

ಆರ್ಡಿ: ವಿದ್ಯಾರ್ಥಿಗಳಿಗೆ ಪಠ್ಯ, ಪಠ್ಯೇತರ ಶಿಕ್ಷಣ ಜತೆಗೆ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಿದಾಗ ಉತ್ತಮ ಆರೋಗ್ಯ,ಆತ್ಮಸ್ಥೆರ್ಯ ಹೊಂದಲು ಸಾಧ್ಯ ಎಂದು ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಬಿ.ರಾಜೇಂದ್ರ ಕಿಣಿ ಬೆಳ್ವೆ ಹೇಳಿದರು.
ಆರ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರ್ಡಿ-ಬೆಳ್ವೆ-ಗೋಳಿಯಂಗಡಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಸಹಭಾಗೀತ್ವದಲ್ಲಿ ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಬಿ.ರಾಜೇಂದ್ರ ಕಿಣಿ ಬೆಳ್ವೆ ಕೊಡುಗೆಯಾಗಿ ನಿರ್ಮಿಸಿದ ನೂತನ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಂಗಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕ್ರೀಡಾ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಎಚ್.ವಸಂತಕುಮಾರ್ ಶೆಟ್ಟಿ ಬೆಳ್ವೆ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಂಗಣ ಉದ್ಘಾಟಿಸಿದರು. ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ವೈ ಪಟ್ಟಾಭಿರಾಮ್ ಭಟ್ ಮರೂರು, ಸದಸ್ಯರಾದ ಪತ್ರಕರ್ತ ಕೆ.ಸಂಜೀವ ಆರ್ಡಿ, ಉಷಾ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ, ಕೃಷ್ಣ ನಾಯ್ಕ ಕೊಂಜಾಡಿ, ಯಶೋದಾ, ಕುಮಾರ್, ಶಿಕ್ಷಕ ವೃಂದವರು, ಹಳೇ ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.