ಮಂಜನಾಡಿ ಮಹಾಶಕ್ತಿ ಕೇಂದ್ರದಿಂದ ವಿಶೇಷ ಪೂಜೆ

modi
Published on

ಉಳ್ಳಾಲ: ನರೇಂದ್ರ ಮೋದಿಯವರ 74ನೇ ಹುಟ್ಟುಹಬ್ಬದ ಪ್ರಯುಕ್ತ ತಲಪಾಡಿ ದೇವಿಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಧೃಡ ಆರೋಗ್ಯ, ದೀರ್ಘ ಆಯುಷ್ಯ ಹಾಗೂ ದೇಶದ ಸುಭಿಕ್ಷೆಗಾಗಿ ಪ್ರಾರ್ಥಿಸಲಾಯಿತು.

ಸಹಕಾರಿ ಪ್ರಕೋಷ್ಠ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ್ ಆಳ್ವ ಸಾಂತ್ಯಗುತ್ತು, ಮಂಡಲ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಮಂಜನಾಡಿ ಮಹಾ ಶಕ್ತಿಕೇಂದ್ರ ಅಧ್ಯಕ್ಷ ರಾಜೇಶ್ ಗುಡ್ಡಮನೆ, ಕಾರ್ಯದರ್ಶಿ ನಿತ್ಯಾನಂದ ಭಂಡಾರಿ, ಎಸ್ಸಿ ಮೋರ್ಚಾ ಮಂಡಲ ಅಧ್ಯಕ್ಷ ವರುಣ್‌ರಾಜ್ ತಲಪಾಡಿ, ತಲಪಾಡಿ ಶಕ್ತಿಕೇಂದ್ರ ಪ್ರಮುಖ್ ಸತ್ಯರಾಜ್ ತಲಪಾಡಿ, ಮಂಡಲ ರೈತ ಮೋರ್ಚಾ ಸದಸ್ಯ ಕೇಶವ ಮಂಡೆಕಟ್ಟ, ಪಂಚಾಯಿತಿ ಸದಸ್ಯ ನವೀನ್ ಆಳ್ವ ದೇವಿನಗರ, ಗ್ರಾ.ಪಂ ಮಾಜಿ ಸದಸ್ಯ ಗೋಪಾಲಕೃಷ್ಣ ಮೇಲಾಂಟ, ಬೂತ್ ಅಧ್ಯಕ್ಷ ಪುನೀತ್ ದೇವಿನಗರ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net