

ನವದೆಹಲಿ: ಮೊದಲೆಲ್ಲಾ ಕ್ರಿಕೆಟ್ ಆಟ ಟಿವಿ ಲೈವ್ ನೋಡುತ್ತಿದ್ದ ವೀಕ್ಷಕರು ಮೈದಾನಕ್ಕೆ ಬಂದು ಆಟ ವೀಕ್ಷಿಸುತ್ತಿದ್ದಾರೆ. ಏಕೆಂದರೆ ಈ ಜನಪ್ರಿಯತೆಗೆ ಇನ್ನೊಂದು ಮುಖ್ಯವಾದ ಕಾರಣ. ಕ್ರಿಕೆಟ್ ಇನ್ನೂ ಜನಪ್ರಿಯತೆ ಕಳೆದುಕೊಂಡಿಲ್ಲ ಎಂಬುದು ಸಾಬೀತಾಗಿದೆ. ವಿಶ್ವ ಕಪ್ ವೀಕ್ಷಕರ ಸಂಖ್ಯೆಯಲ್ಲಿ ಹೊಸ ದಾಖಲೆಯಾಗಿದೆ.
ಭಾರತದಲ್ಲಿ ನಡೆದ ವಿಶ್ವ ಕಪ್ 2023ರ ಟೂರ್ನಿಯ ಲೀಗ್ ಹಂತದ ಪಂದ್ಯಗಳನ್ನು ಇಲ್ಲಿವರೆಗೆ 10 ಲಕ್ಷ ಮಂದಿ ಸ್ಟೇಡಿಯಂನಲ್ಲಿ ವೀಕ್ಷಣೆ ಮಾಡುವ ಮೂಲಕ ಇದು ಏಕ ದಿನ ವಿಶ್ವಕಪ್ ಇತಿಹಾಸದಲ್ಲಿಯೇ ಸಾರ್ವಕಾಲಿಕ ದಾಖಲೆಯಾಗಿದೆ. ಈ ಮೂಲಕ ಏಕ ದಿನ ಕ್ರಿಕೆಟ್ ಇನ್ನೂ ಜನಪ್ರಿಯತೆ ಕಳೆದುಕೊಂಡಿಲ್ಲ ಎಂಬುದು ಸಾಬೀತಾಗಿದೆ.
ನವೆಂಬರ್ 15 ಮತ್ತು 16 ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯಗಳು ಮತ್ತು ನವೆಂಬರ್ 19ರಂದು ಫೈನಲ್ ಪಂದ್ಯಗಳು ಇನ್ನೂ ಬಾಕಿ ಇವೆ. ಅದಕ್ಕಿಂತ ಮೊದಲೇ ಇದುವರೆಗಿನ ಗರಿಷ್ಠ ಪ್ರಮಾಣದ ಪ್ರೇಕ್ಷಕರನ್ನು ವಿಶ್ವ ಕಪ್ ಕಂಡಿದೆ. ಇದೇ ವೇಳೆ ಡಿಜಿಟಲ್ ವೀಕ್ಷಣೆಗಯ ದಾಖಲೆಗಳೂ ಮುರಿದಿವೆ.
ಈ ಮೈಲಿಗಲ್ಲಿನ ಬಗ್ಗೆ ಮಾತನಾಡಿದ ಐಸಿಸಿ ಈವೆಂಟ್ಸ್ ಮುಖ್ಯಸ್ಥ ಕ್ರಿಸ್ ಟೆಟ್ಲಿ, ” 10 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಕ್ರಿಕೆಟ್ ಜಾತ್ರೆಯಲ್ಲಿ ಭಾವಹಿಸುವ ಮೂಲಕ ದಾಖಲೆ ಮುರಿಯಲಾಗಿದೆ. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಗೆ ಇರುವ ಏಕದಿನ ಸ್ವರೂಪದ ಮೇಲಿನ ಬೆಂಬಲ ಮತ್ತು ಆಸಕ್ತಿಯನ್ನು ಸಾಬೀತುಪಡಿಸಿದೆ. ಇದು ವಿಶ್ವಕಪ್ ಕ್ರಿಕೆಟ್ಗೆ ಎಷ್ಟು ಮೌಲ್ಯವಿದೆ ಎಂಬುದನ್ನು ಎತ್ತಿ ತೋರಿಸಿದೆ ಎಂದಿದ್ದಾರೆ. ಹೇಳಿದ್ದಾರೆ.
ದಾಖಲೆಯ ಬಗ್ಗೆ ಪ್ರತಿಕ್ರಿಯಿಸಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ನಾವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದ್ದೇವೆ ಎಂದು ನನಗೆ ನಿಜವಾಗಿಯೂ ಸಂತೋಷವಾಗುತ್ತಿದೆ. ಈ ಮೆಗಾ ಕಾರ್ಯಕ್ರಮಕ್ಕೆ ಮುನ್ನ ದಣಿವರಿಯದೆ ಕೆಲಸ ಮಾಡಿದ ನಮ್ಮ ನಿಷ್ಠಾವಂತ ಅಭಿಮಾನಿಗಳು, ರಾಜ್ಯ ಸಂಘಗಳು ಮತ್ತು ಪ್ರತಿಯೊಬ್ಬ ಪಾಲುದಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಎಂದು ಅವರು ಬರೆದಿದ್ದಾರೆ.