭಾರತವನ್ನು ಮಣಿಸಬೇಕಾದರೆ ವಿಂಡೀಸ್ ಸರ್ವಾಂಗೀಣ ನಿರ್ವಹಣೆ ತೋರುವುದು ಅಗತ್ಯವಾಗಿದೆ.
*3: ಭಾರತ ತಂಡ ಹೈದರಾಬಾದ್ನಲ್ಲಿ ಇದುವರೆಗೆ ಆಡಿರುವ 3 ಟಿ20 ಪಂದ್ಯಗಳಲ್ಲೂ ಗೆದ್ದ ಅಜೇಯ ದಾಖಲೆ ಹೊಂದಿದೆ. ವಿಂಡೀಸ್ 2019ರಲ್ಲಿ ಇಲ್ಲಿ ಆಡಿದ ಟಿ20ಯಲ್ಲಿ ಭಾರತಕ್ಕೆ ಶರಣಾಗಿತ್ತು.
ಟೀಮ್ ನ್ಯೂಸ್
ಭಾರತ: ಸ್ಪಿನ್ನರ್ ಕುಲದೀಪ್ ಯಾದವ್ ಬದಲಿಗೆ ಹೆಚ್ಚುವರಿ ವೇಗಿಯಾಗಿ ಪ್ರಿನ್ಸ್ ಯಾದವ್ರನ್ನು ಕಣಕ್ಕಿಳಿಸಿದ ಭಾರತದ ನಡೆ ಇಂದೋರ್ನಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಭಾರತ ಕಳೆದ ಪಂದ್ಯದ ಗೆಲುವಿನ ಕಾಂಬಿನೇಷನ್ ಅನ್ನೇ ಉಳಿಸಿಕೊಳ್ಳುವ ನಿರೀೆ ಇದೆ.
ವೆಸ್ಟ್ ಇಂಡೀಸ್: ರಾಂಚಿಯಲ್ಲಿ ಬೌಲಿಂಗ್ ವೇಳೆ ಗಾಯಗೊಂಡಿದ್ದ ಆಲ್ರೌಂಡರ್ ರೊಮಾರಿಯೊ ಶೆರ್ಡ್ ಕಳೆದ ಪಂದ್ಯ ತಪ್ಪಿಸಿಕೊಂಡಿದ್ದರು. ಈ ಬಾರಿ ಅವರು ಮರಳಿ ಕಣಕ್ಕಿಳಿಯುವ ಬಗ್ಗೆ ಸ್ಪಷ್ಟತೆ ಇಲ್ಲ.
ಆರಂಭ: ರಾತ್ರಿ 7.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.
ಮತ್ತೆ ರನ್ಮಳೆ ನಿರೀಕ್ಷೆ
ಹಾಲಿ ಸರಣಿಯ ರನ್ಪ್ರವಾಹ ಹೈದರಾಬಾದ್ನ ಆರ್ಜಿಐ ಸ್ಟೇಡಿಯಂನಲ್ಲೂ ಮುಂದುವರಿಯುವ ನಿರೀೆ ಇದೆ. ಐಪಿಎಲ್ನಲ್ಲಿ ಇಲ್ಲಿ ನಡೆದ ಪಂದ್ಯಗಳಲ್ಲಿ 250 ಪ್ಲಸ್ ಮೊತ್ತವೂ ಸರಾಗವಾಗಿ ಬಂದ ನಿದರ್ಶನಗಳಿವೆ. ಭಾರತದಲ್ಲಿ ಟಿ20 ಪಂದ್ಯಗಳಲ್ಲಿ ದಾಖಲಾಗಿರುವ ಅಗ್ರ 8 ಮೊತ್ತಗಳಲ್ಲಿ 4 ಇದೇ ಮೈದಾನದಲ್ಲಿ ಬಂದಿವೆ. 2024ರಲ್ಲಿ ಬಾಂಗ್ಲಾ ಎದುರು ಇಲ್ಲಿ ನಡೆದ ಪಂದ್ಯದಲ್ಲಿ ಭಾರತ 300ರ ಸನಿಹ (297/6) ಬಂದಿತ್ತು. ಕಳೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದ್ದರೂ, ಇಬ್ಬನಿ ಸಮಸ್ಯೆ ಕಾಡುವ ಸಾಧ್ಯತೆ ಇರುವುದರಿಂದ ಇಲ್ಲಿ ಮತ್ತೊಮ್ಮೆ ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆರಿಸಿಕೊಳ್ಳುವ ಸಾಧ್ಯತೆ ಇದೆ.