

ಬೆಂಗಳೂರು: ಕರ್ನಾಟಕ ರಾಜ್ಯದ 3ನೇ ರಾಜ್ಯ ರ್ಯಾಂಕಿಂಗ್ ಟೆನ್ಪಿನ್ ಬೌಲಿಂಗ್ ಟೂರ್ನಿಯಲ್ಲಿ ಆಕಾಶ್ ಅಶೋಕ್ ಕುಮಾರ್ ಸತತ ಮೂರನೇ ಬಾರಿಗೆ ರಾಜ್ಯ ರ್ಯಾಂಕಿಂಗ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬೆಂಗಳೂರಿನ ಜಯನಗರದ ಕಾಸ್ಮೋಪಾಲಿಟನ್ ಕ್ಲಬ್ನ ಅಮೀಬಾ ಬೌಲಿಂಗ್ ಸೆಂಟರ್ನಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಆಕಾಶ್, ಮೂರನೇ ಶ್ರೇಯಾಂಕಿತ ಕಿಶನ್ ಆರ್ ಅವರನ್ನು 42 ಪಿನ್ಗಳ ಅಂತರದಿಂದ ಸೋಲಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು. ಎರಡು ಪಂದ್ಯಗಳ ಒಟ್ಟು ಸ್ಕೋರ್ನಲ್ಲಿ ಆಕಾಶ್ 409 ಅಂಕ ಗಳಿಸಿದರೆ, ಕಿಶನ್ 367 ಅಂಕ ಗಳಿಸಿದರು.
ಫೈನಲ್ ಪಂದ್ಯದಲ್ಲಿ ಆರಂಭದಿಂದಲೇ ಪ್ರಾಬಲ್ಯ ಮೆರೆದ ಆಕಾಶ್ ಮೊದಲ ಗೇಮ್ನಲ್ಲಿ ಸತತ ಐದು ಸ್ಟ್ರೈಕ್ಗಳನ್ನು ದಾಖಲಿಸಿ 205 ಅಂಕ ಗಳಿಸಿದರು. ಕಿಶನ್ 181 ಅಂಕಗಳಿಗೆ ತೃಪ್ತಿಪಟ್ಟರು. ಇದರಿಂದ ಆಕಾಶ್ಗೆ ಆರಂಭದಲ್ಲೇ 35 ಪಿನ್ಗಳ ಮುನ್ನಡೆ ದೊರೆಯಿತು. ಎರಡನೇ ಗೇಮ್ನಲ್ಲೂ ಉತ್ತಮ ಪ್ರದರ್ಶನ ಮುಂದುವರಿಸಿದ ಆಕಾಶ್ 193 ಅಂಕ ಗಳಿಸಿದರೆ, ಕಿಶನ್ 186 ಅಂಕ ಗಳಿಸಿದರು.
ಇದಕ್ಕೂ ಮುನ್ನ ನಡೆದ ಮೊದಲ ನಾಕೌಟ್ ಪಂದ್ಯದಲ್ಲಿ ಆಕಾಶ್, ನಾಲ್ಕನೇ ಶ್ರೇಯಾಂಕಿತ ಸತೀಶ್ ಎ.ವಿ. ಅವರನ್ನು 441-371 ಅಂಕಗಳಿಂದ 70 ಪಿನ್ಗಳ ಅಂತರದಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿದ್ದರು. ಮತ್ತೊಂದು ನಾಕೌಟ್ ಪಂದ್ಯದಲ್ಲಿ ಕಿಶನ್ ಆರ್ ಅವರು ವಿಜಯ್ ಪಂಜಾಬಿ ಅವರನ್ನು 439-366 ಅಂಕಗಳಿಂದ 73 ಪಿನ್ಗಳ ಅಂತರದಲ್ಲಿ ಮಣಿಸಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದ್ದರು.
ಆರು ಗೇಮ್ಗಳ ಬ್ಲಾಕ್ನಲ್ಲಿ ಗರಿಷ್ಠ ಸರಾಸರಿ: ಆಕಾಶ್ ಅಶೋಕ್ ಕುಮಾರ್ (215.19)
18 ಗೇಮ್ಗಳಲ್ಲಿ ಗರಿಷ್ಠ ಸರಾಸರಿ: ಆಕಾಶ್ ಅಶೋಕ್ ಕುಮಾರ್ (204.67)
225ಕ್ಕಿಂತ ಹೆಚ್ಚಿನ ಸ್ಕೋರ್ಗಳ ಗರಿಷ್ಠ ಸಂಖ್ಯೆ: ಆಕಾಶ್ ಅಶೋಕ್ ಕುಮಾರ್ (3)
ಮಹಿಳಾ ವಿಭಾಗದ 12 ಗೇಮ್ಗಳಲ್ಲಿ ಗರಿಷ್ಠ ಸರಾಸರಿ: ಹಿತಾಶಾ ಸಿಸೋಡಿಯಾ (169.67)
ಆಕಾಶ್ ಅಶೋಕ್ ಕುಮಾರ್ – ಪ್ರಥಮ ಸ್ಥಾನ
ಕಿಶನ್ ಆರ್ – ದ್ವಿತೀಯ ಸ್ಥಾನ
ಸತೀಶ್ ಎ.ವಿ. – ತೃತೀಯ ಸ್ಥಾನ
ವಿಜಯ್ ಪಂಜಾಬಿ – ನಾಲ್ಕನೇ ಸ್ಥಾನ