

ವಿಜಯಪುರ : ಬೀದರ್‌ನಲ್ಲಿ ನ. 5 ಮತ್ತು 6 ರಂದು 17ನೇ ರಾಜ್ಯಮಟ್ಟದ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಆಯೋಜಿಸಲಾಗಿದೆ ಎಂದು ರಾಜ್ಯ ಸೈಕ್ಲಿಂಗ್ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಶೈಲ ಎಂ. ಕುರಣಿ ತಿಳಿಸಿದ್ದಾರೆ.
14, 16, ಮತ್ತು 18 ವಯೋಮಾನದ ಬಾಲಕ-ಬಾಲಕಿಯರಿಗೆ ಹಾಗೂ 23 ವಯೋಮಾನದ ಪುರುಷರು ಮತ್ತು ಮುಕ್ತ ಪುರುಷ-ಮಹಿಳೆಯರಿಗಾಗಿ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳು ಜರುಗಲಿವೆ. ಪ್ರತಿ ವಿಭಾಗಕ್ಕೂ ಟೈಂ ಟ್ರೈಯಲ್ ಮತ್ತು ಸಾಮೂಹಿಕ ಸ್ಪರ್ಧೆಗಳು ಜರುಗುತ್ತವೆ. ಮಹಾರಾಷ್ಟ್ರದಲ್ಲಿ ಜರುಗಲಿರುವ ರಾಷ್ಟ್ರೀಯ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ಗಾಗಿ ಇದೇ ವೇಳೆ ರಾಜ್ಯ ತಂಡದ ಆಯ್ಕೆ ನಡೆಸಲಾಗುವುದು ಮಾಹಿತಿ ನೀಡಿದ್ದಾರೆ.
ಆಸಕ್ತ ಕ್ರೀಡಾಪಟುಗಳು ರಾಜ್ಯ ಸೈಕ್ಲಿಂಗ್ ಸಂಸ್ಥೆಯ ನೋಂದಾಯಿತ ಸಂಸ್ಥೆಗಳಾದ ಜಿಲ್ಲಾ ಸೈಕ್ಲಿಂಗ್ ಸಂಸ್ಥೆ ಅಥವಾ ಸೈಕ್ಲಿಂಗ್ ಕ್ರೀಡಾ ಶಾಲೆ/ನಿಲಯಗಳ ಮೂಲಕ ಪ್ರವೇಶವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಮೊ: 9008377875 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.