ಕಾರ್ಕಳದಲ್ಲಿ ವಿಶೇಷ ಉಪನ್ಯಾಸ

sahithya sangha
ಸಾಹಿತ್ಯ ಸಂಘ
Published on

ಕಾರ್ಕಳ: ಶ್ರೇಷ್ಠ ವಿಮರ್ಶಕ ನಿರಂಜನ ಅವರ 100ನೇ ವರ್ಷಾಚರಣೆ ಹಿನ್ನೆಯಲ್ಲಿ ಕಾರ್ಕಳ ಸಾಹಿತ್ಯ ಸಂಘ ವತಿಯಿಂದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ವಿಶೇಷ ಉಪನ್ಯಾಸ ನಡೆಯಿತು. ಮಂಗಳೂರು ವಿಶ್ವವಿದ್ಯಾಲಯ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ವಿಶೇಷ ಉಪನ್ಯಾಸ ನೀಡಿದರು. ಗೌರವಾಧ್ಯಕ್ಷ ಆರ್.ತುಕಾರಾಮ ನಾಯಕ್, ಕೋಶಾಧಿಕಾರಿ ಎಸ್. ನಿತ್ಯಾನಂದ ಪೈ, ಪ್ರಧಾನ ಕಾರ್ಯದರ್ಶಿ ಬಿ ಪದ್ಮನಾಭ ಗೌಡ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಕೆ.ಪಿ.ಶೆಣೈ ಸ್ವಾಗತಿಸಿದರು. ಕಾರ್ಯದರ್ಶಿ ಬಿ.ಕೆ.ಈಶ್ವರಮಂಗಲ ವಂದಿಸಿದರು. ಶೈಲಜಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ವೈ ಅನಂತ ಪದ್ಮನಾಭ ಭಟ್ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net