ವಾರದಲ್ಲಿ 2 ಬಾರಿ ಸ್ಪೆಷಲ್ ರೈಲು ಸಂಚಾರ ಮುಂದುವರಿಕೆ

images
Published on


ಮಂಗಳೂರು : ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಮಂಗಳೂರು ಜಂಕ್ಷನ್-ಕೊಚುವೇಲಿ ಮಧ್ಯೆ ಹಾಗೂ ಉಧ್ನಾ ಜಂಕ್ಷನ್-ಮಂಗಳೂರು ಜಂಕ್ಷನ್ ಮಧ್ಯೆ ವಾರದಲ್ಲಿ ಎರಡು ಬಾರಿ ಸ್ಪೆಷಲ್ ರೈಲು ಓಡಾಟ ಮುಂದುವರಿಯಲಿದೆ.
*ಮಂಗಳೂರು ಜಂಕ್ಷನ್-ಕೊಚುವೇಲಿ ಬೈ ವೀಕ್ಲಿ ಸ್ಪೆಷಲ್ ರೈಲು (ನಂ.06041)ಅ.3ರಿಂದ ನ.2ರವರೆಗೆ ಗುರುವಾರ ಮತ್ತು ಶನಿವಾರ ರಾತ್ರಿ 7.30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಮರುದಿನ ಬೆಳಗ್ಗೆ 8ಕ್ಕೆ ಕೊಚುವೇಲಿ ತಲುಪಲಿದೆ. (10 ಟ್ರಿಪ್)
*ಕೊಚುವೇಲಿ -ಮಂಗಳೂರು ಜಂಕ್ಷನ್ ಬೈ ವೀಕ್ಲಿ ಸ್ಪೆಷಲ್ ರೈಲು (ನಂ.06042)ಅ.4ರಿಂದ ನ.3ರವರೆಗೆ ಶುಕ್ರವಾರ ಮತ್ತು
ಭಾನುವಾರ ಸಾಯಂಕಾಲ 6.40ಕ್ಕೆ ಕೊಚುವೇಲಿಯಿಂದ ಹೊರಟು ಮರುದಿನ ಬೆಳಗ್ಗೆ 7ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. (10 ಟ್ರಿಪ್)
*ಉಧ್ನಾ ಜಂಕ್ಷನ್-ಮಂಗಳೂರು ಜಂಕ್ಷನ್ ಬೈ ವೀಕ್ಲಿ ಸ್ಪೆಷಲ್ ರೈಲು (ನಂ.09057)ನ.3ರಿಂದ 2025ರ ಜ.8ರವರೆಗೆ ಬುಧವಾರ ಮತ್ತು ಭಾನುವಾರ ರಾತ್ರಿ 8ಕ್ಕೆ ಉಧ್ನಾ ಜಂಕ್ಷನ್‌ನಿಂದ ಹೊರಟು ಮರುದಿನ ರಾತ್ರಿ 7.45ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
* ಮಂಗಳೂರು ಜಂಕ್ಷನ್-ಉಧ್ನಾ ಜಂಕ್ಷನ್ ಬೈ ವೀಕ್ಲಿ ಸ್ಪೆಷಲ್ ರೈಲು (ನಂ.09058) ನ.4ರಿಂದ 2025ರ ಜ.9ರವರೆಗೆ ಸೋಮವಾರ ಮತ್ತು ಗುರುವಾರ ರಾತ್ರಿ 10.10ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಮರುದಿನ ರಾತ್ರಿ 11.05ಕ್ಕೆ ಉಧ್ನಾ ಜಂಕ್ಷನ್ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.
......................

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net