

ಬೆಂಗಳೂರು: ಆಗಸ್ಟ್ 27ರಿಂದ 31ರವರೆಗೆ ಪೆರು ರಾಜಧಾನಿ ಲಿಮಾದಲ್ಲಿ ನಡೆಯಲಿರುವ 20 ವಯೋಮಿತಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ಗೆ 43 ಅಥ್ಲೀಟ್ಗಳ ಭಾರತ ತಂಡವನ್ನು ಶನಿವಾರ ಪ್ರಕಟಿಸಲಾಗಿದೆ. ಈ ಪೈಕಿ ಕರ್ನಾಟಕದ ಆರು ಉದಯೋನ್ಮುಖ ಅಥ್ಲೀಟ್ಗಳು ಸ್ಥಾನ ಸಂಪಾದಿಸಿದ್ದಾರೆ.
ಅವರೆಂದರೆ ಉನ್ನತಿ ಅಯ್ಯಪ್ಪ (ಮಹಿಳೆಯರ 200 ಮೀ. ಓಟ, 100 ಮೀ. ಹರ್ಡಲ್ಸ್), ಪಾವನಾ ನಾಗರಾಜ್ (ಲಾಂಗ್ಜಂಪ್), ಶ್ರೀಯಾ ರಾಜೇಶ್ (400 ಮೀ. ಹರ್ಡಲ್ಸ್), ಸುಧೀಾ ವಲ್ದುರಿ, ನಿಯೋಲ್ ಆನ್ನಾ ಕೋರ್ನೆಲಿಯಾ (4/100 ಮೀ. ರಿಲೇ) ಮತ್ತು ರಿಹಾನ್ ಚೌಧರಿ (4/400 ಮೀ. ರಿಲೇ). ಕ್ರೀಡಾಕೂಟದಲ್ಲಿ 134 ದೇಶಗಳಿಂದ 1,700ಕ್ಕೂ ಅಧಿಕ ಅಥ್ಲೀಟ್ಗಳು ಭಾಗವಹಿಸಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಭಾರತ 2 ಬೆಳ್ಳಿ, 1 ಕಂಚಿನೊಂದಿಗೆ ಪದಕಪಟ್ಟಿಯಲ್ಲಿ 25ನೇ ಸ್ಥಾನ ಗಳಿಸಿತ್ತು.