ಡಿ.6ರಿಂದ ಕ್ಲಬ್​ ವಿಶ್ವ ಚಾಂಪಿಯನ್​ಷಿಪ್​; ಬೆಂಗಳೂರಿಗೆ ಜಾಗತಿಕ ವಾಲಿಬಾಲ್​ ತಾರೆಯರು

volly web
Published on

ಬೆಂಗಳೂರು: ಡಿಸೆಂಬರ್​ 6ರಿಂದ 10ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಪುರುಷರ ಕ್ಲಬ್​ ವಿಶ್ವ ಚಾಂಪಿಯನ್​ಷಿಪ್​ಗಾಗಿ ಜಾಗತಿಕ ವಾಲಿಬಾಲ್​ ತಾರೆಯರು ಆಗಮಿಸಲಿದ್ದಾರೆ. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಆಯೋಜನೆಗೊಂಡಿರುವ ಈ ಟೂರ್ನಿಯ ಪಂದ್ಯಗಳು ಕೋರಮಂಗಲದ ಒಳಾಂಗಣ ಸ್ಟೇಡಿಯಂನಲ್ಲಿ ನಡೆಯಲಿವೆ.

5 ದಿನಗಳಲ್ಲಿ ಅಗ್ರ 6 ಕ್ಲಬ್​ ತಂಡಗಳು ಒಟ್ಟು 10 ಪಂದ್ಯಗಳನ್ನು ಆಡಲಿವೆ. ಆತಿಥೇಯ ಭಾರತವನ್ನು ಅಹಮದಾಬಾದ್​ ಡಿಫೆಂಡರ್ಸ್​ ತಂಡ ಪ್ರತಿನಿಧಿಸಲಿದೆ. ಈ ವರ್ಷ ನಡೆದ ಪ್ರೈಮ್​ ವಾಲಿಬಾಲ್​ ಲೀಗ್​ 2ನೇ ಆವೃತ್ತಿಯಲ್ಲಿ ಪ್ರಶಸ್ತಿ ಜಯಿಸಿದ ಆಧಾರದಲ್ಲಿ ಅಹಮದಾಬಾದ್​ ಡಿಫೆಂಡರ್ಸ್​ ತಂಡ ಈ ಟೂರ್ನಿಗೆ ಅರ್ಹತೆ ಸಂಪಾದಿಸಿದೆ.

ಹಾಲಿ ಚಾಂಪಿಯನ್​ ಸರ್​ ಸೇಫ್ಟಿ ಸುಸ ಪೆರುಗಿಯಾ (ಇಟಲಿ), ಸದಾ ಕ್ರುಜೆರೋ ವೊಲಿ ಮತ್ತು ಮಿನಾಸ್​ ಟೆನಿಸ್​ ಕ್ಲಬ್​ (ಬ್ರೆಜಿಲ್​), ಸುಂಟೊರಿ ಸನ್​ಬರ್ಡ್ಸ್​ ಕ್ಲಬ್​ (ಜಪಾನ್​) ಮತ್ತು ಹಲ್ಕ್​ಬ್ಯಾಂಕ್​ ಸ್ಪೋರ್​ ಕುಲುಬು (ಟರ್ಕಿ) ಟೂರ್ನಿಯಲ್ಲಿ ಆಡಲಿರುವ ಇತರ ತಂಡಗಳಾಗಿವೆ. ಪಂದ್ಯಗಳು ಸೋನಿ ಟೆನ್​1 ಮತ್ತು ಸೋನಿ ಟೆನ್​3 ಚಾನಲ್​ಗಳಲ್ಲಿ ನೇರಪ್ರಸಾರವನ್ನೂ ಕಾಣಲಿವೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net