41ನೇ ಯೂತ್​ ನ್ಯಾಷನಲ್​ ಬಾಸ್ಕೆಟ್​ಬಾಲ್: ಕರ್ನಾಟಕ ಬಾಲಕಿಯರ ತಂಡಕ್ಕೆ ಬೆಳ್ಳಿ

ಪುಣೆಯಲ್ಲಿ ಮಂಗಳವಾರ ಮುಕ್ತಾಯಗೊಂಡ 41ನೇ ಯೂತ್​ ನ್ಯಾಷನಲ್​ ಬಾಸ್ಕೆಟ್​ಬಾಲ್​ ಚಾಂಪಿಯನ್​ಷಿಪ್​ನಲ್ಲಿ ಕರ್ನಾಟಕ 16 ವಯೋಮಿತಿ ಬಾಲಕಿಯರ ತಂಡ ರನ್ನರ್​ ಅಪ್​ ಆಗಿದೆ. ಬಾಲೇವಾಡಿ ಕ್ರೀಡಾಂಗಣದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಕರ್ನಾಟಕ ತಂಡ 60-85 ಅಂಕಗಳ ಅಂತರದಿಂದ ತಮಿಳುನಾಡು ಎದುರು ಪರಾಭವಗೊಂಡಿತು.
ಬೆಳ್ಳಿ ಗೆದ್ದ ಕರ್ನಾಟಕ ಬಾಲಕಿಯರ ತಂಡ
ಬೆಳ್ಳಿ ಗೆದ್ದ ಕರ್ನಾಟಕ ಬಾಲಕಿಯರ ತಂಡಏಜೆನ್ಸಿ
Published on: 

ಬೆಂಗಳೂರು: ಪುಣೆಯಲ್ಲಿ ಮಂಗಳವಾರ ಮುಕ್ತಾಯಗೊಂಡ 41ನೇ ಯೂತ್​ ನ್ಯಾಷನಲ್​ ಬಾಸ್ಕೆಟ್​ಬಾಲ್​ ಚಾಂಪಿಯನ್​ಷಿಪ್​ನಲ್ಲಿ ಕರ್ನಾಟಕ 16 ವಯೋಮಿತಿ ಬಾಲಕಿಯರ ತಂಡ ರನ್ನರ್​ ಅಪ್​ ಆಗಿದೆ. ಬಾಲೇವಾಡಿ ಕ್ರೀಡಾಂಗಣದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಕರ್ನಾಟಕ ತಂಡ 60-85 ಅಂಕಗಳ ಅಂತರದಿಂದ ತಮಿಳುನಾಡು ಎದುರು ಪರಾಭವಗೊಂಡಿತು. ಬೆಳ್ಳಿ ಪದಕ ಗೆದ್ದ ಬಾಲಕಿಯರ ತಂಡಕ್ಕೆ ಕರ್ನಾಟಕ ರಾಜ್ಯ ಬಾಸ್ಕೆಟ್​ಬಾಲ್​ ಸಂಸ್ಥೆ ವತಿಯಿಂದ ಐದು ಲಕ್ಷ ರೂ.ನಗದು ಬಹುಮಾನ ಘೋಷಿಸಲಾಗಿದೆ.ಫಿಬಾ ಏಷ್ಯಾ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಬಾಸ್ಕೆಟ್​ಬಾಲ್​ ಸಂಸ್ಥೆ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜ್​ ವಿಜೇತರಿಗೆ ಅಭಿನಂದನೆ ತಿಳಿಸಿದ್ದಾರೆ.