

ಬೆಂಗಳೂರು: ನಗರದ ವಿದ್ಯಾನಗರ ಕ್ರೀಡಾ ಸಂಕೀರ್ಣದ ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಯುವ ತರಬೇತಿ ಕೇಂದ್ರದ ಬಾಕ್ಸಿಂಗ್ ಹಾಲ್ನಲ್ಲಿ ನವೆಂಬರ್ 10 ರಿಂದ 13 ರವರೆಗೆ 10ನೇ ಆವೃತ್ತಿಯ ಎಲೈಟ್ ಪುರುಷ ಮತ್ತು ಮಹಿಳಾ ಕರ್ನಾಟಕ ರಾಜ್ಯ ಬಾಕ್ಸಿಂಗ್ ಚಾಂಪಿಯನ್ಷಿಪ್ ನಿಗದಿಯಾಗಿದೆ. ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್, ಭಾರತೀಯ ಬಾಕ್ಸಿಂಗ್ ಫೆಡರೇಷನ್ ಹಾಗೂ ರಾಜ್ಯ ಯುವ ಸಬಲೀಕಣ&ಕ್ರೀಡಾ ಇಲಾಖೆ ಸಹಯೋಗದಲ್ಲಿ ಟೂರ್ನಿ ನಡೆಯಲಿದೆ.
1986 ಜನವರಿ 1 ರಿಂದ 2008 ಡಿಸೆಂಬರ್ 31 ರೊಳಗೆ ಜನಿಸಿದ ಬಾಕ್ಸಿಂಗ್ ಪಟುಗಳು ಟೂರ್ನಿಯಲ್ಲಿ ಭಾಗವಹಿಸಲು ಅರ್ಹರಾಗಿದ್ದು, ಪುರುಷರಿಗೆ 47&50 ಕೆ.ಜಿ.ಯಿಂದ +90 ಕೆ.ಜಿ.ವರೆಗೆ ಮತ್ತು ಮಹಿಳೆಯರಿಗೆ 45&48 ಕೆ.ಜಿ.ಯಿಂದ +80 ಕೆ.ಜಿ.ವರೆಗೆ ತಲಾ 10 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. 3 ನಿಮಿಷದ 3 ಸುತ್ತು, 10 ಪಾಯಿಂಟ್ಸ್ ಕಡ್ಡಾಯ ಸ್ಕೋರಿಂಗ್ ನಿಯಮ ಅನ್ವಯವಾಗಲಿದೆ ಎಂದು ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ತಿಳಿಸಿದೆ.