ಇಂಟರ್​ನ್ಯಾಷನಲ್​ ಸ್ಕೂಲ್​ ಗೇಮ್ಸ್​: ವಾಲಿಬಾಲ್​ನಲ್ಲಿ ಭಾರತಕ್ಕೆ ಪ್ರಶಸ್ತಿ

ಇಂಟರ್​ನ್ಯಾಷನಲ್​ ಸ್ಕೂಲ್​ ಗೇಮ್ಸ್​: ವಾಲಿಬಾಲ್​ನಲ್ಲಿ ಭಾರತಕ್ಕೆ ಪ್ರಶಸ್ತಿ
ಇಂಟರ್​ನ್ಯಾಷನಲ್​ ಸ್ಕೂಲ್​ ಗೇಮ್ಸ್​: ವಾಲಿಬಾಲ್​ನಲ್ಲಿ ಭಾರತಕ್ಕೆ ಪ್ರಶಸ್ತಿ
Published on
ಬೆಂಗಳೂರು: ಆತಿಥೇಯ ಭಾರತ ತಂಡ ಬೆಂಗಳೂರಿನ ವಿನಾಯಕ ಪಬ್ಲಿಕ್​ ಸ್ಕೂಲ್​ನಲ್ಲಿ ಇತ್ತೀಚೆಗೆ ನಡೆದ 10ನೇ ಇಂಟರ್​ನ್ಯಾಷನಲ್​ ಸ್ಕೂಲ್​ ಲೆವೆಲ್​ ಗೇಮ್ಸ್​ನಲ್ಲಿ (10th International School Level Games 2026) ಕ್ರಮವಾಗಿ 14 ವಯೋಮಿತಿ ಬಾಲಕಿಯರ ಮತ್ತು 16 ವಯೋಮಿತಿ ಬಾಲಕರ ವಿಭಾಗದಲ್ಲಿ ವಾಲಿಬಾಲ್​ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.
14 ವಯೋಮಿತಿ ಬಾಲಕಿಯರ ವಿಭಾಗದಲ್ಲಿ ಭಾರತ ತಂಡ 25-12, 25-16 ಅಂತರದಿಂದ ನೇಪಾಳ ವಿರುದ್ಧ ಗೆಲುವು ಸಾಧಿಸಿತು. ವಿದ್ಯಾಸೌಧ ಪಬ್ಲಿಕ್​ ಸ್ಕೂಲ್​ನ ಕೃಪಾ ಪಿಆರ್​ ಕುಮಾರ್​ ಟೂರ್ನಿಯ ಭರವಸೆಯ ಆಟಗಾರ್ತಿ ಪ್ರಶಸ್ತಿ ಪಡೆದರು. ವಿದ್ಯಾಸೌಧ ಪಬ್ಲಿಕ್​ ಸ್ಕೂಲ್​ನ ಸಾಯಿ ಕೀರ್ತನಿ ಅತ್ಯುತ್ತಮ ಆಟಗಾರ್ತಿ ಮತ್ತು ಅದಿತಿ ಅತ್ಯುತ್ತಮ ಸೆಟ್ಟರ್​ ಪ್ರಶಸ್ತಿಗೆ ಭಾಜನರಾದರು.

16 ವಯೋಮಿತಿಯ ಬಾಲಕರ ವಿಭಾಗದಲ್ಲಿ ಭಾರತ ತಂಡ 25-20, 16-25, 15-12 ಅಂತರದಿಂದ ನೇಪಾಳ ತಂಡವನ್ನು ಮಣಿಸಿ ಚಾಂಪಿಯನ್​ ಪಟ್ಟವೇರಿತು. ಯಶಸ್​ ವಿದ್ಯಾ ಕೇಂದ್ರದ ರೇವಂತ್​ ಟೂರ್ನಿಯ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದರು. ವಿದ್ಯಾ ಸೌಧ ಪಬ್ಲಿಕ್​ ಸ್ಕೂಲ್​ನ ನಿಖಿಲ್​ ಭಾರ್ಗವ ಅತ್ಯುತ್ತಮ ಸೆಟ್ಟರ್​ ಮತ್ತು ಜಿಂದಾಲ್​ ಸ್ಕೂಲ್​ನ ಮಂಜುನಾಥ್​ ಭರವಸೆಯ ಆಟಗಾರ ಪ್ರಶಸ್ತಿಗೆ ಪಾತ್ರರಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net