

ಕರೊನಾ ವೈರಸ್ 2ನೇ ಅಲೆ ಜೋರಾಗಿರುವ ನಡುವೆ ವಿಶ್ವದ ಶ್ರೀಮಂತ ಟಿ20 ಲೀಗ್ ಐಪಿಎಲ್ 14ನೇ ಆವೃತ್ತಿಗೆ ವೇದಿಕೆ ಸಜ್ಜಾಗಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಶುಕ್ರವಾರ ಚೆನ್ನೈನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದೊಂದಿಗೆ 52 ದಿನಗಳ ಕ್ರಿಕೆಟ್ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಈ ವರ್ಷ ಭಾರತದಲ್ಲೇ ನಿಗದಿಯಾಗಿರುವ ಟಿ20 ವಿಶ್ವಕಪ್ಗೆ ಸಿದ್ಧತೆಯ ದೃಷ್ಟಿಯಿಂದಲೂ ಆಟಗಾರರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಭಾರತದಲ್ಲೇ ಟೂರ್ನಿ ಆಯೋಜಿಸಲ್ಪಟ್ಟಿದ್ದರೂ, ಎಲ್ಲ ಪಂದ್ಯಗಳು ತಟಸ್ಥ ತಾಣದಲ್ಲೇ ನಡೆಯಲಿರುವುದರಿಂದ ಈ ಸಲವೂ ಯಾವ ತಂಡಕ್ಕೂ ತವರಿನ ಲಾಭವಿಲ್ಲ. ಇದರಿಂದ ಸ್ಪರ್ಧಾತ್ಮಕತೆ ಹೆಚ್ಚಲಿದೆ.
ಆರ್ಸಿಬಿ
ಗ್ಲೆನ್ ಮ್ಯಾಕ್ಸ್ವೆಲ್-ಕೈಲ್ ಜೇಮಿಸನ್ ಸೇರ್ಪಡೆಯಿಂದ ತಂಡ ಬಲಿಷ್ಠವಾಗಿದೆ. ನಾಯಕ ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವುದು ಈ ಬಾರಿಯ ವಿಶೇಷ. ಕೆಲವೊಂದು ಹೊಸತನದೊಂದಿಗೆ ಆರ್ಸಿಬಿ ಈ ಸಲವಾದರೂ ಕಪ್ ತನ್ನದಾಗಿಸುವ ಹಂಬಲದಲ್ಲಿದೆ. ಬಲಿಷ್ಠ ಬ್ಯಾಟಿಂಗ್ ಪಡೆ; ಮಧ್ಯಮ ಕ್ರಮಾಂಕದಲ್ಲಿ ಎಡಿಬಿ, ಮ್ಯಾಕ್ಸ್ವೆಲ್ ಬಲ; ಉತ್ತಮ ಸ್ಪಿನ್ ವಿಭಾಗ. ಬೌಲಿಂಗ್ ವಿಭಾಗದ ಅಸ್ಥಿರತೆ; ದಿಢೀರ್ ಕುಸಿತದ ಭೀತಿ ; ದುಬಾರಿಯಾಗುವ ಬೌಲರ್ಗಳು.
ಸಾಧನೆ: 2008: 7ನೇ ಸ್ಥಾನ ?2009: ರನ್ನರ್ಅಪ್ ?2010: 3ನೇ ಸ್ಥಾನ ?2011: ರನ್ನರ್ಅಪ್ ?2012: 5ನೇ ಸ್ಥಾನ ?2013: 5ನೇ ಸ್ಥಾನ ?2014: 7ನೇ ಸ್ಥಾನ ?2015: 3ನೇ ಸ್ಥಾನ ? 2016: ರನ್ನರ್ಅಪ್ ?2017: 8ನೇ ಸ್ಥಾನ ?2018: 6ನೇ ಸ್ಥಾನ ?2019: 8ನೇ ಸ್ಥಾನ ?2020: 4ನೇ ಸ್ಥಾನ.
ಪಂಜಾಬ್ ಕಿಂಗ್ಸ್
ಹೊಸ ಸೇರ್ಪಡೆ: ಜೇ ರಿಚರ್ಡ್ಸನ್, ರಿಲಿ ಮೆರಿಡಿತ್, ಶಾರುಖ್ ಖಾನ್, ಮೋಯ್ಸೆಸ್ ಹೆನ್ರಿಕ್ಸ್, ಡೇವಿಡ್ ಮಲಾನ್, ಫ್ಯಾಬಿಯನ್ ಅಲೆನ್, ಜಲಜ್ ಸಕ್ಸೇನಾ, ಸೌರಭ್ ಕುಮಾರ್, ಉತ್ಕರ್ಷ್ ಸಿಂಗ್.
ಸಾಧನೆ: ?2008: 3ನೇ ಸ್ಥಾನ ?2009: 5ನೇ ಸ್ಥಾನ ?2010: 8ನೇ ಸ್ಥಾನ ?2011: 5ನೇ ಸ್ಥಾನ ?2012: 6ನೇ ಸ್ಥಾನ ?2013: 6ನೇ ಸ್ಥಾನ ?2014: ರನ್ನರ್ಅಪ್ ?2015: 8ನೇ ಸ್ಥಾನ ?2016: 8ನೇ ಸ್ಥಾನ ?2017: 5ನೇ ಸ್ಥಾನ ?2018: 7ನೇ ಸ್ಥಾನ ?2019: 6ನೇ ಸ್ಥಾನ ?2020: 6ನೇ ಸ್ಥಾನ.
ಡೆಲ್ಲಿ ಕ್ಯಾಪಿಟಲ್ಸ್
ಹೊಸ ಸೇರ್ಪಡೆ: ಟಾಮ್ ಕರ›ನ್, ಸ್ಟೀವನ್ ಸ್ಮಿತ್, ಸ್ಯಾಮ್ ಬಿಲ್ಲಿಂಗ್ಸ್, ಉಮೇಶ್ ಯಾದವ್, ರಿಪಾಲ್ ಪಟೇಲ್, ವಿಷ್ಣು ವಿನೋದ್, ಲುಕ್ವುನ್ ಹುಸೇನ್ ಮೆರಿವಾಲಾ, ಎಂ. ಸಿದ್ಧಾರ್ಥ್.
ಸಾಧನೆ: ?2008: 4ನೇ ಸ್ಥಾನ ?2009: 3ನೇ ಸ್ಥಾನ ?2010: 5ನೇ ಸ್ಥಾನ ?2011: 10ನೇ ಸ್ಥಾನ ?2012: 3ನೇ ಸ್ಥಾನ ?2013: 9ನೇ ಸ್ಥಾನ ?2014: 8ನೇ ಸ್ಥಾನ ?2015: 7ನೇ ಸ್ಥಾನ ?2016: 6ನೇ ಸ್ಥಾನ ?2017: 6ನೇ ಸ್ಥಾನ ?2018: 8ನೇ ಸ್ಥಾನ ?2019: 3ನೇ ಸ್ಥಾನ ?2020: ರನ್ನರ್ಅಪ್.
ರಾಜಸ್ಥಾನ ರಾಯಲ್ಸ್
ಹೊಸ ಸೇರ್ಪಡೆ: ಕ್ರಿಸ್ ಮಾರಿಸ್, ಶಿವಂ ದುಬೆ, ಚೇತನ್ ಸಕಾರಿಯ, ಮುಸ್ತಾಫಿಜುರ್ ರೆಹಮಾನ್, ಲಿಯಾಮ್ ಲಿವಿಂಗ್ಸ್ಟೋನ್, ಕೆಸಿ ಕಾರ್ಯಪ್ಪ, ಆಕಾಶ್ ಸಿಂಗ್, ಕುಲದೀಪ್ ಯಾದವ್.
ಸಾಧನೆ: ?2008: ಚಾಂಪಿಯನ್ ?2009: 6ನೇ ಸ್ಥಾನ ?2010: 7ನೇ ಸ್ಥಾನ ?2011: 6ನೇ ಸ್ಥಾನ ?2012: 7ನೇ ಸ್ಥಾನ ?2013: 3ನೇ ಸ್ಥಾನ ?2014: 5ನೇ ಸ್ಥಾನ ?2015: 4ನೇ ಸ್ಥಾನ ?2018: 4ನೇ ಸ್ಥಾನ ?2019: 7ನೇ ಸ್ಥಾನ ?2020: 8ನೇ ಸ್ಥಾನ.
ಚೆನ್ನೈ ಸೂಪರ್ಕಿಂಗ್ಸ್
ಹೊಸ ಸೇರ್ಪಡೆ: ಕೆ. ಗೌತಮ್ ಮೊಯಿನ್ ಅಲಿ, ಚೇತೇಶ್ವರ ಪೂಜಾರ, ಭಗತ್ ವರ್ಮ, ಹರಿ ನಿಶಾಂತ್, ಹರಿಶಂಕರ್ ರೆಡ್ಡಿ.
ಸಾಧನೆ: ?2008: ರನ್ನರ್ಅಪ್ ?2009: 4ನೇ ಸ್ಥಾನ ?2010: ಚಾಂಪಿಯನ್ ?2011: ಚಾಂಪಿಯನ್ ?2012: ರನ್ನರ್ಅಪ್ ?2013: ರನ್ನರ್ಅಪ್ ?2014: 3ನೇ ಸ್ಥಾನ ?2015: ರನ್ನರ್ಅಪ್ ?2018: ಚಾಂಪಿಯನ್ ?2019: ರನ್ನರ್ಅಪ್ ?2020: 7ನೇ ಸ್ಥಾನ.
ಸನ್ರೈಸರ್ಸ್ ಹೈದರಾಬಾದ್
ಹೊಸ ಸೇರ್ಪಡೆ: ಕೇದಾರ್ ಜಾಧವ್, ಮುಜೀಬ್ ಜದ್ರಾನ್, ಜೆ. ಸುಚಿತ್, ಜೇಸನ್ ರಾಯ್.
ಸಾಧನೆ: ?2013: 4ನೇ ಸ್ಥಾನ ?2014: 6ನೇ ಸ್ಥಾನ ?2015: 6ನೇ ಸ್ಥಾನ ?2016: ಚಾಂಪಿಯನ್ ?2017: 4ನೇ ಸ್ಥಾನ ?2018: ರನ್ನರ್ಅಪ್ ?2019: 4ನೇ ಸ್ಥಾನ ?2020: 3ನೇ ಸ್ಥಾನ.
ಮುಂಬೈ ಇಂಡಿಯನ್ಸ್
ಉತ್ತಮ ಬೆಂಚ್ ಸ್ಟ್ರೆಂತ್; ಉತ್ತಮ ಆರಂಭಿಕರು; ಉತ್ತಮ ಬೌಲಿಂಗ್ ಪಡೆ. ತಜ್ಞ ಸ್ಪಿನ್ ಬೌಲರ್ ಕೊರತೆ; ಬೌಲಿಂಗ್ನಲ್ಲಿ ಫಾಮ್ರ್ ಕೊರತೆ ಎದುರಿಸುತ್ತಿರುವ ಪಾಂಡ್ಯ ಸಹೋದರರು. ಟೀಮ್ ರೋಹಿತ್ ಶರ್ಮ (ನಾಯಕ), ಆದಿತ್ಯ ತಾರೆ, ಅನ್ಮೋಲ್ಪ್ರೀತ್ ಸಿಂಗ್, ಅನುಕೂಲ್ ರಾಯ್, ಧವಳ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜಸ್ಪ್ರೀತ್ ಬುಮ್ರಾ, ಜಯಂತ್ ಯಾದವ್, ಕೈರಾನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ಕ್ವಿಂಟನ್ ಡಿಕಾಕ್, ರಾಹುಲ್ ಚಹರ್, ಸೂರ್ಯಕುಮಾರ್ ಯಾದವ್, ಟ್ರೆಂಟ್ ಬೌಲ್ಟ್, ಕ್ರಿಸ್ ಲ್ಯಾನ್, ಸೌರಭ್ ತಿವಾರಿ, ಮೊಹ್ಸಿನ್ ಖಾನ್.
ಹೊಸ ಸೇರ್ಪಡೆ: ನಾಥನ್ ಕೌಲ್ಟರ್-ನಿಲ್, ಆಡಂ ಮಿಲ್ನೆ, ಪೀಯುಷ್ ಚಾವ್ಲ, ಜೇಮ್್ಸ ನೀಶಾಮ್ ಯದ್ವೀರ್ ಚರಕ್, ಮಾಕೋ ಜಾನ್ಸೆನ್, ಅರ್ಜುನ್ ತೆಂಡುಲ್ಕರ್.
ಸಾಧನೆ: ?2008: 5ನೇ ಸ್ಥಾನ ?2009: 7ನೇ ಸ್ಥಾನ ?2010: ರನ್ನರ್ಅಪ್ ?2011: 3ನೇ ಸ್ಥಾನ ?2012: 4ನೇ ಸ್ಥಾನ ? 2013: ಚಾಂಪಿಯನ್ ?2014: 4ನೇ ಸ್ಥಾನ ?2015: ಚಾಂಪಿಯನ್ ?2016: 5ನೇ ಸ್ಥಾನ ?2017: ಚಾಂಪಿಯನ್ ?2018: 5ನೇ ಸ್ಥಾನ ?2019: ಚಾಂಪಿಯನ್ ?2020: ಚಾಂಪಿಯನ್.
ಕೋಲ್ಕತ ನೈಟ್ರೈಡರ್ಸ್
ಇಂಗ್ಲೆಂಡ್ನ ವಿಶ್ವಕಪ್ ವಿಜೇತ ಇವೊಯಿನ್ ಮಾರ್ಗನ್ ಸಾರಥ್ಯ; ಬಾಂಗ್ಲಾ ಆಲ್ರೌಂಡರ್ ಶಕೀಬ್ ಅಲ್ ಹಸನ್ ವಾಪಸ್; ಉತ್ತಮ ವೇಗದ ಬೌಲಿಂಗ್ ಪಡೆ. ಅಸ್ಥಿರ ಸ್ಪಿನ್ ಬೌಲಿಂಗ್ ವಿಭಾಗ; ಸುನೀಲ್ ನಾರಾಯಣ್ ಅನುಮಾನಾಸ್ಪದ ಬೌಲಿಂಗ್ ಶೈಲಿ; ಕಳೆದ ಬಾರಿ ಮಿಂಚಿದ್ದ ವರುಣ್ ಚಕ್ರವರ್ತಿ ಫಿಟ್ನೆಸ್ ಕೊರತೆ. ಟೀಮ್ ಇವೊಯಿನ್ ಮಾರ್ಗನ್ (ನಾಯಕ), ಆಂಡ್ರೆ ರಸೆಲ್, ದಿನೇಶ್ ಕಾರ್ತಿಕ್, ಕಮಲೇಶ್ ನಾಗರಕೋಟಿ, ಕುಲದೀಪ್ ಯಾದವ್, ಲಾಕಿ ಫರ್ಗ್ಯುಸನ್, ನಿತೇಶ್ ರಾಣಾ, ಪ್ರಸಿದ್ಧಕೃಷ್ಣ, ಸಂದೀಪ್ ವಾರಿಯರ್, ಶಿವಂ ದುಬೆ, ಶುಭಮಾನ್ ಗಿಲ್, ಸುನೀಲ್ ನಾರಾಯಣ್, ಪ್ಯಾಟ್ ಕಮ್ಮಿನ್ಸ್, ರಾಹುಲ್ ತ್ರಿಪಾಠಿ, ವರುಣ್ ಚಕ್ರವರ್ತಿ, ಟಿಮ್ ಸೀಫರ್ಟ್.
ಹೊಸ ಸೇರ್ಪಡೆ: ಶಕೀಬ್ ಅಲ್ ಹಸನ್, ಹರ್ಭಜನ್ ಸಿಂಗ್, ಬೆನ್ ಕಟ್ಟಿಂಗ್, ಕರುಣ್ ನಾಯರ್, ಪವನ್ ನೇಗಿ, ವೆಂಕಟೇಶ್ ಐಯ್ಯರ್, ಶೆಲ್ಡನ್ ಜಾಕ್ಸನ್, ವೈಭವ್ ಅರೋರ, ಗುರುಕೀರತ್ ಸಿಂಗ್ ಮಾನ್.
ಸಾಧನೆ: ?2008: 6ನೇ ಸ್ಥಾನ ?2009: 8ನೇ ಸ್ಥಾನ ?2010: 6ನೇ ಸ್ಥಾನ ?2011: 4ನೇ ಸ್ಥಾನ ?2012: ಚಾಂಪಿಯನ್ ?2013: 7ನೇ ಸ್ಥಾನ ?2014: ಚಾಂಪಿಯನ್ ?2015: 5ನೇ ಸ್ಥಾನ ?2016: 4ನೇ ಸ್ಥಾನ ?2017: 3ನೇ ಸ್ಥಾನ ?2018: 3ನೇ ಸ್ಥಾನ ?2019: 5ನೇ ಸ್ಥಾನ ?2020: 5ನೇ ಸ್ಥಾನ.
ಐದೇ ತಿಂಗಳಲ್ಲಿ ಎರಡನೇ ಐಪಿಎಲ್
ಕರೊನಾ ಹಾವಳಿಯಿಂದಾಗಿ ಕಳೆದ ವರ್ಷ ಏಪ್ರಿಲ್-ಮೇನಲ್ಲಿ ಭಾರತ ದಲ್ಲಿ ಐಪಿಎಲ್ ನಡೆಯದೆ, 6 ತಿಂಗಳು ತಡವಾಗಿ ಯುಎಇಯಲ್ಲಿ ಆಯೋಜನೆ ಗೊಂಡಿತ್ತು. ಹೀಗಾಗಿ ಐದೇ ತಿಂಗಳ ಅಂತರದಲ್ಲಿ ಈಗ 2ನೇ ಐಪಿಎಲ್ ನಡೆಯಲಿದೆ. ಈ ಬಾರಿ ಕರೊನಾ ಭೀತಿಯ ನಡುವೆಯೂ ಎಂದಿನ ಏಪ್ರಿಲ್-ಮೇ ಅವಧಿಯಲ್ಲೇ ಟೂರ್ನಿ ಸಾಗುತ್ತಿದೆ.
ತವರಲ್ಲಿದ್ದರೂ, ತಟಸ್ಥ ಸ್ಥಳದಲ್ಲಿ ಪಂದ್ಯ
ಐಪಿಎಲ್ ತಂಡಗಳಿಗೆ ತವರಿ ನಿಂದ ಹೊರಗೆ ಆಡುವ ಅನುಭವ ಹೊಸದಲ್ಲ. 2009 (ದಕ್ಷಿಣ ಆಫ್ರಿಕಾ), 2014ರಲ್ಲಿ (ಯುಎಇಯಲ್ಲಿ ಮೊದಲಾರ್ಧ) ಸಾರ್ವತ್ರಿಕ ಚುನಾವಣೆಯಿಂದ ವಿದೇಶದಲ್ಲಿ ಪಂದ್ಯಗಳು ನಡೆದಿದ್ದರೆ, ಕಳೆದ ವರ್ಷ ಕರೊನಾ ಕಾರಣದಿಂದ ಯುಎಇಯಲ್ಲಿ ಪಂದ್ಯಗಳನ್ನು ಆಡಲಾಗಿತ್ತು. ಆದರೆ ಈ ಬಾರಿ ಭಾರತದಲ್ಲೇ ಐಪಿಎಲ್ ನಡೆಯುತ್ತಿ ದ್ದರೂ, ಯಾವುದೇ ತಂಡಕ್ಕೆ ತವರಿನಲ್ಲಿ ಪಂದ್ಯಗಳನ್ನು ಆಡುವ ಅದೃಷ್ಟವಿಲ್ಲ. ಕರೊನಾ ಕಾರಣದಿಂದಾಗಿ ದೇಶದ 6 ನಗರಗಳಲ್ಲಷ್ಟೇ ಪಂದ್ಯಗಳು ನಿಗದಿಯಾಗಿ ರುವುದರಿಂದ, ಬಿಸಿಸಿಐ ಎಲ್ಲ ತಂಡಗಳನ್ನು ತಟಸ್ಥ ಸ್ಥಳಗಳಲ್ಲಿ ಆಡಿಸುತ್ತಿದೆ.
8 ತಂಡಗಳ ಕೊನೇ ಐಪಿಎಲ್!
ಎಲ್ಲವೂ ಅಂದುಕೊಂಡಂತೆ ಆದರೆ, ಇದು 8 ತಂಡಗಳ ಕೊನೆಯ ಐಪಿಎಲ್ ಟೂರ್ನಿಯಾಗಿರಲಿದೆ. 2022ರ ಐಪಿಎಲ್ಗೆ 9ನೇ ತಂಡವನ್ನು ಸೇರ್ಪಡೆಗೊಳಿಸಲು ಬಿಸಿಸಿಐ ಈಗಾಗಲೆ ಸಿದ್ಧತೆಗಳನ್ನು ಮಾಡಿಕೊಂಡಿದ್ದರೆ, 2023ರಲ್ಲಿ 10ನೇ ತಂಡ ಸೇರ್ಪಡೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಮುಂದಿನ ವರ್ಷದಿಂದ ಟೂರ್ನಿ ಸ್ವರೂಪವೂ ಸ್ವಲ್ಪಮಟ್ಟಿಗೆ ಬದಲಾವಣೆ ಕಾಣುವ ಸಾಧ್ಯತೆ ಇದೆ. ಈ ಬಾರಿ ಎಂದಿನಂತೆ ಅಗ್ರ 4 ತಂಡಗಳು ಪ್ಲೇಆಫ್ಗೇರಲಿವೆ.
ಒಮ್ಮೆಗೆ ಎರಡೆರಡು ನಗರಗಳಲ್ಲಿ ಪಂದ್ಯ
ಖಾಲಿ ಸ್ಟೇಡಿಯಂ
ಕರೊನಾ ಹಾವಳಿಯಿಂದ ಖಾಲಿ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿದ್ದು, ಪ್ರೇಕ್ಷಕರಿಗೆ ಅನುಮತಿ ನಿರಾಕರಿಸಲಾಗಿದೆ. ಆದರೆ ಕರೊನಾ ಮತ್ತೆ ನಿಯಂತ್ರಣಕ್ಕೆ ಬಂದರೆ ಮೇನಲ್ಲಿ ಅಥವಾ ಕೊನೇ ಹಂತದ ಪಂದ್ಯಗಳಿಗೆ ಪ್ರೇಕ್ಷಕರಿಗೆ ಅವಕಾಶದೊರೆತರೂ ಅಚ್ಚರಿ ಇಲ್ಲ.
ಐಪಿಎಲ್ನಲ್ಲಿ ಕನ್ನಡಿಗರು ಪಂಜಾಬ್: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಅನಿಲ್ ಕುಂಬ್ಳೆ (ಕೋಚ್)
ಆರ್ಸಿಬಿ: ದೇವದತ್ ಪಡಿಕಲ್, ಪವನ್ ದೇಶಪಾಂಡೆ
ರಾಜಸ್ಥಾನ: ಶ್ರೇಯಸ್ ಗೋಪಾಲ್, ಕೆಸಿ ಕಾರ್ಯಪ್ಪ
ಸನ್ರೈಸರ್ಸ್: ಮನೀಷ್ ಪಾಂಡೆ, ಜೆ. ಸುಚಿತ್
ಕೆಕೆಆರ್: ಪ್ರಸಿದ್ಧಕೃಷ್ಣ, ಕರುಣ್ ನಾಯರ್
ಚೆನ್ನೈ: ರಾಬಿನ್ ಉತ್ತಪ್ಪ, ಕೆ. ಗೌತಮ್ ?ಡೆಲ್ಲಿ: ಪ್ರವೀಣ್ ದುಬೆ
ಮಾಹಿತಿ: ಪ್ರಸಾದ್ ಶೆಟ್ಟಿಗಾರ್, ರಘುನಾಥ್ ಡಿ.ಪಿ.
ವಿನ್ಯಾಸ: ಚಂದ್ರಶೇಖರ ಗಂಧನಹಳ್ಳಿ