ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ

IND VS AUS ODI 3 2020
Published on

ಕ್ಯಾನ್​ಬೆರಾ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡ ಆರಂಭದ ಎರಡು ಏಕದಿನ ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು, ಸರಣಿಯ ಮೂರನೆ ಮತ್ತು ಕೊನೆಯ ಪಂದ್ಯದಲ್ಲಿ ವೈಟ್​ವಾಷ್ ತಪ್ಪಿಸುವ ಸಲುವಾಗಿ ಹೋರಾಟ ಪ್ರಾರಂಭಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಟೀಇಂಡಿಯಾ ಈ ಪಂದ್ಯಕ್ಕೆ ತಂಡದಲ್ಲಿ ನಾಲ್ಕು ಪ್ರಮುಖ ಬದಲಾವಣೆ ಮಾಡಿಕೊಂಡಿದೆ.ಪಂದ್ಯ ಆರಂಭವಾಗಿದ್ದು ಭಾರತದ ಪರ ಶಿಖರ್ ಧವನ್ ಮತ್ತು ಶುಬ್ಮನ್ ಗಿಲ್ ಆರಂಭಿಕರಾಗಿ ಕ್ರೀಸ್​ನಲ್ಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಮೂರು ಓವರ್​ಗಳಲ್ಲಿ ಭಾರತೀಯ ತಂಡ 9 ರನ್​ ಗಳಿಸಿದೆ.

ಹಿಂದಿನ ಪಂದ್ಯಗಳಲ್ಲಿ ತಂಡದಲ್ಲಿದ್ದ ಮಯಾಂಕ್ ಅಗರ್​ವಾಲ್​, ನವದೀಪ್​ ಸೈನಿ, ಮೊಹಮ್ಮದ್ ಶಮಿ, ಯುಜುವೇಂದ್ರ ಚಾಹಲ್​ ಅವರ ಬದಲಿಗೆ ತಂಗರಸು ನಟರಾಜನ್​, ಶುಬ್ಮನ್ ಗಿಲ್​,ಶಾರ್ದೂಲ್​ ಠಾಕೂರ್​ ಮತ್ತು ಕುಲದೀಪ್ ಯಾದವ್ ಅವರನ್ನು ಕಣಕ್ಕೆ ಇಳಿಸಿದೆ. ತಂಗರಸು ನಟರಾಜನ್​ಗೆ ಇದು ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಆಸ್ಟ್ರೇಲಿಯಾ ತಂಡದಲ್ಲೂ ಮೂರು ಪ್ರಮುಖ ಬದಲಾವಣೆಯಾಗಿದ್ದು, ಗಾಯಾಗೊಂಡಿರುವ ಡೇವಿಡ್ ವಾರ್ನರ್​, ಪ್ಯಾಟ್ ಕುಮ್ಮಿನ್ಸ್, ಮಿಷೆಲ್ ಸ್ಟಾರ್ಕ್ ಕೆಮರೂನ್​ ಗ್ರೀನ್​, ಸೀನ್ ಅಬೋಟ್​, ಆಷ್ಟನ್ ಅಗರ್ ಸ್ಥಾನದಲ್ಲಿ ಕಣಕ್ಕೆ ಇಳಿದಿದ್ದಾರೆ.

ಆಸ್ಟ್ರೇಲಿಯಾ ತಂಡ: ಅರೋನ್ ಫಿಂಚ್ (ಕಪ್ತಾನ), ಮಾರ್ನಸ್ ಲಬುಸ್ಚೇಂಜ್​, ಸ್ಟೀವನ್ ಸ್ಮಿತ್​, ಗ್ಲೆನ್​ ಮ್ಯಾಕ್ಸ್​ವೆಲ್​, ಮೋಯ್ಸೆಸ್ ಹೆನ್ರಿಕ್​, ಅಲೆಕ್ಸ್ ಕ್ಯಾರಿ(ವಿಕೆಟ್ ಕೀಪರ್​), ಕೆಮರೂನ್ ಗ್ರೀನ್, ಆಸ್ಟನ್​ ಅಗರ್​, ಸೀನ್ ಅಬೋಟ್​, ಆಡಂ ಝಂಪಾ, ಜೋಶ್ ಹಝ್ಲೇವುಡ್​.

ಭಾರತೀಯ ತಂಡ: ವಿರಾಟ್ ಕೊಹ್ಲಿ (ಕಪ್ತಾನ), ಶಿಖರ್ ಧವನ್​, ಶುಬ್ಮನ್ ಗಿಲ್​, ಶ್ರೇಯಸ್ ಅಯ್ಯರ್​, ಕೆಎಲ್​ ರಾಹುಲ್​ (ವಿಕೆಟ್ ಕೀಪರ್​), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್​, ಕುಲದೀಪ್ ಯಾದವ್, ಜಸ್ಪ್ರೀತ್​ ಬೂಮ್ರಾಹ್, ಟಿ.ನಟರಾಜನ್​. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net