ಜನರೊಂದಿಗೆ ಬೆರೆಯಲು ಕ್ರೀಡೆ ಸಹಕಾರಿ

kota
Published on

ಕೋಟ: ಜನತಾ ಪರಿವಾರ ಸುಮಾರು 13 ವರ್ಷಗಳಿಂದ ಕ್ರೀಡಾಕೂಟ ಆಯೋಜಿಸಿಕೊಂಡು ಬಂದಿದ್ದು, ಜನತಾ ಪರಿವಾರದೊಂದಿಗೆ ಇನ್ನಷ್ಟು ಬೆರೆಯಲು ಸಹಕಾರಿಯಾಗಿದೆ ಎಂದು ಜನತಾ ಸಂಸ್ಥೆ ಮುಖ್ಯಸ್ಥ ಆನಂದ ಸಿ.ಕುಂದರ್ ಹೇಳಿದರು.

ಜನತಾ ಸಮೂಹ ಸಂಸ್ಥೆಗಳ ವತಿಯಿಂದ ಜನತಾ ಸಿಬ್ಬಂದಿಗೆ ಹಮ್ಮಿಕೊಂಡ ಜನತಾ ಪ್ರೀಮಿಯರ್ ಲೀಗ್-2025 ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಶಾಂತ್ ಎ.ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಜನತಾ ಸಿಬ್ಬಂದಿ ಮಕ್ಕಳಿಗೆ ವಿವಿಧ ಆಟಗಳನ್ನು ಏರ್ಪಡಿಸಿ ಬಹುಮಾನ ನೀಡಲಾಯಿತು. ಕೋಟ ಪಡುಕರೆ ಲಕ್ಷ್ಮೀ ಸೋಮಬಂಗೇರ ಪದವಿ ಕಾಲೇಜು ಪ್ರಾಂಶುಪಾಲ ಡಾ.ರಾಜೇಂದ್ರ ಎಸ್.ನಾಯಕ, ಸಂಸ್ಥೆ ನಿರ್ದೇಶಕರಾದ ರಕ್ಷಿತ್ ಕುಂದರ್, ದಿವ್ಯಲಕ್ಷ್ಮೀ ಕುಂದರ್, ವೈಷ್ಣವಿ ಕುಂದರ್, ಮುಖ್ಯ ಲೆಕ್ಕಾಧಿಕಾರಿ ಅಶ್ವಥ್ ಜೆ.ಶೆಟ್ಟಿ, ಎಜಿಎಂ ಶ್ರೀನಿವಾಸ್ ಕುಂದರ್, ಕಾರ್ಖಾನೆ ವ್ಯವಸ್ಥಪಕರಾದ ಮಿಥುನ್ ಕುಮಾರ್, ಅರುಣ್ ಮೆಂಡನ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ರವಿಕಿರಣ ಕಾರ್ಯಕ್ರಮ ನಿರೂಪಿಸಿದರು. ಮೇಘಾ ಮತ್ತು ದೀಕ್ಷಿತಾ ಸಹಕರಿಸಿದರು.

ಬಹುಮಾನ ವಿಜೇತರು

ಜನತಾ ಪ್ರೀಮಿಯರ್ ಲೀಗ್-2025ರ ವಿನ್ನರ್ ಪ್ರಶಸ್ತಿಯನ್ನು ಭಗತ್ ಇಲೆವೆನ್ ಜನತಾ ಮತ್ತು ರನ್ನರ್ ಪ್ರಶಸ್ತಿಯನ್ನು ಜನತಾ ನವಮಿ ತಂಡ ಪಡೆಯಿತು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪ್ರಕಾಶ್ ಪಡುಕೋಣೆ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net