More

    ಧೋನಿ ಮೊದಲ ಗೆಳತಿ ಕಾರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡ್ರಾ, ಮಾಹಿ-ಪ್ರಿಯಾಂಕಾ ನಿಜವಾದ ಪ್ರೇಮಕಥೆ ಬಗ್ಗೆ ಬಹುತೇಕರಿಗೆ ಗೊತ್ತಿರದ ಸಂಗತಿಯಿದು..

    ಬೆಂಗಳೂರು: ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅತ್ಯದ್ಭುತ ಪ್ರದರ್ಶನ ತೋರಿದರು. ಧೋನಿ 17 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 37* ರನ್‌ಗಳನ್ನು ಗಳಿಸಿದರು. ಧೋನಿಯ ಈ ಇನ್ನಿಂಗ್ಸ್ ಎಲ್ಲೆಡೆ ಚರ್ಚೆಯಾಗುತ್ತಿದೆ.    

    ಈ ಮಧ್ಯೆ ಧೋನಿ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿಯುವ ಕುತೂಹಲ ಕೆಲವರಲ್ಲಿ ಹೆಚ್ಚಿದೆ. ಎಲ್ಲರಿಗೂ ಗೊತ್ತಿರುವ ಹಾಗೆ ‘ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ’ ಸಿನಿಮಾದಲ್ಲಿ ಹೆಚ್ಚು ಕಡಿಮೆ ಅವರ ಪರ್ಸನಲ್ ಲೈಫ್  ಬಗ್ಗೆ ತೋರಿಸಲಾಗಿದೆ. ಅದರಲ್ಲಿ ತೋರಿಸಿರುವಂತೆ, ಅವರ ಮೊದಲ ಗೆಳತಿ ಪ್ರಿಯಾಂಕಾ ಕಾರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡರು.  

    ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯಕ್ಕಾಗಿ ಧೋನಿ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಸಮಯದಲ್ಲಿ ಪ್ರಿಯಾಂಕಾ ಕೂಡ ವಿಮಾನದಲ್ಲಿದ್ದರು. ಆಗ ಆಕೆಗೆ ಸಚಿನ್ ತೆಂಡೂಲ್ಕರ್ ಅವರ ಆಟೋಗ್ರಾಫ್ ಬೇಕಿತ್ತು. ಧೋನಿ ಪ್ರಿಯಾಂಕಾಗೆ ಸಚಿನ್ ಅವರ ಹಸ್ತಾಕ್ಷರವನ್ನು  ಹಾಕಿಸಿಕೊಡುತ್ತಾರೆ. ಇದರ ನಂತರ ಇಬ್ಬರ ನಡುವೆ ಪ್ರೇಮ ಸಂಭಾಷಣೆ ಪ್ರಾರಂಭವಾಗುತ್ತದೆ.   

    ಫೆಬ್ರವರಿ 2006 ರಲ್ಲಿ ಪ್ರಿಯಾಂಕಾ ಮಾಹಿಗೆ ವ್ಯಾಲೆಂಟೈನ್ಸ್ ಉಡುಗೊರೆಯನ್ನು ಖರೀದಿಸಲು ಹೋಗುತ್ತಾಳೆ ಎಂದು ಚಿತ್ರದಲ್ಲಿ ತೋರಿಸಲಾಗಿದೆ.  ಈ ಸಮಯದಲ್ಲಿ ಅವರ ಕಾರು ಅಪಘಾತಕ್ಕೆ ಒಳಗಾಗಿ, ಆಕೆ ಸಾಯುತ್ತಾಳೆ. ಆದರೆ ವಾಸ್ತವವಾಗಿ ಕಥೆ ಬೇರೆಯೇ  ಇದೆ.

    ಮಾಧ್ಯಮ ವರದಿಗಳ ಪ್ರಕಾರ, ಧೋನಿ ತನ್ನ ಮೊದಲ ಗೆಳತಿಯನ್ನು 2005 ರಲ್ಲಿ ಅಲ್ಲ, 2002 ರಲ್ಲಿ ಭೇಟಿಯಾದರು ಮತ್ತು ಆ ಸಮಯದಲ್ಲಿ ಧೋನಿ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಿರಲಿಲ್ಲ. ಭೇಟಿಯಾದ ನಂತರ, ಇಬ್ಬರೂ ಪ್ರೀತಿಸುತ್ತಿದ್ದರು ಮತ್ತು ಇಬ್ಬರೂ ಶಾಶ್ವತವಾಗಿ ಒಟ್ಟಿಗೆ ಇರುವುದಾಗಿ ಪ್ರಾಮಿಸ್ ಮಾಡಿಕೊಂಡಿದ್ದರು. ಆದರೆ ವಿಧಿಯ ಆಟ ಬೇರೆಯೇ ಅಗಿತ್ತು.

    ಧೋನಿಯ ಮೊದಲ ಗೆಳತಿ ಸಾವನ್ನಪ್ಪಿದ್ದು 2006ರಲ್ಲಿ ಅಲ್ಲ, 2003ರಲ್ಲಿ. ಆ ಸಮಯದಲ್ಲಿ ಧೋನಿ ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದರು. ಆ ಪ್ರವಾಸದಲ್ಲಿ, ಮಹಿ 6 ಇನ್ನಿಂಗ್ಸ್‌ಗಳಲ್ಲಿ 362 ರನ್ ಗಳಿಸಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts