ಅಮೃತ ಭಾರತಿ ಸಂಸ್ಥೆಯಲ್ಲಿ ಕ್ರೀಡಾ ಭಾರತಿ ಬೈಠಕ್

hbr (4)
Published on

ಹೆಬ್ರಿ: ಕ್ರೀಡಾ ಭಾರತಿ ಉಡುಪಿ ಜಿಲ್ಲಾ ಘಟಕದ ವತಿಯಿಂದ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಬೈಠಕ್ ನಡೆಸಲಾಯಿತು.

ಅಮೃತ ಭಾರತಿ ಟ್ರಸ್ಟ್ ಕಾರ್ಯದರ್ಶಿ ಹಾಗೂ ಹೆಬ್ರಿ ತಾಲೂಕು ಕ್ರೀಡಾ ಭಾರತಿ ಗೌರವಾಧ್ಯಕ್ಷ ಎಚ್.ಗುರುದಾಸ್ ಶೆಣೈ ಮಾತನಾಡಿ, ರಾಷ್ಟ್ರೀಯ ಕ್ರೀಡಾ ದಿನಾದಂದು ಕಬಡ್ಡಿ ಪಂದ್ಯ ನಡೆಸಲಾಗುವುದು. ನಿವೃತ್ತ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರು, ನಿರ್ದೇಶಕರನ್ನು ಅವರ ಮನೆಗೆ ಹೋಗಿ ಗೌರವಿಸಲಾಗುವುದು. ನವೆಂಬರ್‌ನಲ್ಲಿ ಹೆಬ್ರಿ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ ಜಿಲ್ಲಾಮಟ್ಟದಲ್ಲಿ ಕಬಡ್ಡಿ ಪಂದ್ಯಾಟ ಸಂಘಟಿಸಲಾಗುವುದು ಎಂದರು.

ಪ್ರಾಂತ ಕಾರ್ಯಕಾರಿಣಿ ಸದಸ್ಯ ಪ್ರಸನ್ನ ಶೆಣೈ, ಉಡುಪಿ ಜಿಲ್ಲಾ ಕ್ರೀಡಾ ಭಾರತಿ ಅಧ್ಯಕ್ಷ ಮಂಜುನಾಥ್ ಶೆಟ್ಟಿ, ವಿಭಾಗ ಸಹ ಸಂಯೋಜಕ ಲಿಂಗಯ್ಯ, ಉಡುಪಿ ಜಿಲ್ಲಾ ಕಾರ್ಯದರ್ಶಿ ಪ್ರಕಾಶ್ ರಾವ್, ಹೆಬ್ರಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಬಿ.ಹರ್ಷ ಶೆಟ್ಟಿ, ಪ್ರಮುಖರಾದ ಪ್ರಕಾಶ್, ಕೇಶವ್, ವಿದ್ಯಾ, ವಿಜಯಕುಮಾರ್ ಶೆಟ್ಟಿ, ಪ್ರವೀಣ್ ಹೆಗ್ಡೆ, ರವೀಂದ್ರ ಶೆಟ್ಟಿ, ನಿಶಾನ್ ಶೆಟ್ಟಿ, ಮಾಲಿನಿ, ಪಾವನಾ ಶೆಟ್ಟಿ ಇದ್ದರು. ವಿಜಯ್‌ಕುಮಾರ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net