More

    ಆಸ್ಪತ್ರೆಯಲ್ಲಿನ ಎಸ್​ಪಿ ಬಾಲಸುಬ್ರಮಣ್ಯಂ ಸ್ಥಿತಿ ಹೇಗಿದೆ ನೋಡಿ; ಚಿಕಿತ್ಸೆಯ ಫೋಟೋ ವೈರಲ್​

    ಕಳೆದ ವಾರವಷ್ಟೇ ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಗಾಯಕ ಎಸ್​ಪಿ ಬಾಲಸುಬ್ರಮಣ್ಯಂ (74) ಆರೋಗ್ಯ ಸ್ಥಿತಿ ಗಂಭೀರವಾಗಿದೆಯೆಂದು ಆಸ್ಪತ್ರೆ ವೈದ್ಯರು ತಿಳಿಸಿದ್ದರು. ಇದೀಗ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜತೆಗೆ ಚಿಕಿತ್ಸೆಯಲ್ಲಿರುವ ಫೋಟೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್​ ಆಗುತ್ತಿದೆ.

    ಇದನ್ನೂ ಓದಿ: ‘ರಾಕಿಂಗ್​ಸ್ಟಾರ್​’ ಯಶ್​ ಕಡೆಯಿಂದ ಮತ್ತೊಂದು ಹೊಸ ಸುದ್ದಿ…

    ಚೆನ್ನೈನ ಎಂಜಿಎಂ ಹೆಲ್ತ್​ಕೇರ್​ನಲ್ಲಿ ಆಗಸ್ಟ್ 5ರಂದು ಕರೊನಾ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ ಎಸ್​ಪಿಬಿ ಅವರನ್ನು ದಾಖಲಿಸಲಾಗಿತ್ತು. ಅಂದಿನಿಂದ ವಿಶೇಷ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಿರುವಾಗಲೇ ಗುರುವಾರ ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದರಿಂದ ಶುಕ್ರವಾರ ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಮಾಡಲಾಗಿತ್ತು. ಇದೀಗ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದು, ಸ್ಪಂದಿಸುತ್ತಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ.

    ಆಸ್ಪತ್ರೆಯಲ್ಲಿನ ಎಸ್​ಪಿ ಬಾಲಸುಬ್ರಮಣ್ಯಂ ಸ್ಥಿತಿ ಹೇಗಿದೆ ನೋಡಿ; ಚಿಕಿತ್ಸೆಯ ಫೋಟೋ ವೈರಲ್​

    ಕಳೆದ ಎರಡು ದಿನಗಳಿಂದ ಅಪ್ಪನ ಆರೋಗ್ಯದಲ್ಲಿ ತುಂಬ ಏರುಪೇರಾಗಿತ್ತು. ಇದೀಗ ಚೇತರಿಕೆ ಕಂಡಿದೆ. ಶುಕ್ರವಾರ ರಾತ್ರಿಯಿಂದ ಸ್ಪಂದಿಸುತ್ತಿದ್ದಾರೆ. ಆರಂಭದಲ್ಲಿ ನಮಗೂ ಗಾಬರಿಯಾಗಿತ್ತು. ಅವರ ಚೇತರಿಕೆಗೆ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ’ ಎಂದಿದ್ದಾರೆ ಎಸ್​ಪಿ ಬಾಲಸುಬ್ರಮಣ್ಯಂ ಪುತ್ರ ಎಸ್​ಪಿ ಚರಣ್​.

    ಇದನ್ನೂ ಓದಿ: PHOTOS: ತಾರೆಯರ ಕಲರ್​ಫುಲ್​ ಸ್ವಾತಂತ್ರ್ಯೋತ್ಸವ

    ಇನ್ನು ಆಗಸ್ಟ್ 5ರಂದು ಕರೊನಾ ಸೋಂಕು ತಗುಲಿರುವ ಬಗ್ಗೆ ಮಾಹಿತಿ ನೀಡಿದ್ದ ಎಸ್​ಪಿಬಿ, ಶೀಘ್ರದಲ್ಲಿ ಗುಣಮುಖನಾಗಿ ಆಚೆ ಬರುವೆ ಎಂದು ವಿಡಿಯೋ ಮಾಡಿ ಫೇಸ್​ಬುಕ್ನಲ್ಲಿ ಶೇರ್​ ಮಾಡಿಕೊಂಡಿದ್ದರು (ಏಜೆನ್ಸೀಸ್​)

    ಕಣಕಣದಲ್ಲೂ ದೇಶಭಕ್ತಿ ಜಾಗೃತವಾಗಿರಬೇಕು ಅಂತಾರೆ ದರ್ಶನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts