

IPL 2025: ಕಳೆದ ವರ್ಷ ನಡೆದ ಐಪಿಎಲ್ 2025ರ ಹರಾಜು ಪ್ರಕ್ರಿಯೆಯಲ್ಲಿ ಸ್ಟಾರ್ ಆಟಗಾರರನ್ನೇ ಖರೀದಿಸಿದ 10 ಐಪಿಎಲ್ ಫ್ರಾಂಚೈಸಿಗಳು, 18ನೇ ಆವೃತ್ತಿಯಲ್ಲಿ ಟ್ರೋಫಿ ಎತ್ತಿ ಹಿಡಿಯಲು ಪಣತೊಟ್ಟಿವೆ. ಆಟಗಾರರ ಖರೀದಿಯೇನೋ ಮುಗಿಯಿತು. ಆದರೆ, ವೇಳಾಪಟ್ಟಿ ಯಾವಾಗ ಪ್ರಕಟವಾಗಲಿದೆ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಈಗ ಅಧಿಕೃತ ಘೋಷಣೆ ಕೂಡ ಸಿಕ್ಕಿದೆ. ಇದೇ ಮಾರ್ಚ್ 21ರಿಂದ ಐಪಿಎಲ್ ಪಂದ್ಯಾವಳಿಗಳು ಶುರುವಾಗಲಿದ್ದು, ಮೇ 21ಕ್ಕೆ ಫೈನಲ್ ನಡೆಯಲಿದೆ. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ 10 ತಂಡಗಳ ಕ್ಯಾಪ್ಟನ್ ಯಾರೆಂಬ ಚರ್ಚೆಗಳು ಜೋರಾಗಿವೆ.
ಕಳೆದ ಆವೃತ್ತಿಗಿಂತ ಈ ಸೀಸನ್ ಬಹಳ ವಿಶೇಷವಾಗಿರಲಿದೆ. ಕಾರಣ ಈ ಹಿಂದೆ ಕೆಲವು ತಂಡಗಳಿಗಿದ್ದ ಕ್ಯಾಪ್ಟನ್ಗಳು ಇದೀಗ ಬದಲಾಗಿದ್ದು, ಕೇವಲ ನಾಯಕನ ಸ್ಥಾನದಿಂದ ಮಾತ್ರವಲ್ಲದೆ ತಂಡದಿಂದಲೂ ಹೊರಗುಳಿದಿದ್ದಾರೆ. ಆ ಪೈಕಿ ಕೆ.ಎಲ್. ರಾಹುಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಮೊದಲಿಗಿದ್ದಾರೆ. ಈ ಮೂವರು ತಾವು ಹಿಂದೆ ನಾಯಕರಾಗಿ ಮುನ್ನಡೆಸಿದ್ದ ಟೀಮ್ನಿಂದ ಈಗ ಬೇರೆ ತಂಡದ ಪಾಲಾಗಿದ್ದು, ತಮ್ಮ ಕ್ಯಾಪ್ಟನ್ಸಿಯನ್ನು ಇಲ್ಲಿಯೂ ಮುಂದುವರಿಸಲಿದ್ದಾರೆ ಎಂದೇ ಹೇಳಲಾಗಿದೆ. ಅಸಲಿಗೆ ಯಾರೆಲ್ಲಾ ಕ್ಯಾಪ್ಟನ್ ಪಟ್ಟಿಯಲ್ಲಿದ್ದಾರೆ? ಯಾರು ಈ ವರ್ಷವು ತಮ್ಮ ತಂಡದ ಜವಾಬ್ದಾರಿ ಹೊರಲಿದ್ದಾರೆ? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.
1. ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್
2. ಡೆಲ್ಲಿ ಕ್ಯಾಪಿಟಲ್ಸ್: ಕೆ.ಎಲ್. ರಾಹುಲ್/ ಅಕ್ಷರ್ ಪಟೇಲ್*
3. ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್
4. ಕೋಲ್ಕತ್ತಾ ನೈಟ್ ರೈಡರ್ಸ್: ವೆಂಕಟೇಶ್ ಅಯ್ಯರ್*
5. ಲಕ್ನೋ ಸೂಪರ್ ಜೈಂಟ್ಸ್: ರಿಷಭ್ ಪಂತ್*
6. ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ
7. ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್
8. ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್
9. ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ*
10. ಸನ್‌ರೈಸರ್ಸ್ ಹೈದರಾಬಾದ್: ಪ್ಯಾಟ್ ಕಮ್ಮಿನ್ಸ್ ,(ಏಜೆನ್ಸೀಸ್).