ಕಾಡಿನಲ್ಲಿ ಸಿಕ್ಕ ಒಂದು ದೊಡ್ಡ ಬಟ್ಟಲಿನಲ್ಲಿತ್ತು ಐದನೇ ಶತಮಾನದ 222 ಗ್ರಾಂ ಚಿನ್ನದ ಹಾರ! Gold Necklace

Gold Necklace
Published on

Gold Necklace : ಯುವಕರ ಗುಂಪೊಂದು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಿಧಿಯನ್ನು ಪತ್ತೆಹಚ್ಚಿದೆ. ರಜೆಯ ಮೋಜಿಗಾಗಿ ಪೋಲೆಂಡ್‌ನ ಗ್ರೋಡ್ಜಿಕ್ ಅರಣ್ಯಕ್ಕೆ ಯುವಕರು ನಡೆಸಿದ ಪ್ರವಾಸವು ಇದೀಗ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗೆ ಉತ್ತೇಜನ ನೀಡಿದೆ.

ಪ್ರವಾಸಕ್ಕೆ ಹೋದ ಯುವಕರು ಇತಿಹಾಸ ಸಂಶೋಧಕರಾಗಿದ್ದು, ಜೂನ್‌ನಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಕೇವಲ ಐದು ವಾರಗಳಲ್ಲಿ, ಆ ಯುವಕರು ಅನೇಕ ಕಲಾಕೃತಿಗಳನ್ನು ಹುಡುಕಲು ಪ್ರಾರಂಭಿಸಿದರು. ಅಂದಹಾಗೆ, ಆ ಯುವಕರು ಪೊಲೆಂಡ್​ನ ಡೆನಾರ್ ಕಾಲಿಸ್ಜ್ ಗ್ರೂಪ್​ನವರು. ಕಾಲಿಸ್ಜ್‌ನಲ್ಲಿರುವ ವಾಯುವೊಡೆಶಿಪ್ ಪರಿಸರ ಸಂರಕ್ಷಣಾ ಕಚೇರಿಯ ಸಹಕಾರದೊಂದಿಗೆ, ಬಿಯರ್ಸ್ಕ್​ನ ಗ್ರೋಡ್ಜಿಕ್ ಅರಣ್ಯದಲ್ಲಿ ತಮ್ಮ ಪರಿಶೋಧನೆಯನ್ನು ನಡೆಸಿತು.

ಅವರು ಮೊದಲು ರೋಮನ್ ಅವಧಿಯಲ್ಲಿ ಸಮಾಧಿ ಸ್ಥಳವನ್ನು ಕಂಡುಹಿಡಿದರು. ಒಂದು ಸಮಾಧಿಯಲ್ಲಿ, ಯೋಧನ ಅವಶೇಷಗಳನ್ನು ಮತ್ತು ಅವನು ಬಳಸಿದ ಆಯುಧಗಳನ್ನು ಕಂಡುಕೊಂಡರು. ಇದಾದ ಕೆಲವೇ ದಿನಗಳಲ್ಲಿ, 11ನೇ ಶತಮಾನದಲ್ಲಿ ಚಲಾವಣೆಯಲ್ಲಿದ್ದ ಹಲವಾರು ನಾಣ್ಯಗಳನ್ನು ಮಣ್ಣಿನ ಜಾಡಿಯಲ್ಲಿ ಕಂಡುಕೊಂಡರು.

ಬಳಿಕ ನಾಣ್ಯಗಳಿದ್ದ ಜಾಡಿಯನ್ನು ಕಾಲಿಸ್ಜ್ ವಿಶ್ವವಿದ್ಯಾಲಯಕ್ಕೆ ತೆಗೆದುಕೊಂಡು ಹೋದರು. ಅಲ್ಲಿ, ನಾಣ್ಯಗಳನ್ನು ಎಣಿಕೆ ಮಾಡಲಾಯಿತು. ಜೂನ್ ಅಂತ್ಯದಲ್ಲಿ, ಎರಡನೇ ಜಾಡಿ ಕೂಡ ಕಂಡುಬಂದಿದ್ದು, ಅದರಲ್ಲೂ ನಾಣ್ಯಗಳಿದ್ದವು. ಆದರೆ ಆ ಯುವಕರಿಗೆ ಅಷ್ಟೇನೂ ಆಶ್ಚರ್ಯವಾಗಲಿಲ್ಲ.

ಜುಲೈ 12 ರಂದು ಯುವಕರು ಬೃಹತ್ ನಿಧಿಯನ್ನು ಕಂಡುಕೊಂಡರು. ಗುಂಪಿನ ಭಾಗವಾಗಿದ್ದ ಮ್ಯಾಥ್ಯೂಸ್ ಎಂಬುವರು ಅದನ್ನು ಕಂಡುಹಿಡಿದರು. ಆತ ಹೊಳೆಯುವ ವಸ್ತುವನ್ನು ಗಮನಿಸಿದಾಗ, ಮೊದಲು ಅದು ಬಳೆ ಎಂದು ಭಾವಿಸಿದನು. ಆದರೆ, ಹತ್ತಿರದಿಂದ ನೋಡಿದಾಗ ಅಸಲಿ ಸತ್ಯ ಹೊರಬಂದಿದೆ. ಅದು 222 ಗ್ರಾಂ ತೂಕದ ಚಿನ್ನದ ಹಾರವಾಗಿತ್ತು.

ಈ ಚಿನ್ನದ ಹಾರವನ್ನು ಐದನೇ ಶತಮಾನದಲ್ಲಿ ವಿನ್ಯಾಸಗೊಳಿಸಲಾಗಿತ್ತು. ಹಾರವನ್ನು ದೊಡ್ಡ ಜಾಡಿಯೊಳಗೆ ಪತ್ತೆಹಚ್ಚಲಾಯಿತು. ಅಚ್ಚರಿಯ ಸಂಗರಿ ಏನೆಂದರೆ, ಚಿನ್ನದ ಹಾರದ ಕೊಕ್ಕೆ ಯಾವುದೇ ರೀತಿಯಲ್ಲೂ ಹಾನಿಯಾಗಿರಲಿಲ್ಲ. ನಂತರ, ಚಿನ್ನದ ಹಾರದ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆದಿದ್ದು, ಇದು ಪೋಲೆಂಡ್‌ನ ಕೆಲವು ಭಾಗಗಳಲ್ಲಿ ಸ್ಲಾವ್‌ಗಳಾಗಿ ವಾಸಿಸುತ್ತಿದ್ದ ಜರ್ಮನಿಕ್ ಜನರಾದ ಗೋಥಿಕ್ ಜನರು ಬಳಸುತ್ತಿದ್ದ ಹಾರ ಎಂದು ತಿಳಿದುಬಂದಿದೆ.

ಚಿನ್ನದ ನೆಕ್ಲೇಸ್​ ಅನ್ನು ಕಾಲಿಸ್ಜ್ ಪ್ರಾದೇಶಿಕ ವಸ್ತುಸಂಗ್ರಹಾಲಯಕ್ಕೆ ವರ್ಗಾಯಿಸಲಾಗುತ್ತದೆ. ಅಲ್ಲಿ ಅಂತಿಮವಾಗಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುವುದು ಎಂದು ಸ್ಥಳೀಯ ಆಡಳಿತ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net