ಪ್ರಜ್ವಲ್‌ ರೇವಣ್ಣ ಕೇಸ್‌: ವಿಶೇಷ ಸರ್ಕಾರಿ ಅಭಿಯೋಜಕರಾಗಿ ಅಂಕೋಲಾದ ಅಶೋಕ ನಾಯ್ಕ

Ashok-Naik.
Published on

ಕಾರವಾರ: ಪ್ರಜ್ವಲ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಹೆಚ್ಚುವರಿ ಸರ್ಕಾರಿ ಅಭಿಯೋಜಕರಾಗಿ ಅಂಕೋಲಾ ಮೂಲದ ಅಶೋಕ ಎನ್.ನಾಯ್ಕ ಹಾಗೂ ಜಯನಾ ಕೊಠಾರಿ ಅವರನ್ನು ನಿಯೋಜಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ರಚಿಸಿದ ವಿಶೇಷ ತನಿಖಾ ತಂಡವು ದಾಖಲಿಸಿದ ಮತ್ತು ಮುಂದೆ ದಾಖಲಿಸಲಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ಮತ್ತು ಜಿಲ್ಲಾ ಸೆಶನ್ಸ್ ನ್ಯಾಯಾಲಯಗಳಿಗೆ ಹಾಜರಾಗಿ ಪ್ರಕರಣ ನೇಮಿಸಲು ಇವರನ್ನು ನಿಯುಕ್ತಿಗೊಳಿಸಿ, ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜಿ.ಶ್ಯಾಮ ಹೊಳ್ಳ ಆದೇಶ ಹೊರಡಿಸಿದ್ದಾರೆ. ಅಶೋಕ ನಾಯ್ಕ ಇತ್ತೀಚೆಗೆ ರಾಜ್ಯ ಸರ್ಕಾರದ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಪ್ರಮುಖ ಕ್ರಿಮಿನಲ್ ಪ್ರಕರಣಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net