ಗಾನ ಗಂಧರ್ವ ಡಾ.ಎಸ್‌ಪಿಬಿ ನಿಧನಕ್ಕೆ ಕಂಬನಿ ಮಿಡಿದ ಕ್ರೀಡಾ ವಲಯ

spb for web
Published on

ಬೆಂಗಳೂರು: ಹಲವು ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಡಾ.ಎಸ್.ಪಿ. ಬಾಲಸುಬ್ರಮಣ್ಯಂ ಶುಕ್ರವಾರ ಇಹಲೋಕ ತ್ಯಜಿಸಿದರು. ಭಾರತದ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ್ದ ಎಸ್‌ಪಿಬಿ ನಿಧನಕ್ಕೆ ಭಾರತೀಯ ಕ್ರೀಡಾ ವಲಯದ ಕಂಬನಿ ಮಿಡಿದಿದೆ. ಸ್ನೇಹಿತರ ವಲಯದಲ್ಲಿ ಬಾಲಣ್ಣ ಅಂತಾನೇ ಪ್ರಸಿದ್ಧಿ ಪಡೆದಿದ್ದ ಎಸ್‌ಪಿಬಿ, ಭಾರತದ ಗಾನ ಸಾಮ್ರಾಟನಾಗಿ ಮೆರೆದಿದ್ದರು. ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್, ಟೀಮ್ ಇಂಡಿಯಾ ಮುಖ್ಯಕೋಚ್ ರವಿ ಶಾಸಿ, ದಿನೇಶ್ ಕಾರ್ತಿಕ್, ಚೆಸ್ ಆಟಗಾರ ವಿಶ್ವನಾಥನ್ ಆನಂದ್, ಮಾಜಿ ಅಥ್ಲೀಟ್ ಪಿಟಿ ಉಷಾ, ಮಾಜಿ ಷಟ್ಲರ್ ಜ್ವಾಲಾಗುಟ್ಟಾ ಸೇರಿದಂತೆ ಹಲವು ಹಾಲಿ ಹಾಗೂ ಮಾಜಿ ಕ್ರೀಡಾಪಟುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net