ಮುಕೇಶ್​, ಸಿರಾಜ್​ ಬಿಗಿ ದಾಳಿಯ ನಡುವೆ ಭಾರತ ಎ ತಂಡಕ್ಕೆ ಇನಿಂಗ್ಸ್​ ಹಿನ್ನಡೆ

2ನೇ ಇನಿಂಗ್ಸ್​ನಲ್ಲಿ ಧ್ರುವ ಜುರೆಲ್​ ಬಳಗ ಎಚ್ಚರಿಕೆಯ ಆರಂಭ ಕಂಡಿದ್ದು, ಕೊನೇ ದಿನ ಡ್ರಾ ಸಾಧಿಸುವ ನಿರೀಕ್ಷೆ ಮೂಡಿಸಿದೆ.
cricket
ಮುಕೇಶ್​ ಕುಮಾರ್​ಸಂಗ್ರಹ ಚಿತ್ರ
Published on: 

ಕೆಸ್ಟ್​ಚರ್ಚ್​: ವೇಗಿಗಳಾದ ಮುಕೇಶ್​ ಕುಮಾರ್​ (87ಕ್ಕೆ 5) ಮತ್ತು ಮೊಹಮದ್​ ಸಿರಾಜ್​ (118ಕ್ಕೆ 4) ಬಿಗಿ ಬೌಲಿಂಗ್​ ದಾಳಿಯ ನಡುವೆಯೂ ಭಾರತ ಎ ತಂಡ ಆತಿಥೇಯ ನ್ಯೂಜಿಲೆಂಡ್​ ಎ ವಿರುದ್ಧದ 2ನೇ ಚತುರ್ದಿನ ಪಂದ್ಯದಲ್ಲಿ ಮೊದಲ ಇನಿಂಗ್ಸ್​ ಹಿನ್ನಡೆ ಅನುಭವಿಸಿದೆ. ಬಳಿಕ 2ನೇ ಇನಿಂಗ್ಸ್​ನಲ್ಲಿ ಧ್ರುವ ಜುರೆಲ್​ ಬಳಗ ಎಚ್ಚರಿಕೆಯ ಆರಂಭ ಕಂಡಿದ್ದು, ಕೊನೇ ದಿನ ಡ್ರಾ ಸಾಧಿಸುವ ನಿರೀಕ್ಷೆ ಮೂಡಿಸಿದೆ.

ಹ್ಯಾಗ್ಲೆ ಓವಲ್​ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸೋಮವಾರ 3 ವಿಕೆಟ್​ಗೆ 218 ರನ್​ಗಳಿಂದ 3ನೇ ದಿನದಾಟ ಆರಂಭಿಸಿದ ನ್ಯೂಜಿಲೆಂಡ್​ ಎ ತಂಡ, 132.5 ಓವರ್​ಗಳಲ್ಲಿ 424 ರನ್​ಗಳಿಗೆ ಆಲೌಟ್​ ಆಯಿತು. ಈ ಮೂಲಕ ಮೊದಲ ಇನಿಂಗ್ಸ್​ನಲ್ಲಿ 78 ರನ್​ ಮುನ್ನಡೆ ಸಾಧಿಸಿತು. ಪ್ರತಿಯಾಗಿ ಯಶಸ್ವಿ ಜೈಸ್ವಾಲ್​ (20*) ಮತ್ತು ಸಾಯಿ ಸುದರ್ಶನ್​ (11*) ಭಾರತಕ್ಕೆ ಎಚ್ಚರಿಕೆಯ ಆರಂಭ ಒದಗಿಸಿದ್ದು, ದಿನದಂತ್ಯಕ್ಕೆ 11 ಓವರ್​ಗಳಲ್ಲಿ ವಿಕೆಟ್​ ನಷ್ಟವಿಲ್ಲದೆ 32 ರನ್​ ಗಳಿಸಿದೆ. ಭಾರತ ಎ ತಂಡ ಸದ್ಯ 46 ರನ್​ ಹಿನ್ನಡೆಯಲ್ಲಿದೆ.

ಭಾರತ ಎ: 346 ಮತ್ತು 11 ಓವರ್​ಗಳಲ್ಲಿ ವಿಕೆಟ್​ ನಷ್ಟವಿಲ್ಲದೆ 32 (ಜೈಸ್ವಾಲ್​ 20*, ಸುದರ್ಶನ್​ 11*). ನ್ಯೂಜಿಲೆಂಡ್​ ಎ: 424 (ಬಾಯ್ಲ್​ 110, ಫಾಕ್ಸ್​ಕ್ರಾಫ್ಟ್​ 93, ಹೇ 31, ಕ್ರಿಸ್ಟಿಯನ್​ ಕ್ಲಾರ್ಕ್​ 41, ಶೀಟ್​ 40, ಲೆನಾಕ್ಸ್​ 32*, ಮೆಕ್​ಕೇ 33, ಮುಕೇಶ್​ 87ಕ್ಕೆ 5, ಸಿರಾಜ್​ 118ಕ್ಕೆ 4).