

Spider Man In mumbai: ಮುಂಬೈನಲ್ಲಿ ನಿರಂತರ ಮಳೆಯಿಂದಾಗಿ ಅನೇಕ ರಸ್ತೆಗಳು ಜಲಾವೃತವಾಗಿವೆ. ಮುಂಬೈ ನಗರದ ರಸ್ತೆಯಲ್ಲಿನ ನೀರನ್ನು ಸ್ಪೈಡರ್ ಮ್ಯಾನ್ ವೇಷ ಧರಿಸಿದ ವ್ಯಕ್ತಿಯೊಬ್ಬ ಮಾಪ್ನೊಂದಿಗೆ ತೆರವುಗೊಳಿಸಲು ಪ್ರಯತ್ನಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.
ಈ ವಿಡಿಯೋದಲ್ಲಿ, ನಗರದಲ್ಲಿ ಭಾರೀ ಮಳೆಯ ಸಮಯದಲ್ಲಿ ನೀರು ತುಂಬಿದ ಬೀದಿಗಳನ್ನು ತೆರವುಗೊಳಿಸಲು ಸ್ಪೈಡರ್ ಮ್ಯಾನ್ ವೇಷಭೂಷಣದಲ್ಲಿರುವ ವ್ಯಕ್ತಿ ಪ್ರಯತ್ನಿಸುತ್ತಿರುವುದನ್ನು ನಾವು ನೋಡಬಹುದು. ಇದರಿಂದ ಪ್ರೇರಪಿತರಾಗಿರುವ ಸಾಮಾಜಿಕ ಜಾಲತಾಣ ಬಳಕೆದಾರರು ಸೂಪರ್ ಹೀರೋನ ಹೊಸ ಪಾತ್ರದ ಬಗ್ಗೆ ಮೀಮ್ಸ್ ಮತ್ತು ಜೋಕ್ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
ವಿಡಿಯೋದಲ್ಲೇನಿದೆ..?
ಇದಕ್ಕೆ ಒಬ್ಬ ಬಳಕೆದಾರ ನಿಜವಾದ ಸ್ಪೈಡರ್ಮ್ಯಾನ್ ಆಫ್ ಮುಂಬೈ ಎಂದು ಬರೆದರೆ, ಇನ್ನೊಬ್ಬರು ಸ್ಪೈಡರ್ಮ್ಯಾನ್ ಮನೆಯಿಂದ ದೂರ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ ನೀವು ಬಕೆಟ್ ತೆಗೆದುಕೊಂಡು ಹೋಗಿದ್ದರೆ ಚೆನ್ನಾಗಿರುತ್ತಿತ್ತು ಎಂದಿದ್ದಾನೆ. ಮುಂಬೈ ಜನರ ಮುಖದಲ್ಲಿ, ಸ್ಪೈಡರ್ ಮ್ಯಾನ್ನ ಹೊಸ ಸಾಹಸ ಮಳೆಯ ತಾಪತ್ರಯದ ನಡುವೆ ಸ್ವಲ್ಪ ಖುಷಿ ತಂದಿದೆ.(ಏಜೆನ್ಸೀಸ್)