

ಡೆಹ್ರಾಡೂನ್: ಮೈಸೂರಿನ ಪ್ರಜ್ವಲ್ ದೇವ್ ಹಾಗೂ ನಿಕಿ ಪೂಣಚ ಜೋಡಿ 38ನೇ ರಾಷ್ಟ್ರೀಯ ಕ್ರೀಡಾಕೂಟದ ಟೆನಿಸ್ ಸ್ಪರ್ಧೆಯ ಪುರುಷರ ಡಬಲ್ಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಹಿಳೆಯರ 4/400 ಮೀಟರ್ ರಿಲೇ ಹಾಗೂ ಸೈಕ್ಲಿಂಗ್‌ನಲ್ಲಿ ರಜತ ಪದಕ ಒಲಿದಿದೆ. ಟೆನಿಸ್ ಸಿಂಗಲ್ಸ್‌ನಲ್ಲಿ ಪ್ರಜ್ವಲ್ ದೇವ್ ಹಾಗೂ ಅಮೋದಿನಿ ನಾಯಕ್ ಕ್ರಮವಾಗಿ ಪುರುಷರ, ಮಹಿಳಾ ವಿಭಾಗದ ಸೆಮಿೈನಲ್‌ನಲ್ಲಿ ನಿರಾಸೆ ಅನುಭವಿಸಿದರು. ಇದರೊಂದಿಗೆ ಕೂಟದ 13ನೇ ದಿನ 1 ಚಿನ್ನ, 2 ರಜತ, 1 ಕಂಚು ಗೆದ್ದ ಕರ್ನಾಟಕ ಒಟ್ಟು 32 ಚಿನ್ನ,15 ಬೆಳ್ಳಿ ಹಾಗೂ19 ಕಂಚು ಸಹಿತ 66 ಪದಕಗಳೊಂದಿಗೆ ಮೂರನೇ ಸ್ಥಾನಕ್ಕೆ ಇಳಿದಿದೆ. ಸರ್ವೀಸಸ್ ಹಾಗೂ ಮಹಾರಾಷ್ಟ್ರ ತಂಡಗಳು ಕ್ರಮವಾಗಿ ಅಗ್ರ 2 ಸ್ಥಾನ ಪಡೆದುಕೊಂಡಿವೆ.
ಸೋಮವಾರ ನಡೆದ ಪುರುಷರ ಡಬಲ್ಸ್ ೈನಲ್‌ನಲ್ಲಿ ರಾಜ್ಯದ ನಂ.1 ಆಟಗಾರ ಪ್ರಜ್ವಲ್ ದೇವ್ ಹಾಗೂ ನಿಕಿ ಪೂಣಚ 6-3, 6-1 ನೇರಸೆಟ್‌ಗಳಿಂದ ಸರ್ವೀಸಸ್‌ನ ಇಶಾಕ್ ಇಕ್ಬಾಲ್-ೈಸಲ್ ಖಮರ್ ಎದುರು ಗೆಲುವು ಒಲಿಸಿಕೊಂಡರು. ಕಳೆದ ಆವೃತ್ತಿಯಲ್ಲಿ ಆದಿಲ್ ಕಲ್ಯಾಣ್‌ಪುರ ಜತೆಗೂಡಿ ರಜತ ಜಯಿಸಿದ್ದ ಪ್ರಜ್ವಲ್ ಈ ಬಾರಿ ಬಂಗಾರಕ್ಕೆ ಕೊರಳೊಡ್ಡಿದರು.
ಸಿಂಗಲ್ಸ್ ಸೆಮಿೈನಲ್‌ನಲ್ಲಿ ಪ್ರಜ್ವಲ್ ದೇವ್ 7-5, 4-6, 1-6 ಮೂರು ಸೆಟ್‌ಗಳ ಹೋರಾಟದಲ್ಲಿ ಇಶಾಕ್ ಇಕ್ಬಾಲ್ ಎದುರು ಸೋಲುಂಡರೆ, ಮಹಿಳಾ ವಿಭಾಗದಲ್ಲಿ ಅಮೋದಿನಿ ನಾಯಕ್ 0-6 ರಿಂದ ಮಹಾರಾಷ್ಟ್ರದ ವೈಷ್ಣವಿ ಅಡ್ಕರ್ ಎದುರು ಹಿನ್ನಡೆಯಲ್ಲಿದ್ದಾಗ ಗಾಯದ ಸಮಸ್ಯೆಯಿಂದ ಹಿಂದೆ ಸರಿದರು. ಇದರೊಂದಿಗೆ ಪ್ರಜ್ವಲ್ ದೇವ್ ಹಾಗೂ ಅಮೋದಿನಿ ಕಂಚಿಗೆ ಸಮಾಧಾನ ಕಂಡರು.
ಜುಡೋದಲ್ಲಿ ಮೊದಲ ಪದಕ: ಸಮತಾ ರಾಣೆ ಜುಡೋ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಪದಕ ತಂದುಕೊಟ್ಟರು. ಮಹಿಳೆಯರ 57 ಕೆಜಿಗಿಂತ ಕಡಿಮೆ ವಿಭಾಗದಲ್ಲಿ ಸಮತಾ ರಾಣೆ ಕಂಚು ಜಯಿಸಿದರು.
ರಿಲೇಯಲ್ಲಿ 2ನೇ ಪದಕ
ಮಹಿಳೆಯರ ರಿಲೇ ವಿಭಾಗದಲ್ಲಿ ಸತತ ಎರಡನೇ ದಿನವೂ ರಾಜ್ಯಕ್ಕೆ ಪದಕ ಒಲಿದಿದೆ. 4/400 ಮೀಟರ್ ರಿಲೇ ಸ್ಪರ್ಧೆಯಲ್ಲಿ ದೀಕ್ಷಿತ ಗೌಡ, ಅರ್ಪಿಯಾ ಇ.ಬಿ., ಜ್ಯೋತಿಕಾ ಹಾಗೂ ಪ್ರಜ್ಞಾ ಕೆ. ಒಳಗೊಂಡ ತಂಡ 3 ನಿಮಿಷ 43.89 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ರಾಜ್ಯಕ್ಕೆ ದಿನದ 2ನೇ ರಜತ ಪದಕ ಗೆದ್ದುಕೊಟ್ಟಿತು. ಅಯ್ಯಪ್ಪ ಹಾಗೂ ಉದಯ್ ಕುಮಾರ್ ತಂಡದ ಕೋಚ್‌ಗಳಾಗಿದ್ದಾರೆ. ಪಂಜಾಬ್ (3ನಿ,41.77ಸೆ) ಹಾಗೂ ಹರಿಯಾಣ (3ನಿ,45.83) ತಂಡಗಳು ಕ್ರಮವಾಗಿ ಬಂಗಾರ, ಕಂಚು ಗೆದ್ದುಕೊಂಡವು.
ಸೈಕ್ಲಿಂಗ್‌ನಲ್ಲಿ 6ನೇ ಮೆಡಲ್
ಸೈಕ್ಲಿಂಗ್‌ನ ಮಹಿಳೆಯರ ಕ್ರಾಸ್ ಕಂಟ್ರಿ ಟೈಮ್ ಟ್ರಯಲ್‌ನಲ್ಲಿ ರಾಜ್ಯದ ಸ್ಟಾರ್ ನರ್ಜರಿ ಬೆಳ್ಳಿ ಪದಕ ಜಯಿಸಿದರು. ೈನಲ್‌ನಲ್ಲಿ 46 ನಿಮಿಷ 44.41 ಸೆಕೆಂಡ್‌ಗಳಲ್ಲಿ ಗುರಿ ಕ್ರಮಿಸಿದ ನರ್ಜರಿ ಎರಡನೇ ಸ್ಥಾನ ಪಡೆದರೆ, ಮಹಾರಾಷ್ಟ್ರದ ಪ್ರಣೀತಾ ಸೋಮನ್ (46ನಿ,26.82ಸೆ) ಚಿನ್ನ, ಉತ್ತರಾಖಂಡದ ಸುನೀತಾ ಶ್ರೇಷ್ಠಾ (48ನಿ,38.97) ಕಂಚು ಗೆದ್ದರು. ಸೈಕ್ಲಿಂಗ್‌ನಲ್ಲಿ ರಾಜ್ಯಕ್ಕೆ ಕೂಟದ 6ನೇ ಪದಕ ಇದಾಗಿದೆ.
ದೇವ್ ರಾಷ್ಟ್ರೀಯ ದಾಖಲೆ
ಮಧ್ಯಪ್ರದೇಶದ ದೇವ್ ಕುಮಾರ್ ಮೀನಾ ನೂತನ ರಾಷ್ಟ್ರೀಯ ದಾಖಲೆಯೊಂದಿಗೆ ಪುರುಷರ ಪೋಲೊ ವಾಲ್ಟ್ ಸ್ಪರ್ಧೆಯಲ್ಲಿ ಬಂಗಾರ ಗೆದ್ದುಕೊಂಡರು. ೈನಲ್‌ನಲ್ಲಿ 5.32 ಮೀಟರ್ ಎತ್ತರವನ್ನು ದಾಟುವಲ್ಲಿ ಯಶಸ್ವಿಯಾದ 19 ವರ್ಷದ ದೇವ್ ಮೀನಾ, 2022ರ ಆವೃತ್ತಿಯಲ್ಲಿ ತಮಿಳುನಾಡಿನ ಸುಬ್ರಮಣಿ ಶಿವ ರಚಿಸಿದ ದಾಖಲೆಯನ್ನು ಮುರಿದರು. ಜತೆಗೆ ಕಳೆದ ಆವೃತ್ತಿಯ ಚಾಂಪಿಯನ್ ಪಟ್ಟವೂ ಉಳಿಸಿಕೊಂಡರು.ತಮಿಳುನಾಡಿನ ಜಿ. ರೀಗನ್ ಹಾಗೂ ಉತ್ತರಪ್ರದೇಶದ ಕುಲದೀಪ್ ಕುಮಾರ್ 5 ಮೀಟರ್ ಎತ್ತರ ದಾಟಿ ಕ್ರಮವಾಗಿ 2,3ನೇ ಸ್ಥಾನ ಪಡೆದುಕೊಂಡರು.