ನಮ್ಮ ಬೆಂಗಳೂರು ಚೆಸ್‌ ಓಪನ್‌ನಲ್ಲಿ ಮಿಂಚಿದ ಅಗ್ರ ಶ್ರೇಯಾಂಕಿತ ಆಟಗಾರರು

New Project
Published on

ಬೆಂಗಳೂರು: 2ನೇ ನಮ್ಮ ಬೆಂಗಳೂರು ಇಂಟರ್‌ನ್ಯಾಷನಲ್‌ ಗ್ರ್ಯಾಂಡ್‌ ಮಾಸ್ಟರ್ಸ್‌ ಓಪನ್‌ ಚೆಸ್‌ ಪಂದ್ಯಾವಳಿ 2025ರ ಎರಡನೇ ಸುತ್ತಿನಲ್ಲಿಅಗ್ರ ಶ್ರೇಯಾಂಕಿತ ಆಟಗಾರರಿಂದ ಉತ್ತಮ ಪ್ರದರ್ಶನ ಮೂಡಿ ಬಂದಿದ್ದು 50 ಸ್ಪರ್ಧಿಗಳು ತಲಾ 2 ಅಂಕಗಳನ್ನು ಗಳಿಸಿದ್ದಾರೆ. ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿನಡೆಯುತ್ತಿರುವ ಪ್ರತಿಷ್ಠಿತ ಹತ್ತು ಸುತ್ತಿನ ಸ್ವಿಸ್‌ ಲೀಗ್‌ ಪಂದ್ಯಾವಳಿಯಲ್ಲಿ319 ಸ್ಪರ್ಧಿಗಳು ಭಾಗವಹಿಸಿದ್ದಾರೆ.

ಈ ಕುರಿತು ನಮ್ಮ ಬೆಂಗಳೂರು ಅಂತಾರಾಷ್ಟ್ರೀಯ ಜಿಎಂ ಓಪನ್‌ ಪಂದ್ಯಾವಳಿಯ ಸಂಘಟನಾ ಕಾರ್ಯದರ್ಶಿ ಸೌಮ್ಯ ಎಂ.ಯು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಭಾರತದ ಅಗ್ರ ಶ್ರೇಯಾಂಕಿತ ಜಿಎಂ ಪಿ ಇನಿಯನ್‌ ಅವರು, ಆರವ್‌ ಸಿನ್ಹಾ ಅವರನ್ನು ಸೋಲಿಸಲು ಉತ್ತಮ ಎಂಡ್‌ ಗೇಮ್‌ ತಂತ್ರವನ್ನು ಪ್ರದರ್ಶಿಸಿದರೆ, ಸ್ಥಳೀಯ ತಾರೆ ಮತ್ತು ನಾಲ್ಕನೇ ಶ್ರೇಯಾಂಕದ ಜಿಎಂ ಪ್ರಣವ್‌ ಆನಂದ್‌ ಮತ್ತು ಸಹ ಜಿಎಂ ಸ್ಟಾನಿ ಕೂಡ ಚೇತೋಹಾರಿ ಗೆಲುವುಗಳನ್ನು ಗಳಿಸಿದರು.

ದಿನದ ಅತ್ಯುತ್ತಮ ಪ್ರದರ್ಶನಗಳಲ್ಲಿ ಪ್ರಥಮೇಶ್‌ ಶೆರ್ಲಾ (ಎಲೋ 2157 ರೇಟಿಂಗ್‌) ಆರನೇ ಶ್ರೇಯಾಂಕದ ಐಎಂ ಅರೌನ್ಯಾಕ್‌ ಘೋಷ್‌ (ಎಲೋ 2525 ರೇಟಿಂಗ್‌) ಅವರನ್ನು ಸೋಲಿಸಿದರು. ಮತ್ತೊಂದು ಅಚ್ಚರಿಯ ಫಲಿತಾಂಶದಲ್ಲಿ ಹರ್ಷಿತ್‌ ರಂಜನ್‌ ಸಾಹು 12ನೇ ಶ್ರೇಯಾಂಕದ ಐಎಂ ಗೌತಮ್‌ ಕೃಷ್ಣ ವಿರುದ್ಧ ಡ್ರಾ ಸಾಧಿಸುವಲ್ಲಿಯಶಸ್ವಿಯಾದರು.

ಕುತೂಹಲಕಾರಿ ಸಂಗತಿಯೆಂದರೆ, ಮೂವರು ಮಾಜಿ ರಾಷ್ಟ್ರೀಯ ಮಹಿಳಾ ಚಾಂಪಿಯನ್‌ಗಳು ಕಣದಲ್ಲಿದ್ದಾರೆ ಮತ್ತು ಎರಡನೇ ಸುತ್ತಿನಲ್ಲಿಐದು ಬಾರಿಯ ಚಾಂಪಿಯನ್‌ ಐಎಂ ಎಸ್‌.ವಿಜಯಲಕ್ಷ್ಮಿ ಅವರು ಅಶ್ವಿನ್‌ ಸಾಯಿರಾಮ್‌ ವಿರುದ್ಧ ಡ್ರಾ ಸಾಧಿಸಿದರು, ಅವರು ಸುಮಾರು 300 ಎಲೋ ಪಾಯಿಂಟ್‌ಗಳ ಕಡಿಮೆ ರೇಟಿಂಗ್‌ನೊಂದಿಗೆ ಆಟಕ್ಕೆ ಪ್ರವೇಶಿಸಿದರು. ಏತನ್ಮಧ್ಯೆ, 5 ಬಾರಿ ಪ್ರಶಸ್ತಿ ಗೆದ್ದಿರುವ ಮಾಜಿ ಚಾಂಪಿಯನ್‌ ಆರ್‌.ಪದ್ಮಿನಿ ಮತ್ತು ಮೇರಿ ಆನ್‌ ಗೋಮ್ಸ… ಸತತ ಗೆಲುವಿನೊಂದಿಗೆ ತಮ್ಮ ಗೆಲುವಿನ ಹಾದಿಯನ್ನು ಹಾಗೆಯೇ ಉಳಿಸಿಕೊಂಡರು.

ಬಿ.ಟಿ.ಮುರಳೀಕೃಷ್ಣ ಅವರು ಸುಮಾರು 300 ಅಂಕಗಳ ಅಧಿಕ ರೇಟಿಂಗ್‌ ಪಡೆದ ಆಟಗಾರ ಐ.ಎಂ.ಸಾತ್ವಿಕ್‌ ಅಡಿಗ ಅವರನ್ನು ಮಣಿಸಿ ಸ್ಮರಣೀಯ ಗೆಲುವು ಸಾಧಿಸಿದರು. 3ನೇ ರೌಂಡ್‌ ಟೇಬಲ್‌ ಸಂಖ್ಯೆ 4ರ ಆಸಕ್ತಿದಾಯಕ ಕದನವಾಗಿದೆ - ಅನೇಕ ಪಂದ್ಯಾವಳಿಗಳನ್ನು ಗೆದ್ದ ಮಾಜಿ ಪ್ರತಿಭೆ (ಮೇರಿ) ಮತ್ತು ಪ್ರಸ್ತುತ ಪ್ರಣವ್‌, ಕರ್ನಾಟಕದ ಅತ್ಯುತ್ತಮ ನಿರೀಕ್ಷೆಯಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net