36 ರನ್​ಗೆ ಆಲೌಟ್... ಪಿಂಕ್​ ಬಾಲ್​ ಟೆಸ್ಟ್​ಗೂ ಮುನ್ನ Team India ಬಗ್ಗೆ ವ್ಯಂಗ್ಯವಾಡಿದ ಆಸೀಸ್​ ಬ್ಯಾಟರ್​

Team India
Published on

ಅಡಿಲೇಡ್​: ಇಲ್ಲಿನ ಅಡಿಲೇಡ್​ ಓವಲ್​ ಕ್ರೀಡಾಂಗಣದಲ್ಲಿ ನವೆಂಬರ್​ 06ರಿಂದ ಆರಂಭವಾಗಲಿರುವ ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವಿನ ಬಾರ್ಡರ್​-ಗವಾಸ್ಕರ್​ ಟ್ರೋಫಿಯ ಪಿಂಕ್​ ಬಾಲ್​ ಪಂದ್ಯಕ್ಕೆ ಉಭಯ ತಂಡಗಳು ಭರ್ಜರಿ ತಯಾರಿ ನಡೆಸಿದ್ದು, ಮೊದಲ ಪಂದ್ಯದ ಗೆಲುವಿನ ಹುಮ್ಮಸ್ಸಿನಲ್ಲಿರುವ ಭಾರತ (Team India) ತನ್ನ ವಿನ್ನಿಂಗ್​ ಸ್ಟ್ರಿಕ್​ಅನ್ನು ಮುಂದುವರೆಸಲು ಸಜ್ಜಾಗಿದೆ.

ಇನ್ನೂ ಪಂದ್ಯ ಶುರುವಾಗುವುದಕ್ಕೆ ಎರಡು ದಿನಗಳು ಉಳಿದಿದ್ದು, ಇದಕ್ಕೂ ಮುನ್ನ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ವಿಕೆಟ್​ ಕೀಪರ್​, ಬ್ಯಾಟರ್​ ಅಲೆಕ್ಸ್​ ಕ್ಯಾರಿ (Alex Carey) ಆಸ್ಟ್ರೇಲಿಯಾ ತಂಡ ತಯಾರಿ ಬಗ್ಗೆ ಮಾಹಿತಿ ನೀಡಿದ್ದು, ಈ ವೇಳೆ ಅಲೆಕ್ಸ್​​ ಕ್ಯಾರಿ ಆಡಿರುವ ಮಾತು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.

2020ರಲ್ಲಿ ನಡೆದ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ 36 ರನ್​ಗಳಿಗೆ ಆಲೌಟ್​ ಆಗಿತ್ತು. ಆ ಪಂದ್ಯ ನನಗೆ ಇನ್ನೂ ನೆನೆಪಿದೆ. ಟೀಮ್​ ಇಂಡಿಯಾ 36 ರನ್​ಗಳಿಗೆ ಆಲೌಟ್​ ಆಗಿರುವುದು ಐತಿಹಾಸಿಕ ಘಟನೆಯಾಗಿದ್ದು, ಈ ಬಾರಿ ಅದು ರಿಪೀಟ್​ ಆಗುವುದಿಲ್ಲ. ಆದರೆ ಪಿಂಕ್​ ಬಾಲ್​ ಟೆಸ್ಟ್​ಅನ್ನು ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ನನಗಿದೆ.

ಪಿಂಕ್​ ಬಾಲ್​ ಕ್ರಿಕೆಟ್​ನಲ್ಲಿ (Pink Ball Cricket) ನಾವು ಉತ್ತಮ ದಾಖಲೆಯನ್ನು ಹೊಂದಿದ್ದು, ಇದರ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ. ಹೀಗಾಗಿ ಈ ಪಂದ್ಯವನ್ನು ಗೆದ್ದು ನಾವು ಸರಣಿಯಲ್ಲಿ ಕಮ್​​​​​​ಬ್ಯಾಕ್​ ಮಾಡಲಿದ್ಧೇವೆ. ನಮ್ಮ ವಿಧಾನ ಹಾಗೂ ಆಟದ ಶೈಲಿಯೇ ಸಾಕು ನಾವು ಎರಡನೇ ಟೆಸ್ಟ್​ ಪಂದ್ಯದಲ್ಲಿ ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳುತ್ತೇವೆ ಎಂದು ಆಸ್ಟ್ರೇಲಿಯಾ ತಂಡದ ವಿಕೆಟ್​ ಕೀಪರ್​, ಬ್ಯಾಟರ್​ ಅಲೆಕ್ಸ್​ ಕ್ಯಾರಿ (Alex Carey) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net