ಸಂಸ್ಕಾರ ಬೆಳೆಸಿದ ಪೂರ್ವಜರ ಕಾರ್ಯ ಸ್ಮರಣೀಯ

Spiritual, discourse, basavanbagevadi, kudalasangama authority, sravana masa
ಬಸವನಬಾಗೇವಾಡಿ ಪಟ್ಟಣದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಕಾಲ ಬಸವಾದಿ ಶರಣರ ವಚನದರ್ಶನ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ಶ್ರೀಗಳು, ಗಣ್ಯರು ಚಾಲನೆ ನೀಡಿದರು. ಮಹಾಂತ ಶ್ರೀಗಳು, ಈರಣ್ಣ ಪಟ್ಟಣಶೆಟ್ಟಿ, ಸಿದ್ದಲಿಂಗ ಶ್ರೀಗಳು, ಎಂ.ಜಿ.ಆದಿಗೊಂಡ ಇತರರಿದ್ದರು.
Published on

ಬಸವನಬಾಗೇವಾಡಿ: ಅಣ್ಣಬಸವಣ್ಣನವರ ಸ್ಮರಣೆ ಇದ್ದಲ್ಲಿ ಶಾಂತಿ ನೆಮ್ಮದಿ, ಆನಂದ, ಅರಿವು, ಸಮೃದ್ಧಿ ಇರುತ್ತದೆ ಎಂದು ಲಿಂಗಸೂರಿನ ಮುದಗಲ್ ತಿಮ್ಮಾಪುರದ ಕಲ್ಯಾಣ ಆಶ್ರಮದ ಪ್ರವಚನಕಾರ- ಮಹಾಂತೇಶ್ವರಮಠದ ಮಹಾಂತ ಶ್ರೀಗಳು ಹೇಳಿದರು.

ಪಟ್ಟಣದ ಕೂಡಲಸಂಗಮ ಪ್ರಾಧಿಕಾರದ (ಸಿಬಿಎಸ್‌ಇ) ಶಾಲಾ ಆವರಣದಲ್ಲಿರುವ ನಂದೀಶ್ವರ ರಂಗ ಮಂದಿರದಲ್ಲಿ ಕೂಡಲ ಸಂಗಮ ಪ್ರಾಧಿಕಾರ, ಬಸವೇಶ್ವರ ಜಾತ್ರಾ ಉತ್ಸವ ಸಮಿತಿ ಹಾಗೂ ಬಸವ ಸಮಿತಿ, ರಾಷ್ಟ್ರೀಯ ಬಸವ ಸೈನ್ಯದ ನೇತೃತ್ವದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಕಾಲ ಬಸವಾದಿ ಶರಣರ ವಚನದರ್ಶನ ಆಧ್ಯಾತ್ಮಿಕ ಪ್ರವಚನ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜ್ಯ, ರಾಷ್ಟ್ರದ ನಾಯಕರು ಬಸವತತ್ವ ಆಧಾರದ ಮೇಲೆ ನಡೆದುಕೊಂಡರೆ ಸಂಪತ್ತು ಹೆಚ್ಚುತ್ತದೆ. ನಮ್ಮ ದೇಶದ ಸಂಸ್ಕೃತಿ-ಸಂಸ್ಕಾರ ಪವಿತ್ರವಾಗಿದ್ದು, ಅದನ್ನು ಕಟ್ಟಿ ಬೆಳೆಸಿದ ಶ್ರೇಯಸ್ಸು ನಮ್ಮ ಪೂರ್ವಜರಿಗೆ ಸಲ್ಲುತ್ತದೆ ಎಂದರು.

ಪಿಕಾರ್ಡ್ ಬ್ಯಾಂಕ್, ಬಸವ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಉದ್ಘಾಟಿಸಿ ಮಾತನಾಡಿ, ಮೂಲನಂದೀಶ್ವರ (ಬಸವೇಶ್ವರ) ಜಾತ್ರೆ ಐತಿಹಾಸಿಕ ಪುರಾಣ ಪ್ರಸಿದ್ಧಿಗೆ ಪೂರಕವಾಗಿದೆ. ಯಾವುದೇ ಜಾತಿ, ಧರ್ಮ, ಮತ, ಪಂಥವೆನ್ನದೆ ಎಲ್ಲರೂ ಒಗ್ಗಟಾಗಿ ಜಾತ್ರಾ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರವಚನ ಆಲಿಸಲು ಬಸವ ಭಕ್ತರು ಆಗಮಿಸಿದಾಗ ಮೆರುಗು ಬರುತ್ತದೆ ಎಂದು ಹೇಳಿದರು.

ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಶ್ರೀಗಳು, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಎಂ.ಜಿ.ಆದಿಗೊಂಡ ಮಾತನಾಡಿದರು. ಶಿವಾನಂದ ಈರಕಾರ ಮುತ್ಯಾ, ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಬಸವರಾಜ ಪೂಜಾರಿ, ಸಂಗಪ್ಪ ಅಡಗಿಮನಿ, ಶಿವನಗೌಡ ಬಿರಾದಾರ, ಬಿ.ಕೆ.ಕಲ್ಲೂರ, ಬಸಣ್ಣ ದೇಸಾಯಿ, ಬಸವರಾಜ ಹಾರಿವಾಳ, ಸುರೇಶಗೌಡ ಪಾಟೀಲ, ಬಸವರಾಜ ಗೊಳಸಂಗಿ, ಚಂದ್ರಶೇಖರಗೌಡ ಪಾಟೀಲ, ಸಂಗಣ್ಣ ಕಲ್ಲೂರ, ಸುಭಾಸ ಚಿಕ್ಕೊಂಡ, ಶಂಕರಗೌಡ ಪಾಟೀಲ, ಶ್ರೀಕಾಂತ ಕೊಟ್ರಶೆಟ್ಟಿ, ಸುಭಾಸ ಗಾಯಕವಾಡ, ವಿಶ್ವನಾಥ ಹಿರೇಮಠ, ಮನ್ನಾನ ಶಾಬಾದಿ, ಶ್ರೀಧರ ಕುಂಬಾರ ಇತರರಿದ್ದರು.
ಶರಣು ಬಸ್ತಾಳ ಪ್ರಾರ್ಥಿಸಿದರು. ಶಂಕರಗೌಡ ಬಿರಾದಾರ ಸ್ವಾಗತಿಸಿದರು. ಎಚ್.ಬಿ.ಬಾರಿಕಾಯಿ ನಿರೂಪಿಸಿದರು. ರವಿ ರಾಠೋಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net