

ನವದೆಹಲಿ: ಇದೇ ನವೆಂಬರ್ 24-25ರಂದು ಐಪಿಎಲ್ ಹರಾಜು ಪ್ರಕ್ರಿಯೆ (IPL 2025 Auction) ನಡೆಯಬಹುದು ಎಂಬ ವರದಿಗಳು ಈಗಾಗಲೇ ಜಾಲತಾಣಗಳಲ್ಲಿ ಸದ್ದು ಮಾಡಲು ಆರಂಭಿಸಿವೆ. ಈ ಮಧ್ಯೆ ಇತ್ತೀಚೆಗಷ್ಟೇ ರಿಟೆನ್ಶನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಸ್ಟಾರ್ ಪ್ಲೇಯರ್ಗಳಾದ ಶ್ರೇಯಸ್ ಅಯ್ಯರ್, ಫಾಫ್ ಡು ಪ್ಲೆಸಿಸ್, ಕೆ.ಎಲ್.ರಾಹುಲ್, ರಿಷಭ್ ಪಂತ್ ಮತ್ತು ಶಿಖರ್ ಧವನ್ ಆಕ್ಷನ್ಗೆ ಎಂಟ್ರಿ ಕೊಟ್ಟಿದ್ದಾರೆ. ವಿಶೇಷ ಎಂದರೆ ಈ ಐವರು ಕೂಡ ಆಯಾ ಫ್ರಾಂಚೈಸಿಯ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದವರು. ಆದರೂ ಸಹ ಇವರನ್ನೇ ತಂಡದಿಂದ ಕೈಬಿಟ್ಟಿರುವುದು ಇದೀಗ ದೊಡ್ಡ ಆಶ್ಚರ್ಯಕ್ಕೆ ಕಾರಣವಾಗಿದೆ.
ಇನ್ನು ಕಳೆದ ಸೀಸನ್ ಕೋಲ್ಕತ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ಸ್ ಪಟ್ಟಕೇರಿಸಿದ್ದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಅವರನ್ನು ರಿಟೈನ್ ಮಾಡಿಕೊಳ್ಳದ ಫ್ರಾಂಚೈಸಿ, ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ರನ್ನು ಸಹ ಉಳಿಸಿಕೊಳ್ಳದೆ ಕೈಬಿಟ್ಟಿದೆ. ಶಾರೂಖ್ ಖಾನ್ ಮಾಲೀಕತ್ವದ ಕೆಕೆಆರ್ ಫ್ರಾಂಚೈಸಿ ಪರ ಬ್ಯಾಟ್ ಹಾಗೂ ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಈ ಇಬ್ಬರು ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳಲು ಮ್ಯಾನೇಜ್ಮೆಂಟ್ ಆಸಕ್ತಿ ತೋರದಿರಲು ಕಾರಣವೇನು ಎಂಬ ಹಲವಾರು ಪ್ರಶ್ನೆಗಳನ್ನು ಕ್ರಿಕೆಟ್ ಪ್ರಿಯರು ಜಾಲತಾಣಗಳ ಮುಖೇನ ಕೇಳಿದ್ದರು. ಆದರೆ, ಇದ್ಯಾವುದಕ್ಕೂ ನಿರೀಕ್ಷಿಸಿದ ಉತ್ತರ ಸಿಗಲಿಲ್ಲ.
ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಆಡಿದ್ದ ಮಿಚೆಲ್ ಸ್ಟಾರ್ಕ್, ತಂಡದ ಪರ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದರು. ಉತ್ತಮ ಆಟದ ಜತೆಗೆ ಮೈದಾನದಲ್ಲಿ ಎದುರಾಳಿ ತಂಡದವರೊಂದಿಗೆ ಕಿರಿಕ್ ಕೂಡ ಮಾಡಿಕೊಂಡಿದ್ದರು ಮಿಚೆಲ್. ಇದು ಅಂದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಅಸಲಿಗೆ ಸ್ಟಾರ್ಕ್, ಹೊಸ ಚೆಂಡನ್ನು ಸ್ವಿಂಗ್ ಮಾಡುವ ಹಾಗೂ ಡೆತ್ ಓವರ್‌ಗಳಲ್ಲಿ ಯಾರ್ಕರ್‌ಗಳನ್ನು ಎಸೆಯುವ ಸಾಮರ್ಥ್ಯವನ್ನು ಒಳಗೊಂಡಿದ್ದಾರೆ. ಇದು ಯಾವುದೇ ತಂಡಕ್ಕಾಗಲಿ ಬಲ ತುಂಬುವುದರಲ್ಲಿ ಅನುಮಾನವಿಲ್ಲ. ಸದ್ಯ ಮಿಚೆಲ್ ಅವರ ಬೌಲಿಂಗ್ ದಾಳಿ ಮೇಲೆ ಕಣ್ಣಿಟ್ಟಿರುವ ಆ ಮೂರು ಫ್ರಾಂಚೈಸಿಗಳು ಯಾವುದು? ಎಂಬುದರ ವಿವರ ಹೀಗಿದೆ ಗಮನಿಸಿ.